ಡ್ರೀಮ್ ವೆಡ್ಡಿಂಗ್ ಲೆಹಂಗಾ ಗಿಫ್ಟ್ ಮಾಡಿದ್ಯಾರು ಅಂತ ರಿವೀಲ್ ಮಾಡಿದ್ರು ಸಿಂಗರ್ ನೇಹಾ
ಸಿಂಗರ್ ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಅ.24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅದ್ಧೂರಿಯಾಗಿ ಆಪ್ತರ ನಡುವೆ ನಡೆದ ವಿವಾಹ ಸಂಭ್ರಮದಲ್ಲಿ ಸಿಂಗರ್ ಜೋಡಿ ಸುಂದರ ಉಡುಗೆಯಲ್ಲಿ ಮಿಂಚಿದ್ರು.
ಪಿಂಕ್ ಬಣ್ಣದ ಲೆಹಂಗಾದಲ್ಲಿ ಮುದ್ದಾಗಿ ಕಾಣಿಸಿದ್ರು ನೇಹಾ.
ಅಂದ ಹಾಗೆ ನೇಹಾ ಧರಿಸಿದ ಲೆಹಂಗಾ ಖರೀದಿ ಮಾಡಿದ್ದಲ್ಲ, ಗಿಫ್ಟ್ ಸಿಕ್ಕಿದ್ದು.
ಅರೆ ಇಷ್ಟೊಂದು ಟಾಪ್ ಸಿಂಗರ್ ಗಿಫ್ಟ್ ಸಿಕ್ಕಿದ ಲೆಹಂಗಾ ಧರಿಸಿದ್ರಾ ಅಂತ ಅಚ್ಚರಿಯಾಗಬೇಡಿ, ಗಿಫ್ಟ್ ಕೊಟ್ಟೋರು ಯಾರು ಅಂತ ಗೊತ್ತಾದ್ರೆ ನೀವು ಧರಿಸ್ತೀರಿ.
ಎಲ್ಲರೂ ಜೀವನದಲ್ಲಿ ಒಮ್ಮೆಯಾದ್ರೂ ಧರಿಸ್ಬೇಕು ಅಂತ ಇಷ್ಟಪಡೋ ಟಾಪ್ ಡಿಸೈನರ್ ಲೆಹಂಗಾ ಧರಿಸಿದ್ದಾರೆ ನೇಹಾ.
ಅಂದಹಾಗೆ ನಟಿಗೆ ಲೆಹಂಗಾ ಗಿಫ್ಟ್ ಮಾಡಿದ್ದು ಸಭ್ಯಸಾಚಿ ವಿನ್ಯಾಸಕ.
ಝಾರ್ಡೋಸಿ ಮತ್ತು ಮೀನಾಕರಿ ಎಸೆಂಟ್‌ಗಳೊಂದಿಗೆ ಸುಂದರವಾಗಿ ಕಾಣಿಸಿತ್ತು ಲೆಹಂಗಾ.
ಸಂಪ್ರದಾಯಿಕ ಜ್ಯುವೆಲ್ಲರಿ ಧರಿಸಿದ್ದ ನಟಿಯ ಲುಕ್ ಇನ್ನಷ್ಟು ಸುಂದರವಾಗಿತ್ತು.
ಅನ್‌ಕಟ್ ಡೈಮಂಡ್, ಎಮರಾಲ್ಡ್, ಮುತ್ತುಗಳಳನ್ನು 22 ಕ್ಯಾರೆಟ್ ಚಿನ್ನದಲ್ಲಿ ಪೋಣಿಸಿದ ಆಭರಣ ಧರಿಸಿದ್ರು ಟಾಪ್ ಸಿಂಗರ್
ಇನ್ನು ರೋಹನ್‌ಪ್ರೀತ್ ಅವರು ಸಭ್ಯಸಾಚಿ ಉಡುಪಿನಲ್ಲಿ ಮಿಂಚಿದ್ದು, ಥಾಂಕ್ಯೂ ಸಭ್ಯಸಾಚಿ ಸರ್ ಎಂದು ಬರೆದಿದ್ದಾರೆ.