ಪ್ರೇಮಿಗಳ ದಿನಾಚರಣೆಗೆ ಅಂಬಾನಿ ಕೊಡುಗೆ, ಚಿನ್ನಾಭರಣ ಮೇಲೆ ಶೇ.30 ರಷ್ಟು ಡಿಸ್ಕೌಂಟ್

Published : Feb 07, 2025, 08:53 PM IST

ಪ್ರೇಮಿಗಳ ದಿನಾಚರಣೆಗೆ ಮುಕೇಶ್ ಅಂಬಾನಿ ಭರ್ಜರಿ ಕೊಡುಗೆ ನೀಡಿದ್ದಾರೆ. ಚಿನ್ನಾಭರಣ ಖರೀದಿಯಲ್ಲಿ ಭರ್ಜರಿ ಶೇಕಡಾ 30ರಷ್ಟು ಡಿಸ್ಕೌಂಟ್ ಘೋಷಿಸಿದ್ದಾರೆ. ಈ ಆಫರ್ ಫೆಬ್ರವರಿ 16ರ ವರೆಗೆ ಮಾತ್ರ.

PREV
15
ಪ್ರೇಮಿಗಳ ದಿನಾಚರಣೆಗೆ ಅಂಬಾನಿ ಕೊಡುಗೆ, ಚಿನ್ನಾಭರಣ ಮೇಲೆ ಶೇ.30 ರಷ್ಟು ಡಿಸ್ಕೌಂಟ್

ಪ್ರೇಮಿಗಳ ದಿನಾಚರಣೆಗೆ ತಯಾರಿಗಳು ನಡೆಯುತ್ತಿದೆ. ಪ್ರೀತಿ ಪಾತ್ರರಿಗೆ ಉಡುಗೊರೆ ಖರೀದಿ, ಪ್ರಪೋಸಲ್ ತಯಾರಿಗಳು ನಡೆಯುತ್ತಿದೆ. ಇದೀಗ ಪ್ರೇಮಿಗಳ ದಿನಾಚರಣೆ ಆಚರಿಸುವವರಿಗೆ ಮುಕೇಶ್ ಅಂಬಾನಿ ಕೊಡುಗೆ ನೀಡಿದ್ದಾರೆ. ಹೌದು, ರಿಲಯನ್ಸ್ ಜ್ಯೂವೆಲ್ಲರಿ ಇದೀಗ ಪ್ರೇಮಿಗಳ ದಿನಾಟರಣೆ ಆಫರ್ ಅಡಿಯಲ್ಲಿ ಆಭರಣ ಖರೀದಿಸುವವರಿಗೆ ಶೇಕಡಾ 30ರಷ್ಟು ಡಿಸ್ಕೌಂಟ್ ಘೋಷಿಸಿದ್ದಾರೆ. 
 

25

ರಿಲಯನ್ಸ್ ಜ್ಯುವೆಲ್ಸ್, ಪ್ರೇಮಿಗಳ‌ ದಿನಕ್ಕಾಗಿ‌ ವಜ್ರದ ಆಭರಣಗಳ ಮೇಲೆ 30% ವರೆಗೆ ಆಕರ್ಷಕ ರಿಯಾಯಿತಿ ಕೊಡುಗೆಯೊಂದಿಗೆ 'ವ್ಯಾಲೆಂಟೈನ್ಸ್  ಸಂಭ್ರಮ  ಪ್ರಾರಂಭಿಸಿದೆ. ಫೆಬ್ರವರಿ 16, 2025 ರವರೆಗೆ  ರಿಲಯನ್ಸ್ ಜ್ಯುವೆಲ್ಸ್‌ನ ಎಲ್ಲಾ ಶೋರೂಂಗಳಲ್ಲಿಯೂ ಈ ವ್ಯಾಲೆಂಟೈನ್ಸ್ ಡೇ ಕೊಡುಗೆ ಲಭ್ಯವಿರಲಿದೆ. 100ಕ್ಕೂ ಅಧಿಕ ನಗರಗಳಲ್ಲಿ 150ಕ್ಕೂ ಹೆಚ್ಚಿನ ಶೋರೂಂಗಳನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್, ನೀವು ಎಲ್ಲಿದ್ದರೂ ಪ್ರೀತಿಯ ಬಂಧವನ್ನು ಆಚರಿಸಲು ನೆರವಾಗುತ್ತದೆ.

