25 ಥಿಯೇಟರ್‌ನಲ್ಲಿ ಬಿಡುಗಡೆ; ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಲಿಲ್ಲ!

Published : Sep 21, 2025, 03:10 PM IST

ಹಾರರ್ ಸಿನಿಮಾ ಇಂದಿಗೂ ವಿಶ್ವದ ಅತ್ಯಂತ ಭಯಾನಕ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ. ಶಾಪಗ್ರಸ್ಥ ಎಂದು ಕರೆಯಲ್ಪಡುವ ಈ ಚಿತ್ರವು ಹಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿತ್ತು ಮತ್ತು ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಸುಮಾರು 3800 ಕೋಟಿ ರೂ. ಗಳಿಸಿತ್ತು. 

PREV
16
ಹಾರರ್‌ ಸಿನಿಮಾ

ಹಾರರ್‌ ಸಿನಿಮಾಗಳು ಸಿನಿಲೋಕದಲ್ಲಿ ತನ್ನದೇ ವಿಶೇಷ ಮತ್ತು ವಿಭಿನ್ನ ಪ್ರೇಕ್ಷಕರನ್ನು ಹೊಂದಿವೆ. ಹಾಗಾಗಿ ಯಾವುದೇ ಹಾರರ್ ಸಿನಿಮಾ ಬಿಡುಗಡೆಯಾದ್ರೂ ಥಿಯೇಟರ್ ಪ್ರೇಕ್ಷಕರಿಂದು ತುಂಬಿರುತ್ತವೆ. ಆರಂಭದಲ್ಲಿ ಈ ಸಿನಿಮಾ ಕೇವಲ 25 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ನಂತರ ವಿಶ್ವದಾದ್ಯಂತ ಬಿಡುಗಡೆಯಾಗಿ 3800 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

26
ಕಾಮಿಡಿ ಮಿಶ್ರಿತ ಹಾರರ್ ಸಿನಿಮಾ

ಕಳೆದ ವರ್ಷ ಸ್ತ್ರೀ ಮತ್ತು ಮಂಜ್ಯ ಕಾಮಿಡಿ ಮಿಶ್ರಿತ ಹಾರರ್ ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ವರ್ಷ ಕನ್ನಡದ ಸು ಫ್ರಂ ಸೋ ಸಿನಿಮಾ ಸಹ ಇದೇ ಜಾನರ್ ಕಥೆಯನ್ನು ಹೊಂದಿತ್ತು. ಕೇವಲ 3 ರಿಂದ 4 ಕೋಟಿ ಬಜೆಟ್ ಸು ಫ್ರಂ ಸೋ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇಂದು ನಾವು ಹೇಳುತ್ತಿರೋದು 51 ವರ್ಷದ ಹಿಂದೆ ಬಿಡುಗಡೆಯಾಗಿತ್ತು.

36
The Exorcist ಹಾರರ್ ಸಿನಿಮಾ

1973ರಲ್ಲಿ ಬಿಡುಗಡೆಯಾದ The Exorcist ಹಾರರ್ ಸಿನಿಮಾ ನೋಡಿದವರು ತಿಂಗಳುಗಟ್ಟಲೇ ನಿದ್ದೆ ಮಾಡಿರಲಿಲ್ಲ. ಥಿಯೇಟರ್‌ನಲ್ಲಿ ಒಂಟಿಯಾಗಿ ಈ ಸಿನಿಮಾ ನೋಡಿದ್ರೆ ನಿಮ್ಮ ಹಾರ್ಟ್‌ಬೀಟ್ ಸದ್ದು ನಿಮಗೆ ಕೇಳಿಸುತ್ತದೆ. ಈ ಚಿತ್ರದಿಂದ ನಿಮ್ಮಲ್ಲಿ ಹುಟ್ಟಿದ ಭಯ ನಿದ್ದೆ ಮಾಡಲು ಸಾಧ್ಯವಾಗದಂತೆ ಮಾಡುತ್ತದೆ. ಈ The Exorcist ಸಿನಿಮಾವನ್ನು ಶಾಪಗ್ರಸ್ಥ ಚಿತ್ರ ಅಂತಾನೂ ಕರೆಯಲಾಗುತ್ತದೆ.

