ಬೆಳಿಗ್ಗೆ ಎದ್ದ ತಕ್ಷಣ ಈ ಮಂತ್ರ ಹೇಳಿ: ನಿಮ್ಮ ದಿನ ಸಂತಸದಿಂದ ಕೂಡಿರಲಿದೆ

Published : Jun 13, 2022, 06:30 PM IST

ಧರ್ಮಗ್ರಂಥಗಳಲ್ಲಿ, ದಿನವನ್ನು ಒಳ್ಳೆ ಕೆಲಸದೊಂದಿಗೆ ಪ್ರಾರಂಭಿಸಲು ಸೂಚಿಸಲಾಗುತ್ತೆ. ನೀವು ಬೆಳಿಗ್ಗೆ ಎದ್ದು ಉತ್ತಮ ಕೆಲಸ ಮಾಡಿದರೆ, ಮನಸ್ಸು ಮತ್ತು ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತೆ. ಇದು ದಿನವಿಡೀ ಕೆಲಸ ಮಾಡಲು ಶಕ್ತಿ ನೀಡುತ್ತೆ. ಆದುದರಿಂದ ಬೆಳಗ್ಗೆ ಎದ್ದು ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತೆ. ಆ ಕೆಲಸಗಳು ಯಾವುವು ನೋಡೋಣ…  

PREV
16
ಬೆಳಿಗ್ಗೆ ಎದ್ದ ತಕ್ಷಣ ಈ ಮಂತ್ರ ಹೇಳಿ: ನಿಮ್ಮ ದಿನ ಸಂತಸದಿಂದ ಕೂಡಿರಲಿದೆ

ಬೆಳಿಗ್ಗೆ ಏನನ್ನು ನೋಡಬಾರದು?:
ಬೆಳಿಗ್ಗೆ ಎದ್ದು ತಕ್ಷಣ ನಿಮ್ಮ ಮುಖ ನೋಡಬಾರದು ಎಂಬುದು ನಂಬಿಕೆಯಾಗಿದೆ. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.  ಆದುದರಿಂದ ಬೆಳಗ್ಗೆ ಎದ್ದ ತಕ್ಷಣ ಕನ್ನಡಿ(Mirror) ನೋಡಲೇಬೇಡಿ. ಇದರಿಂದ ದಿನದಲ್ಲಿ ಕೆಟ್ಟದಾಗಬಹುದು. 

26

ಬೆಳಿಗ್ಗೆ ಕಾಡು ಪ್ರಾಣಿಗಳ(Wild animals) ಚಿತ್ರ ನೋಡಿ ದಿನ ಪ್ರಾರಂಭಿಸಬಾರದು. ಇದು ವಿವಾದದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಯಾಕೆಂದರೆ ಕಾಡು ಪ್ರಾಣಿಗಳು ಕ್ರೂರತೆಯ ಸಂಕೇತ, ಇದನ್ನು ನೋಡುವುದರಿಂದ ಕ್ರೂರತೆ ಹೆಚ್ಚುತ್ತೆ ಎನ್ನಲಾಗುತ್ತೆ.

36

ನೀವು ಬೆಳಿಗ್ಗೆ ಎದ್ದು ನಿಮ್ಮ ಸ್ವಂತ ನೆರಳನ್ನು(Shadow) ನೋಡಬಾರದು. ನೆರಳು ನೋಡುವುದು ಅಜ್ಞಾತ ಭಯ, ಒತ್ತಡಕ್ಕೆ ಕಾರಣವಾಗುತ್ತೆ  ಎಂದು ನಂಬಲಾಗಿದೆ. ಆದ್ದರಿಂದ ಬೆಳಿಗ್ಗೆ ಎದ್ದು ಈ ತಪ್ಪನ್ನು ಮಾಡಬೇಡಿ. ಇದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ.

46

ನೀವು ಬೆಳಿಗ್ಗೆ ಎದ್ದಾಗ ಏನು ಮಾಡಬೇಕು ?
ನೀವು ಬೆಳಿಗ್ಗೆ ಎದ್ದು ದೇವರನ್ನು(God) ಸ್ಮರಿಸಬೇಕು ಮತ್ತು ಅವನಿಗೆ ಧನ್ಯವಾದ ಹೇಳಬೇಕು. ಇದರೊಂದಿಗೆ, ನೀವು ನಿಮ್ಮ ಅಂಗೈಯನ್ನು ನೋಡಬೇಕು. ಅಂಗೈಯನ್ನು ನೋಡಿ, ಈ ಮಂತ್ರವನ್ನು ಹೇಳಬೇಕು- 

56

ಕರಾಗ್ರೇ ವಸತೇ ಲಕ್ಷ್ಮೀ
ಕರಮಧ್ಯೇ ಸರಸ್ವತೀ
ಕರಮೂಲೇ ತು ಗೋವಿಂದಃ
ಪ್ರಭಾತೇ ಕರದರ್ಶನಂ

ಈ ಮಂತ್ರ ಹೇಳುವ ಮೂಲಕ ಲಕ್ಷ್ಮಿಯ(Lakshmi) ಆಶೀರ್ವಾದ ಪಡೆಯಿರಿ. ಕೈಯ ಮುಂಭಾಗದಲ್ಲಿ ಲಕ್ಷ್ಮಿ, ಮಧ್ಯದಲ್ಲಿ ತಾಯಿ ಸರಸ್ವತಿ ಮತ್ತು ಕೈ ಮೂಲೆಯಲ್ಲಿ ವಿಷ್ಣು ದೇವರ ವಾಸಸ್ಥಾನ ಎಂದು ನಂಬಲಾಗಿದೆ. ಆದ್ದರಿಂದ, ಬೆಳಿಗ್ಗೆ ಎದ್ದು ಅಂಗೈಯನ್ನು ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

66

ರಾಹು ಅಸಮಾಧಾನಗೊಂಡಂತೆ ತೋರುತ್ತದೆ
ಬೆಳಿಗ್ಗೆ ಎದ್ದು ಕೆಲವು ತಪ್ಪು ಮಾಡುವುದು ಪಾಪ ಗ್ರಹವಾದ ರಾಹುವಿಗೆ ತೊಂದರೆ ಉಂಟು ಮಾಡುತ್ತೆ. ಬೆಳಿಗ್ಗೆ ಎದ್ದು ಕುಡಿಯುವುದು, ಸ್ಮೋಕ್(Smoke) ಮಾಡೋದು ಇತ್ಯಾದಿ, ರಾಹುವಿಗೆ ಅಶುಭ ಫಲ ನೀಡುತ್ತಾನೆ. ಅಂತಹ ಜನರ ಜೀವನದಲ್ಲಿ ಹೋರಾಟವು ಎಂದಿಗೂ ಕಡಿಮೆಯಾಗೋದಿಲ್ಲ. ಅಂತಹ ಜನರು ಯಶಸ್ಸನ್ನು ಪಡೆಯಲು ತುಂಬಾ ಶ್ರಮಿಸಬೇಕು.
 

click me!

Recommended Stories