Throwback 2023: ದೀಪಿಕಾ ಪಡುಕೋಣೆ - ಖುಷಿ ಕಪೂರ್‌ವರೆಗೆ ಅತ್ಯಂತ ಸ್ಟೈಲಿಶ್ ಸೆಲೆಬ್ರಿಟೀಸ್!

Published : Dec 12, 2023, 05:47 PM IST

ಫ್ಯಾಶನ್ ಲೋಕದಲ್ಲಿ ಈ ವರ್ಷ ಹಲವಾರು ಸೆಲೆಬ್ರಿಟಿಗಳು ಮಿಂಚಿದ್ದಾರೆ. ತಮ್ಮ ಡ್ರೆಸ್ಸಿಂಗ್ ಸೆನ್ಸ್, ಸ್ಟೈಲ್ ಮತ್ತು ಫ್ಯಾಷನ್ ಮೂಲಕ ಹೆಚ್ಚಾಗಿ ಸದ್ದು ಮಾಡಿದ ಹಾಗೂ ಅಭಿಮಾನಿಗಳ ಮನಸ್ಸು ಗೆದ್ದ ಸೆಲೆಬ್ರಿಟಿಗಳು ಯಾರು ಯಾರು ನೊಡೋಣ…   

PREV
19
Throwback 2023: ದೀಪಿಕಾ ಪಡುಕೋಣೆ - ಖುಷಿ ಕಪೂರ್‌ವರೆಗೆ ಅತ್ಯಂತ ಸ್ಟೈಲಿಶ್ ಸೆಲೆಬ್ರಿಟೀಸ್!

ಸೋನಮ್ ಕಪೂರ್ ಅಹುಜಾ (Sonam Kapoor Ahuja)
ಸೋನಮ್ ಕಪೂರ್ ಫ್ಯಾಷನ್ನಲ್ಲಿ ಬೆಸ್ಟ್. ಅವರ ಚಲನಚಿತ್ರ ಕರಿಯರ್ ಪ್ರಾರಂಭವಾಗುವ ಮೊದಲೇ, ಅವರು ತಮ್ಮ ಫ್ಯಾಷನ್ ಸೆನ್ಸ್ ಗೆ ಹೆಸರುವಾಸಿಯಾಗಿದ್ದರು ಮತ್ತು ಜೊತೆಗೆ ಹಲವಾರು ಫ್ಯಾಷನ್ ಶೋಗಳಲ್ಲಿ ಭಾಗಿಯಾಗುತ್ತಿದ್ದರು. ಅವರು ಇಂದಿಗೂ ಅತ್ಯಂತ ಸ್ಟೈಲಿಶ್ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರು.

29

ಅಥಿಯಾ ಶೆಟ್ಟಿ (Athiya Shetty)
ತನ್ನ ಇನ್ಸ್ಟಾಗ್ರಾಮ್ ಫೀಡ್‌ನಿಂದ ಹಿಡಿದು ಫ್ಯಾಷನ್ ವೀಕ್‌ಗಳಲ್ಲಿ Ramp Walk ಮಾಡುವುದು ಮತ್ತು ಅತಿಥಿಯಾಗಿ ಆಹ್ವಾನಿಸಲ್ಪಡುವವರೆಗೆ, ಅಥಿಯಾ ಶೆಟ್ಟಿ ಬೆಸ್ಟ್ ಫ್ಯಾಷನಿಸ್ಟ್ ಆಗಿದ್ದಾರೆ. ಸಿನಿಮಾಗಳಲ್ಲಿ ಗೆಲ್ಲದಿದ್ದರೂ ಅಥಿಯಾ ಈ ವರ್ಷ ಭಾರತದ ಅತ್ಯಂತ ಸ್ಟೈಲಿಶ್ ವಾಗ್ ಎಂದು ಕರೆಯಲ್ಪಟ್ಟಿದ್ದಾರೆ.  

39

ಆಲಿಯಾ ಭಟ್ (Alia Bhatt)
ಪಕ್ಕದ ಮನೆಯ ಹುಡುಗಿ ಲುಕ್ ನಿಂದ ಸಖತ್ ಫ್ಯಾಷನಿಸ್ಟ್ ಆಗಿ ಬದಲಾಗಿದ್ದಾರೆ.  ಕೊರೋನಾ ಬರೋಕ್ಕಿಂತ ಮುಂಚಿನ ತನ್ನ ಸಿಂಪಲ್ ಲುಕ್ ನಿಂದ ಹಿಡಿದು ಇಂದಿನ ದಿವಾವರೆಗೆ, ಆಲಿಯಾ ಪ್ರಸ್ತುತ ಅತ್ಯಂತ ಸ್ಟೈಲಿಶ್ ತಾರೆಗಳಲ್ಲಿ ಒಬ್ಬರು.

49

ರಣವೀರ್ ಸಿಂಗ್ (Ranveer Singh)
ರಣವೀರ್ ಸಿಂಗ್ ಅವರ ನಟನೆ ಎಷ್ಟೊಂದು ಅದ್ಭುತವಾಗಿರುತ್ತೋ, ಅವರ ಫ್ಯಾಷನ್ ಪ್ರಜ್ಞೆ ಕೂಡ ಸಖತ್ತಾಗಿರುತ್ತೆ. ಅವರ ಸ್ಟೈಲ್ ಯಾರೂ ಯೋಚಿಸಲು ಸಾಧ್ಯವೇ ಇರದಂತೆ ಇರುತ್ತೆ. ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮತ್ತು ಸ್ಟೈಲ್ ನಿಂದಾಗಿ ರಣವೀರ್ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ.