35

ಸೊಗಸಾದ ಕಿವಿಯೋಲೆಗಳು, ಸೂಕ್ಷ್ಮ ಚೈನ್ ಮತ್ತು  ಉಂಗುರಗಳು ಸೇರಿದಂತೆ ಅದ್ಭುತ ಶ್ರೇಣಿಯ ವಜ್ರದ ಆಭರಣಗಳನ್ನು ಈ ಸಂಗ್ರಹ ಒಳಗೊಂಡಿದೆ. ಈ ಸಂಗ್ರಹವು ಸಮಯ ಮತ್ತು ಪ್ರವೃತ್ತಿಗಳನ್ನು ಮೀರಿದ ಪ್ರೀತಿಯ ಶಾಶ್ವತ ಸಂಕೇತವನ್ನು ಸೂಚಿಸುತ್ತದೆ. 

ರಿಲಯನ್ಸ್ ಜ್ಯುವೆಲ್ಸ್ ಚಿನ್ನ ಮತ್ತು ವಜ್ರದ ಆಭರಣಗಳ ವೈವಿಧ್ಯಮಯ ಆಯ್ಕೆಯನ್ನು ಹೊಂದಿದೆ. ಇದನ್ನು ನೀವು ಪ್ರೀತಿ, ಬದ್ಧತೆ ಅಥವಾ ಸ್ಮರಣೀಯ ಕ್ಷಣಗಳನ್ನು ಆಚರಿಸುತ್ತಿದ್ದರೂ ಪ್ರತಿ ಸಂದರ್ಭಕ್ಕೂ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಸೂಕ್ಷ್ಮವಾದ ಸ್ಟಡ್‌ಗಳಿಂದ ಹಿಡಿದು ಬೋಲ್ಡ್ ಹಾರಗಳವರೆಗೆ ಪ್ರತಿಯೊಂದು ತುಣುಕನ್ನು ಸೂಕ್ಷ್ಮವಾಗಿ ರಚಿಸಲಾಗಿದೆ.

45

'ಈ ಪ್ರೇಮಿಗಳ ದಿನದಂದು ತಮ್ಮ ಪ್ರೀತಿಪಾತ್ರರಿಗೆ ಅರ್ಥಪೂರ್ಣ ಮತ್ತು ಹೃದಯಕ್ಕೆ ಹತ್ತಿರವಾಗುವಂತಹ ಉಡುಗೊರೆಯನ್ನು ನೀಡುವಂತೆ ನಮ್ಮ ಗ್ರಾಹಕರನ್ನು ಉತ್ತೇಜಿಸಲು ರಿಲಯನ್ಸ್ ಜ್ಯುವೆಲ್ಸ್ ಬಯಸುತ್ತದೆ' ಎಂದು ರಿಲಯನ್ಸ್ ಜ್ಯುವೆಲ್ಸ್‌ನ ಸಿಇಒ ಸುನಿಲ್ ನಾಯಕ್ ಹೇಳಿದ್ದಾರೆ. ಈ ಬಾರಿಯ ಪ್ರೇಮಿಗಳ ದಿನದಂದು, ರಿಲಯನ್ಸ್ ಜ್ಯುವೆಲ್ಸ್ ಗ್ರಾಹಕರನ್ನು ಸಾಂಪ್ರದಾಯಿಕ ಉಡುಗೊರೆಗಳ ಬದಲಾಗಿ, ತನ್ನ ವಿಶೇಷ ಸಂಗ್ರಹದಲ್ಲಿ ಆಭರಣಗಳನ್ನು ಪ್ರೀತಿಪಾತ್ರರಿಗೆ ಉಡುಗೊರೆ ನೀಡುವಂತೆ ಪ್ರೇರೇಪಿಸುತ್ತದೆ.

55

ರಿಲಯನ್ಸ್ ಜ್ಯುವೆಲ್ಸ್ ತಂದಿದೆ 'ವ್ಯಾಲೆಂಟೈನ್ಸ್ ಡೇ ಕೊಡುಗೆ'
*  ಪ್ರೇಮಿಗಳ‌ ದಿನಕ್ಕೆ ರಿಲಯನ್ಸ್ ಜ್ಯುವೆಲ್ಸ್ ವಿಶೇಷ ಕೊಡುಗೆ
*  ವಜ್ರದ‌ ಆಭರಣಗಳ ಮೇಲೆ 30% ರವರೆಗೆ ರಿಯಾಯಿತಿ
*  ಫೆಬ್ರುವರಿ 16ರವರೆಗೆ ವ್ಯಾಲೆಂಟೈನ್ಸ್ ಡೇ ಕೊಡುಗೆ

Read more Photos on
click me!

Recommended Stories