Trisha Krishnan: ತ್ರಿಷಾ ಕೃಷ್ಣನ್ ನೋಡಲು ಕಾದು ಕುಳಿತಿರೋ ಫ್ಯಾನ್ಸ್‌ಗೆ ಗುಡ್ ನ್ಯೂಸ್.. ಅಕ್ಟೋಬರ್ 16ಕ್ಕೆ ಸಿಗ್ತೀನಿ ಎಂದ ನಟಿ!

Published : Jul 06, 2026, 12:24 PM IST

ನಟಿ ತ್ರಿಷಾ ಅವರು ಸದ್ಯಕ್ಕೆ ಭಾರೀ ಟ್ರೆಂಡಿಂಗ್‌ನಲ್ಲಿ ಇರೋ ನಟಿ. ಕಾರಣ, ಸಿನಿಮಾ ನಟಿಯಾಗಿ ಮಾತ್ರವಲ್ಲ ವೈಯಕ್ತಿಕ ವಿಷಯದ ಮೂಲಕವೂ ಕೂಡ ನಟಿ ತ್ರಿಷಾ ಅವರು ಸಖತ್ ಸುದ್ದಿಯಲ್ಲಿದ್ದಾರೆ. ಈಗ ಮತ್ತೊಂದು ಹೊಸ ಸುದ್ದಿ ಬಂದಿದೆ.. 

PREV
16

ಸೌತ್ ಇಂಡಿಯಾದ ಸ್ಟಾರ್ ನಟಿ, 2 ದಶಕಗಳಿಂದ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಆಳುತ್ತಿರುವ ನಟಿಯರಲ್ಲಿ ತ್ರಿಷಾ ಕೃಷ್ಣನ್ (Trisha Krishnan) ಸಹ ಒಬ್ಬರು. ಈ ನಟಿಗೆ ಫ್ಯಾನ್ಸ್ ಫಾಲೋವರ್ಸ್‌ ಕೂಡ ಬಹಳಷ್ಟಿದ್ದಾರೆ. ಸೂರ್ಯ ಹಾಗೂ ತ್ರಿಷಾ ನಟನೆಯ 'ಕರಪ್ಪು' ಸಿನಿಮಾ ಬಳಿಕ ತ್ರಿಷಾ ಕೃಷ್ಣನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಆದರೆ, ಫ್ಯಾನ್ಸ್ ಇನ್ನೂ ಕರುಪ್ಪು ಹ್ಯಾಂಗೋವರ್‌ನಿಂದ, ತ್ರಿಷಾ ಮೋಡಿಯಿಂದ ಹೊರಗೆ ಬಂದಿಲ್ಲ.

26

ನಟಿ ತ್ರಿಷಾ ಅವರು ಸದ್ಯಕ್ಕೆ ಭಾರೀ ಟ್ರೆಂಡಿಂಗ್‌ನಲ್ಲಿ ಇರೋ ನಟಿ. ಕಾರಣ, ಸಿನಿಮಾ ನಟಿಯಾಗಿ ಮಾತ್ರವಲ್ಲ ವೈಯಕ್ತಿಕ ವಿಷಯದ ಮೂಲಕವೂ ಕೂಡ ನಟಿ ತ್ರಿಷಾ ಅವರು ಸಖತ್ ಸುದ್ದಿಯಲ್ಲಿದ್ದಾರೆ. ಸದ್ಯ ತಮಿಳುನಾಡಿನ ಸಿಎಂ ಆಗಿ ಆಡಳಿತ ನಡೆಸುತ್ತಿರುವ ನಟ ದಳಪತಿ ವಿಜಯ್ ಅವರ ಜೊತೆಗಿನ 'ಸ್ನೇಹ ಸಂಬಂಧ'ದ ಮೂಲಕವೂ ಕೂಡ ತ್ರಿಷಾ ಸುದ್ದಿಯಲ್ಲಿದ್ದಾರೆ.

36

ವಿಜಯ್ ಚುನಾವಣೆಯಲ್ಲಿ ಗೆದ್ದಾಗ ನಡೆದ ಸಂಭ್ರಾಚರಣೆ ವೇಳೆ ಇರಬಹುದು, ವಿಜಯ್ ಸಿಎಂ ಪಟ್ಟದಾಗಿನ ಸಮಯ ಇರಬಹುದು, ಎಲ್ಲಾ ವೇಳೆ ನಟಿ ತ್ರಿಷಾ ಅವರು ಭಾರೀ ಸುದ್ದಿಗೆ ಆಹಾರವಾಗಿದ್ದಾರೆ. ಅದಕ್ಕೆಲ್ಲಾ ಕಾರಣ, ಅವರು ವಿಜಯ್ ಜೊತೆ ಇದ್ದ ರೀತಿ. ತೀರಾ ಆಪ್ತರ ರೀತಿಯಲ್ಲೇ ನಟಿ ತ್ರಿಷಾ ಕೃಷ್ಣನ್ ಅವರು ವಿಜಯ್ ಸುತ್ತಮುತ್ತವೇ ಸುತ್ತುತ್ತಿದ್ದು ಅವರ ಫ್ಯಾಮಿಲಿ ಮೆಂಬರ್ಸ್‌ ತರಹವೇ ಕಾಣಿಸಿಕೊಂಡಿದ್ದರು. ಈ ಮೂಲಕ ಅವರು ವಿಜಯ್ ಜೋಸೆಫ್ ಅವರಿಗೆ ಅತ್ಯಂತ ಆಪ್ತೆ ಎಂದೇ ಬಿಂಬಿಸುವಂತೆ ಆಯ್ತು.