59

ಪ್ರಿಯಾಂಕಾ ಚೋಪ್ರಾ (Priyanka Chopra)
ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ತಾರೆಯಿಂದ ಹಾಲಿವುಡ್ ನಾಯಕಿಯಾದ ಪ್ರಿಯಾಂಕಾ ಚೋಪ್ರಾ ಅವರ ಫ್ಯಾಷನ್ ಸೆನ್ಸ್ ಬಗ್ಗೆ ಹೇಳೋದೆ ಬೇಡ.. ಅವರು ತಮ್ಮ ಹದಿಹರೆಯದ ವರ್ಷಗಳಿಂದ ಫ್ಯಾಷನ್ ಇಂಡಸ್ಟ್ರಿಯಲ್ಲಿದ್ದಾರೆ. ಇಂದಿಗೂ ಅವರ ಸ್ಟೈಲ್ ನೋಡೋದೆ ಚೆಂದ.

69

ಬಾಬಿಲ್ ಖಾನ್ (Babil Khan)
ಬಾಲಿವುಡ್ಗೆ ಬಂದಾಗ ಬಾಬಿಲ್ ಖಾನ್ ಹೊಸಬ, ಆದರೆ ಇರ್ಫಾನ್ ಖಾನ್ ಅವರ ಮಗ ಈ ವರ್ಷ ಇನ್ಸ್ಟಾಗ್ರಾಮ್ನಲ್ಲಿ ತನ್ನ ಫ್ಯಾಷನ್ ಸೆನ್ಸ್ ನಿಂದಾಗಿ ಅಲೆಗಳನ್ನು ಸೃಷ್ಟಿಸಿದ್ದಾರೆ. ಆಕರ್ಷಕ ಫ್ರೆಂಡ್ಲಿ ಲುಕ್ ನಿಂದ ಹಿಡಿದು ಚಿಕ್ ಫ್ಯಾಷನ್ ಗ್ರೂಪ್ ವರೆಗೂ ಅವರ ಫ್ಯಾಷನ್ ಸೆನ್ಸ್ ತುಂಬಾನೆ ಚೆನ್ನಾಗಿದೆ. 

79

ಖುಷಿ ಕಪೂರ್ (Khushi Kapoor)
ಖುಷಿ ಅವರ ಸ್ಟೈಲಿಸ್ಟಿಕ್ ಲುಕ್ ನೋಡಲು ಅವರ ಇನ್ಸ್ಟಾಗ್ರಾಮ್ ಅನ್ನು ಒಮ್ಮೆ ನೋಡಬೇಕು. ಸೋನಮ್ ಕಪೂರ್ ಅವರ ಸೋದರ ಸಂಬಂಧಿ ಮತ್ತು ಜಾನ್ವಿ ಕಪೂರ್ ಅವರ ತಂಗಿ ಖುಷಿ ನಿಸ್ಸಂದೇಹವಾಗಿ ಸ್ಟೈಲಿಶ್ ನಟಿ ಹೌದು. ಜೊತೆಗೆ ಈ ವರ್ಷ ಖುಷಿ ಫ್ಯಾಷನ್ ಇಂಡಸ್ಟ್ರಿಯಲ್ಲಿ ಸಹ ಗುರುತಿಸಿಕೊಂಡರು.
 

89

ಭೂಮಿ ಪೆಡ್ನೇಕರ್ (Bhumi Pednekar)
ಭೂಮಿ ಪೆಡ್ನೇಕರ್ ಸದ್ದಿಲ್ಲದೆ ಈ ವರ್ಷದ ನಿಜವಾದ ಫ್ಯಾಷನ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಅವರ ಲುಕ್ ಯಾವಾಗಲೂ ಪ್ರಾಕ್ಟಿಕಲ್ ಆಗಿತ್ತು ಮತ್ತು ಈ ವರ್ಷ ತಮ್ಮ ಡ್ರೆಸ್ಸಿಂಗ್ ಮತ್ತು ಸ್ಟೈಲಿಂಗ್ಗ್ ನಿಂದಾಗಿ ಮತ್ತಷ್ಟು ಗುರುತಿಸಿಕೊಂಡರು.  

99

ದೀಪಿಕಾ ಪಡುಕೋಣೆ (Deepika Padukone)
ದೀಪಿಕಾ ಅವರ ಸ್ಟೈಲಿಸ್ಟಿಕ್ ಆಯ್ಕೆಗಳ ಬಗ್ಗೆ ಮಾತನಾಡಲು ಹೊರಟರೆ ಪದಗಳೇ ಸಾಕಾಗಲ್ಲ. ಇವರ ಹೆಸರು 2023 ರಲ್ಲಿ ಅನೇಕ ಅಂತಾರಾಷ್ಟ್ರೀಯ ಅತ್ಯುತ್ತಮ ಉಡುಪುಗಳ ಲಿಸ್ಟ್ ನಲ್ಲಿ ಅಗ್ರಸ್ಥಾನದಲ್ಲಿದೆ. ಇವರ ಡ್ರೆಸ್ಸಿಂಗ್ ಸೆನ್ಸ್ ನೋಡಿದ್ರೆ, ದೀಪಿಕಾ ಈ ವರ್ಷದ ಮೋಸ್ಟ್ ಸ್ಟೈಲಿಶ್ ನಟಿ ಅಂದ್ರೆ ತಪ್ಪೇ ಅಲ್ಲ ಬಿಡಿ. 

Read more Photos on
click me!

Recommended Stories