ಅಂದೂ ಜೊತೆಯಾಗಿದ್ವಿ, ಇಂದೂ ಇದ್ದೇವೆ, ಮುಂದೇನು? ಸಂಗೀತಾ ಶೃಂಗೇರಿ ಫೋಟೋ ಶೇರ್​ ಮಾಡಿದ ವಿನಯ್​ ಗೌಡ

Published : Aug 26, 2026, 07:10 PM IST

ಬಿಗ್ ಬಾಸ್ ಸೀಸನ್ 13ರ ಅಗ್ನಿಪರೀಕ್ಷೆಯಲ್ಲಿ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ತೀರ್ಪುಗಾರರಾಗಿದ್ದು, ವಿನಯ್ ಅವರ ಪ್ರಶ್ನೆಗಳು ಟ್ರೋಲ್‌ಗೆ ಕಾರಣವಾಗಿವೆ. ವಿನಯ್ ಅವರು ಸಂಗೀತಾ ಜೊತೆಗಿನ ಫೋಟೋ ಹಂಚಿಕೊಂಡು, ತಮ್ಮಿಬ್ಬರ ಪಯಣದ ಬಗ್ಗೆ ಬರೆದು 'ಮುಂದೇನು?' ಎಂದು ಪ್ರಶ್ನಿಸಿ ಕುತೂಹಲ ಮೂಡಿಸಿದ್ದಾರೆ.

PREV
16
ಅಗ್ನಿಪರೀಕ್ಷೆಯಲ್ಲಿ ತೀರ್ಪುಗಾರರು

ಬಿಗ್​ಬಾಸ್​​ ಸೀಸನ್​ 13ರಲ್ಲಿ ಸಾಮಾನ್ಯ ಜನರಿಗೆ ಪ್ರವೇಶಕ್ಕಾಗಿ ನಡೆದ ಅಗ್ನಿಪರೀಕ್ಷೆಯಲ್ಲಿ ಬಿಗ್​ಬಾಸ್​​ ಖ್ಯಾತಿಯ ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ಅವರೂ ತೀರ್ಪುಗಾರರಾಗಿದ್ದಾರೆ. ಇವರಿಬ್ಬರೂ ತಮ್ಮ ಮಾತುಗಳಿಂದ ಇದಾಗಲೇ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಅದಲ್ಲಿಯೂ ವಿನಯ್​ ಅವರು ಸ್ಪರ್ಧಿಗಳನ್ನು ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

26
ಸರ್ಕಲ್​ಗೆ ಸೈಡ್​

ಅದರಲ್ಲಿಯೂ ವಿನಯ್​ ಗೌಡ ಅವರು ಸರ್ಕಲ್​ಗೆ ಎಷ್ಟು ಸೈಡ್​ ಇರುತ್ತದೆ ಎನ್ನುವ ಮಾತಂತೂ ಸೋಷಿಯಲ್​ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್​ ಆಗುತ್ತಿದ್ದು, ಕಂಟೆಂಟ್​ ಕ್ರಿಯೇಟರ್ಸ್​ಗೆ ಆಹಾರವಾಗಿದೆ. ಎಐ ಜನರೇಟೆಡ್​ ವಿಡಿಯೋ ಮಾಡಿ, ಜನರು ಬಿದ್ದೂ ಬಿದ್ದೂ ನಗುವಂತೆ ಮಾಡುತ್ತಿದ್ದಾರೆ.

36
ಸೆಪ್ಟೆಂಬರ್ 6 ರಿಂದ ಶುರು

‘ಬಿಗ್ ಬಾಸ್‌ ಕನ್ನಡ ಸೀಸನ್‌-13’ ಸೆಪ್ಟೆಂಬರ್ 6 ರಿಂದ ಆರಂಭ ಆಗಲಿದೆ. ಕಿಚ್ಚ ಸುದೀಪ್‌ ಅವರನ್ನ ವೇದಿಕೆ ಮೇಲೆ ನೋಡುವುದಕ್ಕೆ ವೀಕ್ಷಕರು ಕಾಯುತ್ತಿದ್ದಾರೆ. ಈ ಜ್ಯೂರಿ ಮತ್ತು ಜಡ್ಜ್‌ಮೆಂಟ್‌ ಬಗ್ಗೆ ಸುದೀಪ್​ ಏನು ಹೇಳ್ತಾರೆ ಎಂಬುವುದೇ ಸದ್ಯದ ಕೂತೂಹಲದ ಘಟ್ಟ.