46

ಇತ್ತೀಚೆಗೆ ವಿಜಯ್ ಹುಟ್ಟುಹಬ್ಬದ ಸಮಯದಲ್ಲಿ ಕೂಡ ನಟಿ ತ್ರಿಷಾ ಕೃಷ್ಣನ್ ಅವರು ವಿಜಯ್ ಜೊತೆಗೆ ತಾವು ಇರುವ, ಜೊತೆಗೆ ಸ್ಪೆಷಲ್ ಕೇಕ್ ಇಟ್ಟುಕೊಂಡಿರುವ ಫೋಟೋವೊಂದನ್ನು ಶೇರ್ ಮಾಡುವ ಮೂಲಕ ಭಾರೀ ಸಂಚಲನ ಸೃಷ್ಟಿಸಿದ್ದರು. ಈ ಸುದ್ದಿ ಅದೆಲ್ಲಿಗೆ ಹೋಗಿತ್ತು ಎಂದರೆ, ತ್ರಿಷಾ ಜೊತೆ ವಿಜಯ್ ಏಕಾಂತದಲ್ಲಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ಎಂದೇ ಟ್ರೆಂಡಿಂಗ್‌ ಸುದ್ದಿ ಆಗಿತ್ತು. ಆದರೆ ಆ ಬಗೆಗಿನ ಸತ್ಯಾಸತ್ಯತೆ ಇನ್ನೂ ಹೊರಗೆ ಬಂದಿಲ್ಲ.

56

ಅವೆಲ್ಲಾ ಏನೇ ಇರಲಿ, ನಟಿ ತ್ರಿಷಾಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ, ಅವರ ಸಿನಿಮಾಗಳನ್ನು ನೋಡಲು ಕಾದು ಕುಳಿತಿದ್ದಾರೆ ಎಂಬ ಮಾತಂತೂ ಸುಳ್ಳಲ್ಲ. ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಅವರ ಅಧಿಕೃತ ಖಾತೆಗೇ, 'ತ್ರಿಷಾ ಮೇಡಂ, ನಾವು ನಿಮ್ಮನ್ನು ಮತ್ತೆ ನೋಡೋದು ಯಾವಾಗ?' ಎಂದು ನೇರವಾಗಿಯೇ ಪ್ರಶ್ನೆ ಮಾಡುತ್ತಿದ್ದಾರೆ.

66

ಫ್ಯಾನ್ಸ್ ಪ್ರಶ್ನೆಗೆ ಉತ್ತರಿಸಿರುವ ನಟಿ 'ಹೌದು, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಾನೂ ಕೂಡ ನಿಮ್ಮನ್ನು ತುಂಬಾ ಟೈಂ ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ನೀವೇ ನನ್ನ ಪಾಲಿನ ಹಿತೈಷಿಗಳು, ನೀವೇ ನನ್ನ ಯಶಸ್ಸಿಗೆ ಕಾರಣಕರ್ತರು. ಹೀಗಾಗಿ ಇನ್ನು 3 ತಿಂಗಳಲ್ಲಿ ನಿಮ್ಮ ಮುಂದೆ ಬರುತ್ತೇನೆ' ಎಂದಿದ್ದಾರೆ.

ಅಷ್ಟೇ ಅಲ್ಲ, ನಟಿ ತ್ರಿಷಾ ಅವರು 'ನಾನು 16 ಅಕ್ಟೋಬರ್ 2026ರಂದು ನಿಮ್ಮನ್ನು ನೋಡಲು ಬರುತ್ತಿದ್ದೇನೆ. ವೆಲ್‌ಕಂ ಮಾಡಲು ರೆಡಿಯಾಗಿ' ಎಂದಿದ್ದಾರೆ. ಹಾಗಿದ್ದರೆ ನಟಿ ತ್ರಿಷಾ ಅವರು ಅಭಿಮಾನಿಗಳಿಗೆ ಎಲ್ಲಿ ಸಿಗಲಿದ್ದಾರೆ? ತಮ್ಮ ಫ್ಯಾನ್ಸ್‌ಗಳನ್ನು ಎಲ್ಲಿ ಭೇಟಿ ಆಗಲಿದ್ದಾರೆ? ಇಲ್ಲೇ ಇರೋದು ಗುಟ್ಟು!..

ನಟಿ ತ್ರಿಷಾ ಕೃಷ್ಣನ್ ಅವರು ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿರುವ 'ವಿಶ್ವಂಬರ' (Vishwambhara) ಚಿತ್ರವು 16 ಅಕ್ಟೋಬರ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ತೆರೆಯೆ ಮೇಲೆ ಅಂದು ತ್ರಿಷಾ ಅವರು ತಮ್ಮ ಅಭಿಮಾನಿಗಳಿಗೆ 'ದರ್ಶನ' ನೀಡಲಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories