ಟಾಕ್ಸಿಕ್‌ ಬಿಡುಗಡೆ ಮುಂದೂಡಿಕೆ, ಹೊಸ ದಿನಾಂಕ ಪ್ರಕಟ ; ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಬಿಗ್ ಶಾಕ್

Published : Mar 04, 2026, 10:16 AM IST

Toxic Movie:  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕವನ್ನು ಮಾರ್ಚ್ 19 ರಿಂದ ಮುಂದೂಡಲಾಗಿದೆ.  ಚಿತ್ರದ ಟ್ರೇಲರ್ ಮಾರ್ಚ್ 8 ರಂದು ಬಿಡುಗಡೆಯಾಗಲಿದೆ.

PREV
15
ಟಾಕ್ಸಿಕ್ ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಲಾಗಿದೆ. ಈ ಮೊದಲು ಮಾರ್ಚ್ 19ರಂದು ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಟಾಕ್ಸಿಕ್ ಚಿತ್ರತಂಡ ಘೋಷಣೆ ಮಾಡಿಕೊಂಡಿತ್ತು. ಇದೀಗ ದಿಢೀರ್ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.

25
ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕ

ಮಾರ್ಚ್ 19ರ ಬದಲಾಗಿ ಜೂನ್ 4ರಂದು ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಲಿದೆ. ಈ ಕುರಿತು ಯಶ್ ಇನ್‌ಸ್ಟಾಗ್ರಾಂ ಮೂಲಕ ಮಾಹಿತಿ ನೀಡಿದ್ದಾರೆ. ಇದೇ ಮಾರ್ಚ್ 19ರಂದು ರಣ್‌ವೀರ್ ಸಿಂಗ್ ನಟನೆಯ ಧುರಂದರ್ -2 ರಿಲೀಸ್ ಆಗಲಿದೆ. ಬಿಗ್‌ ಬಜೆಟ್ನ ಈ ಎರಡೂ ಚಿತ್ರಗಳು ಮುಖಾಮುಖಿಯಾಗುತ್ತವೆ ಎಂದು ಹೇಳಲಾಗಿತ್ತು. ಇದೀಗ ಟಾಕ್ಸಿಕ್ ಹಿಂದೆ ಸರಿದುಕೊಂಡಿದೆ.

35
ಧುರಂಧರ್‌ 2

ಯಶ್‌ ನಟನೆಯ ‘ಟಾಕ್ಸಿಕ್‌’ ಮತ್ತು ರಣವೀರ್‌ ಸಿಂಗ್‌ ನಟನೆಯ ‘ಧುರಂಧರ್‌ 2’ ಮಾ.19ರಂದು ಒಂದೇ ದಿನ ಬಿಡುಗಡೆಯಾಗಲಿರುವುದರಿಂದ ಎರಡೂ ಚಿತ್ರಗಳ ಮಧ್ಯೆ ಶೀತಲ ಸಮರ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಧುರಂಧರ್ ಮೊದಲ ಭಾಗ ಬಾಕ್ಸ್ ಅಫಿಸ್‌ನಲ್ಲಿ 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

45
ತಬಾಹಿ ಹಾಡು

ಈ ಮಧ್ಯೆ ‘ಟಾಕ್ಸಿಕ್‌’ ಚಿತ್ರತಂಡ ಮಾ.8ರಂದು ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತಿರುವುದಾಗಿ ಘೋಷಿಸಿದೆ. ಈಗಾಗಲೇ ಬಿಡಗಡೆಯಾಗಿರುವ ಟಾಕ್ಸಿಕ್ ಟೀಸರ್, ಪೋಸ್ಟರ್‌ಗಳು ಭಾರತದ ಸಿನಿ ಅಂಗಳದಲ್ಲಿ ಹಲ್ ಚಲ್ ಸೃಷ್ಟಿಸಿವೆ. ಈಗಾಗಲೇ ‘ಟಾಕ್ಸಿಕ್‌’ ಸಿನಿಮಾದ ತಬಾಹಿ ಹಾಡು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

55
ಟಾಕ್ಸಿಕ್‌ ಟ್ರೇಲರ್‌ ರಿಲೀಸ್‌ ದಿನಾಂಕ

ಮಾ.3 ಹೋಳಿ ಹಬ್ಬದಂದು ‘ಧುರಂಧರ್‌ 2’ ಚಿತ್ರ ಟ್ರೇಲರ್‌ ಬಿಡುಗಡೆಯಾಗಲಿದೆ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿತ್ತು. ಆದರೆ ಟ್ರೇಲರ್‌ ಬಿಡುಗಡೆ ಆಗಿರಲಿಲ್ಲ. ಅದರ ಬೆನ್ನಲ್ಲೇ ಟಾಕ್ಸಿಕ್‌ ಟ್ರೇಲರ್‌ ರಿಲೀಸ್‌ ದಿನಾಂಕ ಘೋಷಿಸಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬೆಂಗಳೂರಲ್ಲಿಯೇ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories