Ear Piercing Astrology : ಕಿವಿ ಚುಚ್ಚಿಸಿಕೊಳ್ಳೋದು ಈಗಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಆದ್ರೆ ಅದ್ರ ಹಿಂದೆ ನಂಬಿಕೆಯೊಂದಿದೆ. ಪುರುಷರು ಕಿವಿ ಚುಚ್ಚಿಸಿಕೊಳ್ಳೋದ್ರಿಂದ ಲಾಭ ಎಷ್ಟು, ನಷ್ಟ ಎಷ್ಟು?
ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲ ಸೆಲೆಬ್ರಿಟಿಗಳ ಕಿವಿಯಲ್ಲಿ ಓಲೆ ಕಾಣ್ಬಹುದು. ಧುರುಂಧರ್ ಮೂಲಕ ಈ ವರ್ಷ ಬಾಲಿವುಡ್ ನಲ್ಲಿ ಮಿಂಚಿದ ರಣವೀರ್ ಸಿಂಗ್, ಛಾವಾ ಮೂಲಕ ಗಮನ ಸೆಳೆದ ವಿಕ್ಕಿ ಕೌಶಲ್, ಮೂರನೇ ಮದುವೆ ವಿಷ್ಯಕ್ಕೆ ಸುದ್ಧಿಯಲ್ಲಿರುವ ಆಮೀರ್ ಖಾನ್ ಸೇರಿದಂತೆ ಅಭಿಷೇಕ್ ಕಿವಿಯಲ್ಲೂ ಓಲೆ ಇದೆ. ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಕಿವಿಯೋಲೆ ಹಾಕಿಕೊಂಡಿದ್ದರು.
28
ಇದು ಕೇವಲ ಫ್ಯಾಷನ್ ಅಲ್ಲ
ಕಿವಿ ಚುಚ್ಚಿಸಿಕೊಂಡು, ಸುಂದರ ಓಲೆಗಳನ್ನು ಹಾಕಿಕೊಳ್ಳೋದು ಕೇವಲ ಫ್ಯಾಷನ್ ಅಲ್ಲ. ಇದು ಭಾರತೀಯ ಸಂಸ್ಕೃತಿಯ ಒಂದು ಭಾಗ. ಜ್ಯೋತಿಷ್ಯದ ಪ್ರಕಾರ, ಇದು ನಕಾರಾತ್ಮಕ ಗ್ರಹಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆರೋಗ್ಯ ಮತ್ತು ಆರ್ಥಿಕ ವೃದ್ಧಿಗೆ ಸಹಾಯ ಮಾಡುತ್ತದೆ.
38
ಪದ್ಧತಿ ಹೇಳೋದೇನು?
ಹಿಂದೂ ಧರ್ಮದ 16 ಸಂಸ್ಕಾರಗಳಲ್ಲಿ ಇದೂ ಸೇರಿದೆ. ಮಗು ಜನಿಸಿದ ಆರನೇ ತಿಂಗಳಲ್ಲಿ ಕಿವಿ ಚುಚ್ಚುವ ಶಾಸ್ತ್ರ ನಡೆಯುತ್ತದೆ. ಭಾರತೀಯ ಸಂಸ್ಕೃತಿ ಪ್ರಕಾರ, ಹುಡುಗರು ತಮ್ಮ ಬಲ ಕಿವಿ ಚುಚ್ಚಿಕೊಳ್ಳುತ್ತಾರೆ. ಹುಡುಗಿಯರಿಗೆ ಎರಡೂ ಕಿವಿಗಳನ್ನು ಚುಚ್ಚುತ್ತಾರೆ.
ಕಿವಿ ಚುಚ್ಚುವಿಕೆ ರಾಹು ಮತ್ತು ಕೇತುವಿನ ಜೊತೆ ನೇರ ಸಂಬಂಧವನ್ನು ಹೊಂದಿದೆ ಎಂದು ಜ್ಯೋತಿಷ್ಯ ಹೇಳುತ್ತದೆ. ರಾಹು ಮತ್ತು ಕೇತುವನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಗ್ರಹಗಳು ಮಾನಸಿಕ ಒತ್ತಡ, ಆರ್ಥಿಕ ನಷ್ಟ, ಸಂಘರ್ಷ ಮತ್ತು ತಪ್ಪು ನಿರ್ಧಾರಗಳಿಗೆ ಕಾರಣವಾಗಬಹುದು. ಕಿವಿ ಚುಚ್ಚುವುದು ರಾಹು ಮತ್ತು ಕೇತುವನ್ನು ಶಾಂತಗೊಳಿಸುತ್ತದೆ ಎಂದು ನಂಬಲಾಗಿದೆ.
