ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸೌತ್ ಇಂಡಿಯನ್ ಸಿನಿಮಾಗಳಿವು

First Published | Sep 22, 2024, 4:15 PM IST

ಇತ್ತೀಚಿನ ವರ್ಷಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಲಿಸ್ಟ್‌ನಲ್ಲಿ ಕನ್ನಡದ ಯಾವ ಸಿನಿಮಾ ಇದೆ ತಿಳಿಯಲು ಈ ಸುದ್ದಿ ಓದಿ

ಮೊದಲನೇಯದಾಗಿ ಬಾಹುಬಲಿ 2, ಎಸ್‌ಎಸ್ ರಾಜಮೌಳಿ ನಿರ್ದೇಶನದ ಈ ಸಿನಿಮಾ 1810 ಕೋಟಿ ರೂಪಾಯಿಗಳನ್ನು ಗಳಿಸಿದೆ.  ಪ್ರಭಾಸ್‌, ಅನುಷ್ಕಾ ಶರ್ಮಾ, ರಾಣಾ ದಗ್ಗುಬಾಟಿ ತಮನ್ನಾ ಈ ಸಿನಿಮಾದ ಪ್ರಮುಖ ಭೂಮಿಕೆಯಲ್ಲಿದ್ದಾರೆ. 
 

ಎರಡನೇಯದಾಗಿ ಆರ್‌ಆರ್‌ಆರ್ : ಇದು ಕೂಡ ರಾಜಮೌಳಿ ನಿರ್ದೇಶನದ ದಕ್ಷಿಣ ಭಾರತದ ಮತ್ತೊಂದು ಸಿನಿಮಾ, ಬ್ರಿಟಿಷರ ಕಾಲದ ಕತೆಯನ್ನು ಹೊಂದಿದ್ದ ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್‌ ಹಾಗೂ ರಾಮ್‌ಚರಣ್ ಅಮೋಘವಾಗಿ ನಟಿಸಿದ್ದಾರೆ. ಈ ಸಿನಿಮಾ 1410 ಕೋಟಿ ರೂಪಾಯಿ ಗಳಿಕೆ ಮಾಡಿದೆ

Tap to resize

ಮೂರನೇಯದಾಗಿ ಕಲ್ಕಿ 2898 ಎಡಿ (Kalki 2898 AD): ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದು,  ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್‌ ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಸಿನಿಮಾ ಮುಖ್ಯ ಭೂಮಿಕೆಯಲ್ಲಿದ್ದಾರೆ.  ಪೌರಾಣಿಕ ಕತೆಗೆ ಲಿಂಕ್ ಆಗಿರುವ ಈ ಸಿನಿಮಾವೂ 1226 ಕೋಟಿ ಗಳಿಕೆ ಮಾಡಿದೆ.

ನಾಲ್ಕನೇಯದಾಗಿ ನಮ್ಮ ಕನ್ನಡದ ಹೆಮ್ಮೆಯ ನಟ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ, ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವೂ ಬಾಕ್ಸಾಫೀಸ್‌ನಲ್ಲಿ 1221 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಯಶ್‌,  ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

5ನೇಯದಾಗಿ 2.0: ಎಸ್ ಶಂಕರ್ ನಿರ್ದೇಶನದ 2018ರ ತಮಿಳು ಸಿನಿಮಾವಾಗಿದ್ದು, ಈ 2.0 ಸಿನಿಮಾದಲ್ಲಿ 3ಡಿ ವಿಜ್ಞಾನಕ್ಕೆ ಸಂಬಂಧಿಸಿದ ಫ್ಯಾಂಟಸಿ ಕಥಾ ಹಂದರವನ್ನು ಹೊಂದಿದೆ. ತಮಿಳು ಸೂಪರ್ ಸ್ಟಾರ ರಜನಿಕಾಂತ್, ಬಾಲಿವುಡ್ ಕಿಲಾಡಿ ಅಕ್ಷಯ್‌ ಕುಮಾರ್‌ ಹಾಗೂ ಬ್ರಿಟಿಷ್ ನಟಿ ಆಮಿ ಜಾಕ್ಸನ್ ಈ  ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಒಟ್ಟು ಗಳಿಕೆ  820 ಕೋಟಿ

ಸಲಾರ್: 2023ರ ತೆಲುಗು ಫ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಈ ಸಿನಿಮಾವನ್ನು ಕೂಡ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿ ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಈ ಸಿನಿಮಾ 750 ಕೋಟಿ ರೂ ಗಳಿಕೆ ಮಾಡಿದೆ.

ಬಾಹುಬಲಿ ದ ಬಿಗಿನಿಂಗ್: ಸಿನಿಮಾವನ್ನು ಎಸ್‌ಎಸ್‌ ರಾಜಮೌಳಿ ನಿರ್ದೇಶಿಸಿದ್ದು, ಇದರಲ್ಲಿಯೂ ಬಾಹುಬಲಿ -2ನಲ್ಲಿ ಇದ್ದ ನಟರೇ ಅಭಿನಯಿಸಿದ್ದಾರೆ. ಈ ಸಿನಿಮಾ 2015ರಲ್ಲಿ ತೆರೆಕಂಡ ಈ ಸಿನಿಮಾ 650 ಕೋಟಿ ಗಳಿಕೆ ಮಾಡಿದೆ.

Leo Movie

ಲಿಯೋ: ಲೋಕೇಶ್ ಕನಗರಾಜ್ ನಿರ್ದೇಶನದ 2023ರ ಈ ತಮಿಳು ಸಿನಿಮಾದಲ್ಲಿ ದಳಪತಿ ವಿಜಯ್, ಅರ್ಜುನ್ ಸರ್ಜಾ, ಸಂಜಯ್ ದತ್, ತ್ರಿಷಾ ಅಭಿನಯಿಸಿದ್ದು 630 ಕೋಟಿ ರೂಪಾಯಿ ಗಳಿಕೆ ಮಾಡಿದೆ. 

ಜೈಲರ್‌: ರಜನಿಕಾಂತ್ ಅಭಿನಯದ ಈ ಜೈಲರ್‌ ತಮಿಳು ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್‌ ನಿರ್ದೇಶಿಸಿದ್ದು, 610 ಕೋಟಿ ರೂಪಾಯಿಯನ್ನು ಗಳಿಕೆ ಮಾಡಿದೆ.

ಪೊನ್ನಿಯಿನ್ ಸೆಲ್ವನ್1 2022ರ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಈ ಸಿನಿಮಾ ಬಾಕ್ಸಾಫೀಸ್ ಹಿಟ್ ಆಗಿದ್ದು,  520 ಕೋಟಿ ಗಳಿಕೆ ಮಾಡಿದೆ. ವಿಕ್ರಂ, ಕಾರ್ತಿ, ಜಯಂ ರವಿ, ತ್ರಿಷಾ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿದ್ದಾರೆ.
 

Latest Videos

click me!