Vijay Raghavendra ಜೊತೆ Anchor Anushree Photo Viral: ಚಿರಕಾಲ ಹೀಗೆ ಇರಲಿ ಸ್ನೇಹ ಎಂದ ಫ್ಯಾನ್ಸ್!

Published : Sep 14, 2023, 09:43 PM IST

ಸಿನಿಮಾ-ಕಿರುತೆರೆ ಎರಡರಲ್ಲೂ ವಿಜಯ ರಾಘವೇಂದ್ರ ಆ್ಯಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಮತ್ತೆ ಜಡ್ಜ್ ಆಗಿ ಭಾಗವಹಿಸಿದ್ದಾರೆ. ಆ್ಯಂಕರ್ ಅನುಶ್ರೀ ವಿಜಯ ರಾಘವೇಂದ್ರ ಜೊತೆಗಿನ ಪೋಟೋವನ್ನು ಹಂಚಿಕೊಂಡಿದ್ದಾರೆ. 

PREV
16
Vijay Raghavendra ಜೊತೆ Anchor Anushree Photo Viral: ಚಿರಕಾಲ ಹೀಗೆ ಇರಲಿ ಸ್ನೇಹ ಎಂದ ಫ್ಯಾನ್ಸ್!

ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ನಿಧನ ಬಳಿಕ ಮತ್ತೆ ಡಿಕೆಡಿ ಶೋಗೆ ಭಾಗಿಯಾಗಿದ್ದಾರೆ. ಪತ್ನಿ ಅಗಲಿಕೆಯ ನೋವಿನಲ್ಲೇ ಮತ್ತೆ ಕೆಲಸಗಳತ್ತ ಆ್ಯಕ್ಟಿವ್ ಆಗಿದ್ದಾರೆ. 

26

ಸಿನಿಮಾ-ಕಿರುತೆರೆ ಎರಡರಲ್ಲೂ ವಿಜಯ ರಾಘವೇಂದ್ರ ಆ್ಯಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಮತ್ತೆ ಜಡ್ಜ್ ಆಗಿ ಭಾಗವಹಿಸಿದ್ದಾರೆ. ಡಿಕೆಡಿಯಲ್ಲಿ ಶಿವರಾಜ್‌ಕುಮಾರ್, ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಜೊತೆ ವಿಜಯ ಕೂಡ ಜಡ್ಜ್ ಆಗಿ ಗಮನ ಸೆಳೆದಿದ್ದರು. 

36

ಈ ಕಾರ್ಯಕ್ರಮವನ್ನು ಆ್ಯಂಕರ್ ಅನುಶ್ರೀ ನಡೆಸಿಕೊಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಜಯ ರಾಘವೇಂದ್ರ ಜೊತೆಗಿನ ಪೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಟೋ ಸಖತ್ ವೈರಲ್ ಆಗಿದೆ.

46

ಕೆಲವು ಭಾವಚಿತ್ರಗಳು ಭಾವಗಳನ್ನು ತಾನಾಗೇ ನುಡಿಯುತ್ತೆ. ಸ್ನೇಹ ಬಾಳನ್ನು ಬೆಳಗುತ್ತೆ. Best moment with Bestie ವಿಜಯ ರಾಘವೇಂದ್ರ ಎಂದು ಬರೆದುಕೊಂಡಿದ್ದಾರೆ.

56

ಈ ಫೋಟೋಗೆ ನೆಟ್ಟಿಗರು, ಮರೆಯಲಾಗದ ಬಂಧ, ನೆನಪುಗಳು ಶಾಶ್ವತ, ಚಿನ್ನಾರಿಮುತ್ತ! ಹೀಗೆ ನಗುನಗುತ್ತಾ ಇರಿ, ದುಃಖದಿಂದ ಸುಖದ ನಿಲ್ದಾಣಕ್ಕೆ ಹಾಗೂ ಬಿಗ್ ಬಾಸ್ ಸೀಸನ್ 1 ರಿಂದ DKD ವರೆಗೆ ನಿಮ್ಮ ಸ್ನೇಹವು ಅಂತ್ಯವಿಲ್ಲ ಮತ್ತು ಲೆಕ್ಕವಿಲ್ಲದಷ್ಟು ನೆನಪುಗಳು ನಿಮ್ಮ ಜೀವನದುದ್ದಕ್ಕೂ ಇರುತ್ತದೆ ಎಂದೆಲ್ಲಾ ನೆಟ್ಟಿಗರು ಕಾಮೆಂಟಿಸಿದ್ದಾರೆ.

66

ಇನ್ನು ವಿಜಯ-ಸ್ಪಂದನಾ ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾಗಿದ್ದರು. ಈ ಜೋಡಿಗೆ ಪುತ್ರ ಶೌರ್ಯ ಜನಿಸಿದರು. ಕಳೆದ ತಿಂಗಳು ಕುಟುಂಬದ ಆಪ್ತರ ಜೊತೆ ಥೈಲ್ಯಾಂಡ್‌ಗೆ ಹೋಗಿದ್ದಾಗ, ಹಾರ್ಟ್ ಅಟ್ಯಾಕ್‌ನಿಂದ ವಿಜಯ ಪತ್ನಿ ನಿಧನರಾದರು. ಸ್ಪಂದನಾ ಅಗಲಿಕೆ ವಿಜಯ ಕುಟುಂಬಕ್ಕೆ ಶಾಕ್ ಕೊಟ್ಟಿದೆ.

Read more Photos on
click me!

Recommended Stories