58
ಅದೃಷ್ಟದ ಬಾಗಿಲು
ಕಿವಿ ಚುಚ್ಚುವುದರಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ. ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಹಣದ ಹರಿವಿಗೆ ದಾರಿ ಸಿಗುತ್ತದೆ. ವಿಶೇಷವಾಗಿ ರಾಹು ಮತ್ತು ಕೇತು ಒಬ್ಬರ ಜಾತಕದಲ್ಲಿ ದುರ್ಬಲರಾಗಿದ್ದರೆ, ಕಿವಿ ಚುಚ್ಚುವುದರಿಂದ ಪ್ರಗತಿಗೆ ಹಲವು ಮಾರ್ಗಗಳು ತೆರೆದುಕೊಳ್ಳುತ್ತವೆ.
68
ವೈಜ್ಞಾನಿಕ ಕಾರಣ
ಕಿವಿ ಚುಚ್ಚುವುದು ಕೇವಲ ಹಿಂದೂ ಸಂಸ್ಕೃತಿ ಮಾತ್ರವಲ್ಲ. ಅದಕ್ಕೆ ವೈಜ್ಞಾನಿಕ ಕಾರಣವೂ ಇದೆ. ವಿಜ್ಞಾನದ ಪ್ರಕಾರ, ಕಿವಿಗಳು ಶಕ್ತಿ ಬಿಂದುಗಳಿಗೆ ಸಂಪರ್ಕ ಹೊಂದಿವೆ. ಕಿವಿ ಚುಚ್ಚುವುದ್ರಿಂದ ಅನೇಕ ಒತ್ತಡಗಳು ಕಡಿಮೆಯಾಗುತ್ತವೆ, ಶಕ್ತಿಯನ್ನು ಕಾಪಾಡಿಕೊಳ್ಳುತ್ತವೆ ಮತ್ತು ಸ್ಮರಣೆಯನ್ನು ಸುಧಾರಿಸುತ್ತವೆ. ಇದು ಆರೋಗ್ಯವನ್ನೂ ಸುಧಾರಿಸುತ್ತದೆ.
78
ಯಾವ ಓಲೆ ಉತ್ತಮ
ರಾಹು – ಕೇತುವಿನಿಂದ ಮುಕ್ತಿ, ಆರೋಗ್ಯ ವೃದ್ಧಿ ಎಂಬ ಕಾರಣಕ್ಕೆ ಪುರುಷರು ಬರೀ ಕಿವಿ ಚುಚ್ಚಿಸಿಕೊಂಡ್ರೆ ಸಾಲದು. ಕಿವಿ ಚುಚ್ಚಿದ ಮೇಲೆ ಹಾಕುವ ಓಲೆ ಬಗ್ಗೆಯೂ ಗಮನ ಇರಬೇಕು. ಅನೇಕರು ಎಲ್ಲ ಲೋಹಗಳ ಓಲೆ ಬಳಸ್ತಾರೆ. ಆದ್ರೆ ಶಾಸ್ತ್ರದ ಪ್ರಕಾರ ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಕಿವಿಯೋಲೆಗಳನ್ನು ಮಾತ್ರ ಧರಿಸಬೇಕು. ಕಿವಿ ಚುಚ್ಚಿಸುವ ಪ್ಲಾನ್ ನಲ್ಲಿರುವ ಹುಡುಗರು ಎರಡೂ ಕಿವಿ ಚುಚ್ಚಿಸಬೇಕಾಗಿಲ್ಲ. ಬಲ ಕಿವಿಯನ್ನು ಮಾತ್ರ ಚುಚ್ಚಿಸಿ.
88
ಯಾವುದು ಅಶುಭ
ಕೆಲವು ನಂಬಿಕೆಗಳ ಪ್ರಕಾರ ಎಡ ಕಿವಿ ಚುಚ್ಚುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಕಬ್ಬಿಣ ಅಥವಾ ನಿಕ್ಕಲ್ ಕಿವಿಯೋಲೆಗಳನ್ನು ಧರಿಸುವುದು ಶನಿ ಅಥವಾ ರಾಹುವಿನ ಪ್ರಭಾವ ಹೆಚ್ಚಿಸುತ್ತದೆ. ಶನಿವಾರ ಮತ್ತು ಭಾನುವಾರ ಕಿವಿ ಚುಚ್ಚುವುದು ಅಶುಭ. ಜಾತಕದಲ್ಲಿ ಮಂಗಳ ಅಥವಾ ಶನಿ ಬಲವಾಗಿಲ್ಲದಿದ್ದರೆ ಮೊದಲು ಜ್ಯೋತಿಷಿಯನ್ನು ಸಂಪರ್ಕಿಸಿ ನಂತ್ರ ಕಿವಿ ಚುಚ್ಚಿಸಿಕೊಳ್ಳಿ. ತಪ್ಪು ಲೋಹ ಆರೋಗ್ಯ ಸಮಸ್ಯೆ, ಮಾನಸಿಕ ಸಮಸ್ಯೆಗೆ ಕಾರಣ ಆಗ್ಬಹುದು.