ಹೊಸ ಅಧ್ಯಾಯ ಬರೆಯಲಿರುವ ಯಶ್
ಹೌದು, ರಾಮಾಯಣ ಹಾಗೂ ಟಾಕ್ಸಿಕ್ ಮೂಲಕ ಕನ್ನಡದ ನಟ ಜಾಗತಿಕವಾಗಿ ಹೊಸ ಅಧ್ಯಾಯ ಬರೆಯಲಿದ್ದಾರೆ ಎಂಬ ಮಾತು ಎಲ್ಲಾ ಕಡೆ ಕೇಳಿಬರುತ್ತಿದೆ. ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆಜೆ ಪೆರಿ ಹಾಗೂ ತಮಿಳಿನ ಅನ್ಬರಿವ್ ಟಾಕ್ಸಿಕ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಜೀವ್ ರವಿ ಸಿನಿಮಾಟೋಗ್ರಫಿ ಮಾಡಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರ್ ಟಾಕ್ಸಿಕ್ ಸಿನಿಮಾಗೆ ಮಾಸ್ಟರ್ ಪೀಸ್ ಮ್ಯೂಸಿಕ್ ನೀಡಿದ್ದಾರೆ. ಜೊತೆಗೆ ವಿಶಾಲ್ ಮಿಶ್ರಾ, ತನ್ಶಿಕ್ ಬಗ್ಚಿ ಹಾಡುಗಳಿಗೆ ಕೆಲಸ ಮಾಡಿದ್ದಾರೆ.
ಹೀರೋಯಿನ್ಸ್ ಧಮಾಕಾ
ಟಾಕ್ಸಿಕ್ ಸಿನಿಮಾದ ಅಟ್ರಾಕ್ಷನ್ ಪ್ರಮುಖ 5 ನಟಿಯರು. ನಯನತಾರಾ, ಕಿಯಾರ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಸೇರಿದಂತೆ ಅತೀ ದೊಡ್ಡ ನಟಿಯರ ಬಳಗ ಈ ಚಿತ್ರದಲ್ಲಿದೆ. ಈಗಾಗಲೇ ಯಶ್-ಕಿಯಾರಾ ಅಡ್ವಾಣಿಯ 'ತಬಾಹಿ' ಹಾಡು ಹಾಗೂ ಯಶ್-ತಾರಾ ಸುತಾರಿಯಾ 'ಮನಮೋಹಕ' ಹಾಡು ಜಗತ್ತಿನಾದ್ಯಂತ ಭಾರಿ ಮೆಚ್ಚುಗೆ ಗಳಿಸಿದೆ.