ನಟ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಉಪಾಸನಾ ಅವರ ಬೇಬಿ ಬಂಪ್ ಫೋಟೋ ವೈರಲ್ ಆಗಿದ್ದು, 'ಡಬಲ್ ಸರ್ಪ್ರೈಸ್' ಎಂದು ಹೇಳುವ ಮೂಲಕ ಅವಳಿ ಮಕ್ಕಳ ಸುಳಿವು ನೀಡಿದ್ದಾರೆ.
ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ದಂಪತಿ ಎರಡು ವರ್ಷಗಳ ಹಿಂದೆ ಮಗಳು ಕ್ಲಿಂಕಾರಾಳನ್ನು ಬರಮಾಡಿಕೊಂಡಿದ್ದರು. ಈಗ ಎರಡನೇ ಬಾರಿಗೆ ರಾಮ್ ಚರಣ್-ಉಪಾಸನಾ ಪೋಷಕರಾಗಲಿದ್ದಾರೆ. ಇದೀಗ ಉಪಾಸನಾ ಕೊನಿಡೆಲಾ ಅವರ ಬೇಬಿ ಬಂಪ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
25
ಉಪಾಸನಾ ಬೇಬಿ ಬಂಪ್ ಫೋಟೋ
ಸೀಮಂತದ ಬಳಿಕ ಉಪಾಸನಾ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸೀಮಂತದಲ್ಲಿ ವೆಂಕಟೇಶ್ ದಂಪತಿ, ನಯನತಾರಾ ದಂಪತಿ, ವರುಣ್ ತೇಜ್ ದಂಪತಿ ಭಾಗಿಯಾಗಿದ್ದರು. ಸೀಮಂತದ ಸಣ್ಣ ವಿಡಿಯೋ ತುಣುಕ ಸಹ ವೈರಲ್ ಆಗಿತ್ತು. ಇದೀಗ ಉಪಾಸನಾ ಬೇಬಿ ಬಂಪ್ ಫೋಟೋ ನೋಡಿದ ಅಭಿಮಾನಿಗಳು ಗಂಡು ಮಗು ಎಂದು ಕಮೆಂಟ್ ಮಾಡುತ್ತಿದ್ದಾರೆ.
35
ರಾಮ್ ಚರಣ್ ಮನೆಯಲ್ಲಿ ಜಪಾನಿನ ಅಡುಗೆಯವರು
ಇತ್ತೀಚೆಗೆ ರಾಮ್ ಚರಣ್ ನಿವಾಸದಲ್ಲಿ ಜಪಾನಿನ ಪ್ರಸಿದ್ಧ ಬಿರಿಯಾನಿಯನ್ನು ತಯಾರಿಸಲಾಗಿತ್ತು. ಜಪಾನಿನ ಪ್ರಸಿದ್ಧ ಬಾಣಸಿಗ ತಕಮಾಸ ಒಸಾವಾ ಅವರೇ ಆಗಮಿಸಿ ಬಿರಿಯಾನಿ ತಯಾರಿಸಿದ್ದರು. ನಂತರ ಅವರೇ ರಾಮ್ ಚರಣ್ ಕುಟುಂಬಕ್ಕೆ ಬಿರಿಯಾನಿಯನ್ನು ಸರ್ವ ಮಾಡಿದ್ದರು. ಈ ವೇಳೆ ಸುಂದರ ಕ್ಷಣಗಳನ್ನು ಬಾಣಸಿಗ ತಕಮಾಸ ಒಸಾವಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ಪೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.
ಉಪಾಸನಾ ಅವರು ಇದು ಡಬಲ್ ಸರ್ಪ್ರೈಸ್, ಡಬಲ್ ಸಂತೋಷ ಎಂದು ಹೇಳುವ ಮೂಲಕ ಅವಳಿ ಮಕ್ಕಳ ತಾಯಿಯಾಗುತ್ತಿರುವ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು, ಜೂನಿಯರ್ ರಾಮ್ ಚರಣ್ ಬರೋದು ಪಕ್ಕಾ ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಉಪಾಸನಾ ಅವರು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷೆಯಾಗಿದ್ದಾರೆ.
ರಾಮ್ ಚರಣ್ ಪ್ರಸ್ತುತ `ಪೆದ್ದಿ` ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಮುಂದಿನ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.