46
ವಿಶ್ವದ ಅತ್ಯಂತ ಭಯಾನಕ ಸಿನಿಮಾ

ವಿಶ್ವದ ಅತ್ಯಂತ ಭಯಾನಕ ಸಿನಿಮಾಗಳಲ್ಲಿ ಒಂದಾಗಿರುವ The Exorcist ಹಲವು ದೇಶಗಳಲ್ಲಿ ಬ್ಯಾನ್ ಸಹ ಮಾಡಲಾಗಿತ್ತು. ವಿಲಿಯಂ ಪೀಟರ್ ಅವರ ಕಾದಂಬರಿಯನ್ನು ಆಧರಿಸಿರುವ ಈ ಹಾರರ್ ಸಿನಿಮಾವನ್ನು ಐರ್ಲೆಂಡ್, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ನಿಷೇಧಿಸಲಾಗಿತ್ತು. ಈ ಸಿನಿಮಾಗೆ ಐಎಂಡಿಬಿ 8.2 ರೇಟಿಂಗ್ ನೀಡಿದೆ.

56
ಚಿತ್ರದ ಕಥೆ ಏನು?

ದುಷ್ಟಶಕ್ತಿಯಿಂದ ತೊಂದರೆಗೊಳಗಾಗಿರುವ ಮುಗ್ಧ ಹುಡುಗಿಯ ಸುತ್ತ ಚಿತ್ರದ ಕಥೆ ಸಾಗುತ್ತದೆ. ಈ ಸಿನಿಮಾ ನೋಡುತ್ತಿದ್ದವರು ಹೃದಯಾಘಾತದಿಂದ ನಿಧನವಾದ್ರು ಎಂಬ ವದಂತಿಗಳಿವೆ. ಈ ಬಾಲಕಿ ದೇಹದಲ್ಲಿರುವ ಆತ್ಮಗಳನ್ನು ಪಾದ್ರಿಯೊಬ್ಬರು ತೆಗೆದು ಹಾಕುತ್ತಾರೆ. ಈ ಚಿತ್ರದ ಒಂದೊಂದು ದೃಶ್ಯಗಳು ನೋಡುಗರಲ್ಲಿ ಅತಿಯಾದ ಭಯವನ್ನು ಹುಟ್ಟಿಸುತ್ತವೆ.

ಇದನ್ನೂ ಓದಿ: 8 ದಿನ ಶೂಟಿಂಗ್, 49 ಲಕ್ಷ ಬಜೆಟ್, 20 ಸಾವಿರ ಕೋಟಿ ಗಳಿಕೆ; ಇತಿಹಾಸ ಸೃಷ್ಟಿಸಿದ ಸಿನಿಮಾ ನೋಡಲು ನಿಮಗೆ ಧೈರ್ಯ ಬೇಕಷ್ಟೇ

66
₹3,858.94 ಕೋಟಿ ರೂಪಾಯಿ

ಈ ಚಿತ್ರವನ್ನ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾಗಿದೆ. ಚಿತ್ರ ಪ್ರದರ್ಶನ ವೇಳೆ ಥಿಯೇಟರ್‌ಗೂ ಬೆಂಕಿ ಹತ್ತಿಕೊಂಡಿದ್ದರಿಂದ ಹಲವರು ಸಾವನ್ನಪ್ಪಿದ್ದರು. 104.96 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ The Exorcist ₹3,858.94 ಕೋಟಿ ರೂಪಾಯಿ ಗಳಿಸಿತ್ತು.

ಇದನ್ನೂ ಓದಿ: ಸೆಪ್ಟೆಂಬರ್‌ ನೆಟ್‌ಫ್ಲಿಕ್ಸ್‌ನಲ್ಲಿ ಧಮಾಕ: 7 ಹಾರರ್, ಥ್ರಿಲ್ಲರ್, ರೊಮ್ಯಾಂಟಿಕ್ ಸಿನಿಮಾ, ವೆಬ್ ಸಿರೀಸ್‌ಗಳ ಲಿಸ್ಟ್ ಇಲ್ಲಿದೆ ನೋಡಿ!

Read more Photos on
click me!

Recommended Stories