ಮದುವೆ ದಿನ ವಿಶೇಷ ಚೇತನ ತಂಗಿಗೆ ಊಟ ಮಾಡಿಸಿದ ಖ್ಯಾತ ನಟಿ; ನೋಡುತ್ತ ಕೂತ ಗಂಡ; Video Viral

Published : Jan 06, 2026, 11:36 AM IST

Actress Marriage: ಮದುವೆ ಆಗುವ ಹುಡುಗಿ-ಹುಡುಗಿ ಅಂದು ಯಾವಾಗಲೂ ಸುಮಧುರ ಕ್ಷಣಗಳನ್ನು ಕಳೆಯಲು ಬಯಸುತ್ತಾರೆ. ಸಂಗೀತದಲ್ಲೋ, ಊಟ ಮಾಡುವಾಗಲೂ ಕೂಡ ಪರಸ್ಪರ ಒಬ್ಬರಿಗೆ ಒಬ್ಬರು ಟೈಮ್‌ ಕೊಡುತ್ತಾರೆ. ನಟಿ ಪಾರ್ವತಿ ಅವರು ಮದುವೆ ವೇಳೆ ವಿಶೇಷಚೇತನ ತಂಗಿಗೆ ಊಟ ಮಾಡಿಸಿರುವ ವಿಡಿಯೋ ವೈರಲ್‌ ಆಗ್ತಿದೆ. 

PREV
15
ಮದುವೆಯಾದ ಖ್ಯಾತ ನಟಿ

ಜನಪ್ರಿಯ ಧಾರಾವಾಹಿ 'ಅಡ್ವೊಕೇಟ್ ಅಂಜಲಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಪಾರ್ವತಿ ಎಸ್. ಅಯ್ಯರ್ ಅವರು ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನೂಪ್ ಕೃಷ್ಣ ಎನ್ನುವವರ ಜೊತೆ ಅವರ ಮದುವೆ ನಡೆದಿದೆ.

25
ಅನೇಕರಿಂದ ಶುಭಾಶಯ

'ಅಡ್ವೊಕೇಟ್ ಅಂಜಲಿ' Asianet ಮಲಯಾಳಂ ಧಾರಾವಾಹಿಯ ನಟಿ ಪಾರ್ವತಿ ಎಸ್ ಅಯ್ಯರ್ ನಟಿಸಿದ್ದರು. ಕೇರಳದಲ್ಲಿ ನಡೆದ ಈ ಮದುವೆ ಭಾರೀ ಫೇಮಸ್‌ ಆಗಿದೆ. ಸಂಪ್ರದಾಯಬದ್ಧವಾಗಿ ಈ ಜೋಡಿಯ ಮದುವೆ ನೆರವೇರಿದೆ. ಇವರ ಮದುವೆ ಫೋಟೋ, ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಭಿಮಾನಿಗಳು ಮತ್ತು ಸಹನಟರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

35
ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದ ಸೀರುಯಲ್

ಪಾರ್ವತಿ ಅವರು ಧಾರಾವಾಹಿಯ ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ 'ಅಡ್ವೊಕೇಟ್ ಅಂಜಲಿ' ಧಾರಾವಾಹಿಯ ಅಂಜಲಿ ಪಾತ್ರ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ.

45
ಮದುವೆ ಊಟ ಮಾಡಿಸಿದ್ರು

ಇನ್ನು ಮದುವೆ ಆಗಿ ಊಟ ಮಾಡುವಾಗಲೂ ಕೂಡ ಅವರು ತಂಗಿಗೆ ಊಟ ಮಾಡಿಸಿರುವ ವಿಡಿಯೋ ವೈರಲ್‌ ಆಗಿದೆ. ಸಾಮಾನ್ಯವಾಗಿ ಮದುವೆ ಆದ ದಿನ ಹುಡುಗ, ಹುಡುಗಿಗೆ ಊಟ ಮಾಡಿಸೋದು, ಹುಡುಗಿ ಹುಡುಗನಿಗೆ ಊಟ ಮಾಡಿಸೋದು ಸಂಪ್ರದಾಯ. ಈ ಮಧ್ಯೆ ತಂಗಿಗೆ ಊಟ ಮಾಡಿಸಿರೋದು ಅನೇಕರ ಮೆಚ್ಚುಗೆ ಗಳಿಸಿದೆ. ಆ ವೇಳೆ ಗಂಡ ನಟಿಯ ಮುಖ ನೋಡಿಕೊಂಡು ಕೂತಿದ್ದಾರೆ.

55
ತಂಗಿ ಜೊತೆ ಡ್ಯಾನ್ಸ್

ಪಾರ್ವತಿ ಅವರು ಸಂಗೀತದ ಸಮಯದಲ್ಲಿ ವಿಶೇಷಚೇತನ ತಂಗಿಯ ಜೊತೆ ಡ್ಯಾನ್ಸ್‌ ಮಾಡಿರುವ ವಿಡಿಯೋ ಕೂಡ ವೈರಲ್‌ ಆಗ್ತಿದೆ. ಪಾರ್ವತಿ ಅವರು ತಮ್ಮ ಖುಷಿಯ ಸಮಯದಲ್ಲಿ ಕೂಡ ತಂಗಿಯನ್ನು ಮರೆತಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories