ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ಮಹಿಳೆಯರು ಪುರುಷರಲ್ಲಿನ ನಾಲ್ಕು ಪ್ರಮುಖ ಗುಣಗಳಿಗೆ ಆಕರ್ಷಿತರಾಗುತ್ತಾರೆ. ಪ್ರಮುಖ ಮತ್ತು ವಿಶೇಷ ಗುಣಗಳನ್ನು ಹೊಂದಿರುವ ಪುರುಷರನ್ನು ಮಹಿಳೆಯರು ತಮ್ಮ ಸಂಗಾತಿಯಾಗಬೇಕೆಂದು ಬಯಸುತ್ತಾರೆ.
ಆಚಾರ್ಯ ಚಾಣಕ್ಯರು ಆರ್ಥಿಕ ನೀತಿಗಳ ಜೊತೆಯಲ್ಲಿ ನೈತಿಕ ಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಚಾಣಕ್ಯರು ಹೇಳಿದ್ದ ಅಂದಿನ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಚಾಣಕ್ಯರು ತಮ್ಮ ನೀತಿಗಳಲ್ಲಿ ಮಹಿಳೆಯರು ಇಷ್ಟಪಡುವ ಪುರುಷರಲ್ಲಿನ ನಾಲ್ಕು ಗುಣಗಳ ಬಗ್ಗೆ ಹೇಳಿದ್ದಾರೆ.
26
ಮಹಿಳೆಯರು ಇಷ್ಟಪಡುವ ಗುಣಗಳು
ಪುರುಷರಲ್ಲಿರುವ ನಾಲ್ಕು ಗುಣಗಳಿದ್ರೆ ಮಹಿಳೆಯರು ಆಕರ್ಷಿತರಾಗುತ್ತಾರೆ. ಇಂತಹ ಗುಣಗಳನ್ನು ಹೊಂದಿರುವ ಪುರುಷನ್ನು ಹೆಚ್ಚು ಇಷ್ಟಪಡುವ ಮಹಿಳೆಯರು, ಇವರು ತಮ್ಮೊಂದಿಗೆ ಇರಬೇಕೆಂದು ಕನಸು ಸಹ ಕಾಣುತ್ತಾರೆ. ಮಹಿಳೆಯರಿಗೆ ಇಷ್ಟವಾಗುವ ಗುಣಗಳ ಕುರಿತ ಮಾಹಿತಿ ಇಲ್ಲಿದೆ.
36
1.ಪ್ರಾಮಾಣಿಕತೆ
ಮಹಿಳೆಯರು ಯಾವಾಗಲೂ ಪ್ರಾಮಾಣಿಕರಾಗಿರುವ ಪುರುಷರನ್ನು ಹೆಚ್ಚು ಇಷ್ಟಪಡುತ್ತಾರೆ. ಇಂತಹ ಪ್ರಾಮಾಣಿಕತೆಯುಳ್ಳ ವ್ಯಕ್ತಿಯೇ ಸಂಗಾತಿಯಾಬೇಕೆಂದು ಕನಸು ಕಾಣುತ್ತಾರೆ. ಹಾಗೆಯೇ ತನ್ನ ಸುತ್ತಲಿರುವ ಪುರುಷರು ಅಂದ್ರೆ ಅಣ್ಣ-ತಮ್ಮ, ತಂದೆ ಹೀಗೆ ಎಲ್ಲರೂ ಪ್ರಾಮಾಣಿಕರಾಗಿದ್ರೆ ಮಾತ್ರ ಅವರೊಂದಿಗಿನ ಸಾಮೀಪ್ಯ ಮುಂದುವರಿಸಿಕೊಂಡು ಹೋಗುತ್ತಾರೆ.
ತಮ್ಮ ಮಾತುಗಳನ್ನು ಸೂಕ್ಷ್ಮ ಮತ್ತು ಎಚ್ಚರಿಕೆಯಿಂದ ಆಲಿಸುವ ಪುರುಷರತ್ತ ಮಹಿಳೆಯರು ಬಹುಬೇಗ ಆಕರ್ಷಿತರಾಗುತ್ತಾರೆ. ಪ್ರತಿಯೊಬ್ಬ ಮಹಿಳೆ ತನ್ನ ಸಂಗಾತಿ ತಾನು ಹೇಳುವ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳಬೇಕು ಮತ್ತು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಬಯಸುತ್ತಾರೆ.
ತನ್ನ ಸಂಗಾತಿ ಯಾವತ್ತಿಗೂ ಸುಳ್ಳು ಹೇಳಬಾರದು ಎಂದು ಮಹಿಳೆಯರು ಬಯಸುತ್ತಾರೆ. ನಡೆದಿರೋದನ್ನು ಇದ್ದಂತೆಯೇ ಹೇಳಬೇಕು. ಮುಚ್ಚುಮರೆ ಇಲ್ಲದೇ ಮಾತನಾಡಬೇಕು ಎಂದು ಮಹಿಳೆಯರು ಕನಸು ಕಾಣುತ್ತಾರೆ. ಪ್ರಾಮಾಣಿಕತೆ ಜೊತೆ ತನ್ನ ಸಂಗಾತಿ ಸತ್ಯವಂತನಾಗಬೇಕೆಂದು ಮಹಿಳೆಯರು ಹೇಳುತ್ತಾರೆ.
ಒಳ್ಳೆಯ ನಡವಳಿಕೆ ಸಂಬಂಧದಲ್ಲಿ ಮಾಧುರ್ಯವನ್ನುಂಟು ಮಾಡುತ್ತದೆ. ಸಂಗಾತಿ ಸಮಾಜದಲ್ಲಿ ಒಳ್ಳೆಯ ನಡತೆಯಿಂದ ಗುರುತಿಸಿಕೊಳ್ಳಬೇಕು. ಹಾಗಾಗಿ ಮಹಿಳೆಯರು ಮೊದಲು ಪುರುಷರಲ್ಲಿನ ನಡವಳಿಕೆಯನ್ನು ಗಮನಿಸುತ್ತಾರೆ.