ನಟ ಉಪೇಂದ್ರ ಮನೆಯಲ್ಲಿ ಮದುವೆ ಸಂಭ್ರಮ: ಕ್ಯೂಟ್​ ಫೋಟೋಸ್​​ ಶೇರ್​ ಮಾಡಿಕೊಂಡ ನಟಿ ಪ್ರಿಯಾಂಕಾ

Suchethana D   | ANI
Published : Nov 15, 2026, 06:54 PM IST

ಸ್ಯಾಂಡಲ್ ವುಡ್ ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರ ವಿವಾಹ ಪೂರ್ವ ಶಾಸ್ತ್ರಗಳು ಅದ್ಧೂರಿಯಾಗಿ ನಡೆಯುತ್ತಿವೆ. ನಿರಂಜನ್ ಅವರು ಸಂಜನಾ ಬಿ ರಾಜ್ ಅವರೊಂದಿಗೆ ಹಸೆಮಣೆ ಏರುತ್ತಿದ್ದು, ಉಪೇಂದ್ರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ.

PREV
17
ನಟ ಉಪೇಂದ್ರ ಮನೆಯಲ್ಲಿ ಮದುವೆ ಸಂಭ್ರಮ

ಸ್ಯಾಂಡಲ್​ವುಡ್​ ಜೋಡಿ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಮನೆಯಲ್ಲೀಗ ಮದುವೆಯ ಸಂಭ್ರಮ ನಡೆಯುತ್ತಿದೆ. ಉಪೇಂದ್ರ ಅವರ ಅಣ್ಣ ಸುಧೀಂದ್ರ ಪುತ್ರ ನಿರಂಜನ್ ಅವರ ವಿವಾಹ ಪೂರ್ವ ಶಾಸ್ತ್ರಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ಮೆಹಂದಿ ಶಾಸ್ತ್ರ ಮುಗಿದಿದೆ. ಇದರ ಕೆಲವು ಫೋಟೋಗಳನ್ನು ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಶೇರ್​ ಮಾಡಿಕೊಂಡಿದ್ದಾರೆ.

27
ನಟ ನಿರಂಜನ್​ ವಿವಾಹ

ನಿರಂಜನ್​ ಅವರು, ಸುಧೀಂದ್ರ - ವೀಣಾ ದಂಪತಿಯ ಪುತ್ರನಾಗಿದ್ದಾರೆ. ಇದಾಗಲೇ ಕೆಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ‘ಸೆಕೆಂಡ್ ಹಾಫ್’, ‘ಸೀತಾ ಪಯಣಂ’ ಮುಂತಾದ ಸಿನಿಮಾಗಳಲ್ಲಿ ನಟ ನಿರಂಜನ್ ಸುಧೀಂದ್ರ ಮಿಂಚಿದ್ದಾರೆ. ಇವರ ಬಾಳಲ್ಲೀಗ ಸಂಜನಾ ಬಿ ರಾಜ್ ಎಂಟ್ರಿಕೊಟ್ಟಿದ್ದು, ಮದುವೆಯ ಶಾಸ್ತ್ರಗಳು ನಡೆಯುತ್ತಿವೆ.

37
ಸಿನಿಮಾಗಳಲ್ಲಿ ನಟನೆ

‘ಸೆಕೆಂಡ್ ಹಾಫ್’, ‘ಸೀತಾ ಪಯಣಂ’ ಮುಂತಾದ ಸಿನಿಮಾಗಳಲ್ಲಿ ನಟ ನಿರಂಜನ್ ಸುಧೀಂದ್ರ ಮಿಂಚಿದ್ದಾರೆ. ಇವರ ಬಾಳಲ್ಲೀಗ ಸಂಜನಾ ಬಿ ರಾಜ್ ಎಂಟ್ರಿಕೊಟ್ಟಿದ್ದು, ಮದುವೆಯ ಶಾಸ್ತ್ರಗಳು ನಡೆಯುತ್ತಿವೆ.

47
ಉಪೇಂದ್ರ ವಿಷ್​

ನನ್ನ ಪ್ರೀತಿಯ ಪುಟ್ಟ ನಿರಂಜನ್ ಮತ್ತು ಸಂಜನಾ ನಿಮ್ಮ ಈ ಪ್ರೀತಿಯ ಪಯಣ ನಿರಂತರವಾಗಿರಲಿ ಎಂದು ನಟ ಉಪೇಂದ್ರ ಕೂಡ ವಿಷ್​ ಮಾಡಿದ್ದರು. ಇದೀಗ ಮದುವೆಯ ಸಂಭ್ರಮ ನಡೆಯುತ್ತಿದೆ.

57
ಮೇನಲ್ಲಿ ಎಂಗೇಜ್​ಮೆಂಟ್​

ರಂಜನ್ ಸುಧೀಂದ್ರ ಮತ್ತು ಸಂಜನಾ ರಾಜ್ ಅವರ ನಿಶ್ಚಿತಾರ್ಥವು ಮೇ 25, 2026 ರಂದು ಬೆಂಗಳೂರಿನಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತ್ತು.

67
ತಾರೆಯರ ಸಮಾಗಮ

ಉಪೇಂದ್ರ ಒಡೆತನದ ರುಪ್ಪೀಸ್ ರೆಸಾರ್ಟ್‌ನಲ್ಲಿ ಮೊನ್ನೆ ಅರಿಶಿನ ಶಾಸ್ತ್ರ ನಡೆದಿತ್ತು. ಹಳದಿ ಶಾಸ್ತ್ರದ ವೇಳೆ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಕುಣಿದು ಕುಪ್ಪಳಿಸಿದ್ದಾರೆ. ಶಿಲ್ಪಾ ಗಣೇಶ್, ಕಾರುಣ್ಯ ರಾಮ್, ಇಂದು ಸಮರ್ಥ್, ಸುಜಾತಾ ಅಕ್ಷಯ್ ಮುಂತಾದ ತಾರೆಯರು ನಿರಂಜನ್ ಹಳದಿ ಶಾಸ್ತ್ರಕ್ಕೆ ಹಾಜರಿದ್ದರು.

77
ಡಾನ್ಸ್ ಮಾಡಿದ ರಿಯಲ್​ ಸ್ಟಾರ್​

ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಕುಟುಂಬದವರು ಈ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಖತ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories