ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ರನ್ನು ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತ ಗೆಳತಿ ರಕ್ಷಿತಾ ಪ್ರೇಮ್ ಭೇಟಿಯಾಗಿದ್ದಾರೆ. ಈ ಭೇಟಿಯ ನಂತರ, ದರ್ಶನ್ ಜೊತೆಗಿನ ತಮ್ಮ ಆಳವಾದ ಸ್ನೇಹದ ಬಗ್ಗೆ ರಕ್ಷಿತಾ ಹಿಂದೆ ಮಾತನಾಡಿದ್ದ ವಿಡಿಯೋವೊಂದು ವೈರಲ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ (Darshan) ಅವರನ್ನು ಭೇಟಿ ಮಾಡಲು ಮೊನ್ನೆ ಮಂಗಳವಾರ ಪತ್ನಿ ವಿಜಯಲಕ್ಷ್ಮೀ ದರ್ಶನ್ (Vijayalakshmi Darshan) ಹಾಗೂ ಆಪ್ತ ಗೆಳತಿ, ನಟಿ ರಕ್ಷಿತಾ ಪ್ರೇಮ್ ಆಗಮಿಸಿದ್ದರು.
26
ರಕ್ಷಿತಾ ಪ್ರೇಮ್ ನೆನಹು
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ರಕ್ಷಿತಾ (Rakshita Prem) ಅವರು ದರ್ಶನ್ ಬಗ್ಗೆ ಹೇಳಿದ್ದ ವಿಡಿಯೋ ತುಣುಕು ಇದಾಗಿದೆ. ಅಷ್ಟಕ್ಕೂ ರಕ್ಷಿತಾ ಮತ್ತು ದರ್ಶನ್ ಅವರು ತುಂಬಾ ಆಪ್ತ ಸ್ನೇಹಿತರು. ಅದು ಎಷ್ಟರಮಟ್ಟಿಗಿನ ಸ್ನೇಹ ಎನ್ನುವುದಕ್ಕೆ ತಮಾಷೆಯ ಪ್ರಸಂಗವನ್ನು ರಕ್ಷಿತಾ ಈ ಷೋನಲ್ಲಿ ಶೇರ್ ಮಾಡಿಕೊಂಡಿದ್ದರು.
36
ಜೈಲಿನಲ್ಲಿ ಭೇಟಿ
ಜೈಲಿನಲ್ಲಿ ಸುಮಾರು ಒಂದು ಗಂಟೆ ಕಾಲ ದರ್ಶನ್ ಭೇಟಿಯಾದ ನಂತರ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಜೈಲಿನಿಂದ ಒಟ್ಟಿಗೆ ಹೊರಬಂದರು. ಈ ವೇಳೆ ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದೆ ಅಲ್ಲಿಂದ ನಿರ್ಗಮಿಸಿದರು. ಇದರ ಬೆನ್ನಲ್ಲೇ ಇದೀಗ ರಕ್ಷಿತಾ ಪ್ರೇಮ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗ್ತಿದೆ.
ದರ್ಶನ್ ಯಾವಾಗ್ಲೂ ಹೇಳ್ತಾನೆ, ನನ್ನ ಹೆಂಡ್ತಿ ತುಂಬಾ ಕೋಪ ಮಾಡಿಕೊಳ್ತಾಳೆ ಎಂದು. ಅದಕ್ಕೆ ನಾನು ಯಾಕೆ ಎಂದು ಕೇಳಿದಾಗ, ನೀನು ಯಾವ ಕಾರು ತಗೋತಿಯೋ ನಾನೂ ಅದನ್ನೇ ತೆಗೆದುಕೊಳ್ತೇನೆ. ಅದು ಯಾವ ಬಣ್ಣದ್ದು ಇರತ್ತೋ ನಾನೂ ಅದೇ ಬಣ್ಣದ್ದು ತೆಗೆದುಕೊಳ್ತೇನೆ. ನಿನ್ನ ಹತ್ರ ಇರೋ ಫೋನೇ ನನ್ನ ಹತ್ರಾನೂ ಇರತ್ತೆ. ಅದಕ್ಕಾಗಿ ಅವಳಿಗೆ ತುಂಬಾ ಕೋಪ ಎನ್ನುತ್ತಾನೆ ಎಂದು ರಕ್ಷಿತಾ ಹೇಳಿದ್ದರು.
56
ಇಬ್ಬರ ಮಕ್ಕಳೂ ಒಂದೇ ಕ್ಲಾಸ್
ಇದೀಗ ಕೋ ಇನ್ಸಿಡೆಂಟ್ ಏನೆಂದರೆ, ನನ್ನ ಮಗ ಮತ್ತು ಅವನ ಮಗ ಒಂದೇ ಸ್ಕೂಲ್ನಲ್ಲಿ ಒಂದೇ ಕ್ಲಾಸ್ನಲ್ಲಿ ಓದುತ್ತಾನೆ. ಶಾಲೆಗೆ ಹೋದಾಗ ನಾವಿಬ್ಬರೂ ಮೀಟ್ ಆಗುತ್ತೇವೆ. ಅಂಥ ಫ್ರೆಂಡ್ಷಿಪ್ ತಮ್ಮದು ಎಂದು ನೆನೆಪಿಸಿಕೊಂಡಿದ್ದಾರೆ ರಕ್ಷಿತಾ.
66
ಆರೋಗ್ಯ ವಿಚಾರಣೆ
ಇನ್ನು ಮೊನ್ನೆ ದರ್ಶನ್ ಅವರನ್ನು ರಕ್ಷಿತಾ ಮತ್ತು ವಿಜಯಲಕ್ಷ್ಮಿ ಭೇಟಿಯಾಗಲು ಹೋಗಿರುವ ವಿಷಯ ಹೇಳುವುದಾದರೆ, ಇವರಿಬ್ಬರೂ ಪ್ರತ್ಯೇಕವಾಗಿ ಜೈಲಿಗೆ ಆಗಮಿಸಿದ್ದರು. ದರ್ಶನ್ ಬಂಧನಕ್ಕೊಳಗಾದ ನಂತರ ರಕ್ಷಿತಾ ಅವರು ತಮ್ಮ ಗೆಳೆಯನನ್ನು ನೋಡಲು ಎರಡನೇ ಬಾರಿ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಸುಮಾರು ಸಮಯ ದರ್ಶನ್ ಅವರೊಂದಿಗೆ ಮಾತನಾಡಿ, ಅವರ ಆರೋಗ್ಯ ಮತ್ತು ಕುಶಲೋಪರಿ ವಿಚಾರಿಸಿದ ನಂತರ, ವಿಜಯಲಕ್ಷ್ಮಿ ಮತ್ತು ರಕ್ಷಿತಾ ಇಬ್ಬರೂ ಒಟ್ಟಿಗೆ ಜೈಲಿನಿಂದ ಹೊರಬಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.