46
ವಿನಯ್​ ಗೌಡ ಪೋಸ್ಟ್​ ಶೇರ್​

ಇದರ ನಡುವೆಯೇ, ವಿನಯ್​ ಗೌಡ (Bigg Boss Vinay Gowda) ಅವರು ಸಂಗೀತಾ ಶೃಂಗೇರಿ ಅವರ ಜೊತೆಗಿರುವ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಬರೆದಿರುವ ಶೀರ್ಷಿಕೆ ಎಲ್ಲರ ಗಮನ ಸೆಳೆದಿದೆ.

56
ಸಂಚಲನ ಮೂಡಿಸಿದ್ದೇವೆ ಎಂದ ನಟ

ಇದರಲ್ಲಿ ವಿನಯ್​ ಗೌಡ ಅವರು, ಹರ ಹರ ಮಹಾದೇವದಲ್ಲಿ ಮಹಾದೇವ ಮತ್ತು ಸತಿಯಾಗಿ ನಾವಿಬ್ಬರೂ ಒಂದು ಮಾನದಂಡವನ್ನು ನಿಗದಿಪಡಿಸಿದ್ದೇವೆ. ಬಿಗ್ ಬಾಸ್ ಸೀಸನ್ 10 ಗೆ ಸ್ಪರ್ಧಿಗಳಾಗಿ ನಾವು ಸಂಚಲನ ಮೂಡಿಸಿದ್ದೆವು‘. ಈ ಕಾರ್ಯಕ್ರಮದ ಮಾನದಂಡವನ್ನು ಶಾಶ್ವತವಾಗಿ ಬದಲಾಯಿಸಿದ್ದೇವೆ. ಮತ್ತು ಈಗ, ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ತೀರ್ಪುಗಾರರಾಗಿ ಉನ್ನತ ಸ್ಥಾನಕ್ಕೇರಿದ್ದೇವೆ ಎಂದು ಬರೆದುಕೊಂಡಿದ್ದಾರೆ.

66
ಮುಂದೇನು ಎನ್ನುವ ಪ್ರಶ್ನೆ

ತಮಿಳು, ತೆಲುಗು ಮತ್ತು ಮಲಯಾಳಂ ಉದ್ಯಮಗಳಲ್ಲಿ ಪ್ರತಿಧ್ವನಿಸುತ್ತಿರುವ ಅಲೆಗಳನ್ನು ನಾವು ಸೃಷ್ಟಿಸುತ್ತಿರುವುದಾಗಿ ಹೇಳಿರುವ ನಟ, ಪ್ರತಿಯೊಂದು ಅಧ್ಯಾಯಕ್ಕೂ ಹೊಸ ಮಾನದಂಡದ ಅಗತ್ಯವಿತ್ತು. ಪ್ರತಿಯೊಂದು ಹಂತಕ್ಕೂ ಪ್ರಾಬಲ್ಯ ಬೇಕಿತ್ತು ಎಂದಿದ್ದಾರೆ. ಈ ಮೂಲಕ ಸಂಗೀತಾ ಶೃಂಗೇರಿ ಜೊತೆ ತಾವು ಅಂದಿಗೂ ಒಟ್ಟಿಗಿದ್ದು, ಎಂದಿಗೂ ಇದ್ದೇವೆ ಎಂದಿದ್ದಾರೆ. ಕೊನೆಯದಾಗಿ ಅವರು, ನಿಜವಾದ ಪ್ರಶ್ನೆಯೆಂದರೆ… ಮುಂದೇನು ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories