'ರೂಮ್‌ಗೆ ಕರೆದ, ಕೈ ಹಿಡಿದು ಎಳೆದುಕೊಂಡ..' ಕಾಸ್ಟಿಂಗ್‌ ಕೌಚ್‌ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ನಿರೂಪಕಿ!

Published : Aug 10, 2023, 01:49 PM IST

ತೆಲುಗು ಕಿರುತೆರೆಯ ಜನಪ್ರಿಯ ನಿರೂಪಕಿ ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳಿರುವ ಮಾತುಗಳು ವೈರಲ್‌ ಆಗಿವೆ. ಸೋಶಿಯಲ್‌ ಮೀಡಿಯಾದಲ್ಲಿ ಜನಪ್ರಿಯರಾಗಿರುವ ನಿರೂಪಕಿ ವೆಬ್‌ಸಿರೀಸ್‌ ನಿರ್ದೇಶಕನ ವಿರುದ್ಧ ಅರೋಪ ಮಾಡಿದ್ದಾರೆ.

PREV
116
'ರೂಮ್‌ಗೆ ಕರೆದ, ಕೈ ಹಿಡಿದು ಎಳೆದುಕೊಂಡ..' ಕಾಸ್ಟಿಂಗ್‌ ಕೌಚ್‌ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ನಿರೂಪಕಿ!

ಮನರಂಜನಾ ಜಗತ್ತಿನಲ್ಲಿ ಮತ್ತೊಮ್ಮೆ ಕಾಸ್ಟಿಂಗ್‌ ಕೌಚ್‌ ವಿಚಾರ ಸದ್ದು ಮಾಡಿದೆ. ತೆಲುಗಿನ ಜನಪ್ರಿಯ ನಿರೂಪಕಿ ಈಗ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ.

216

ಕಿರುತೆರೆಯೊಂದಿಗೆ ಸೋಶಿಯಲ್‌ ಮೀಡಿಯಾದಲ್ಲೂ ಬಹಳ ಜನಪ್ರಿಯರಾಗಿರುವ ವರ್ಷಿಣಿ ಸೌಂದರ್‌ರಾಜನ್‌ ಈಗ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ.

 

316

ವೆಬ್‌ ಸಿರೀಸ್‌ ನಿರ್ದೇಶಕನ ವಿರುದ್ಧ ನಿರೂಪಕಿ ವರ್ಷಿಣಿ ಸೌಂದರ್‌ರಾಜನ್‌ ಸ್ಪೋಟಕ ಆರೋಪ ಮಾಡಿದ್ದಾರೆ. ತಾನೂ ಕೂಡ ಕಾಸ್ಟಿಂಗ್‌ ಕೌಚ್‌ಗೆ ಬಲಿಯಾಗುವ ಹಾದಿಯಲ್ಲಿದ್ದೆ ಎಂದು ಹೇಳಿದ್ದಾರೆ.
 

416

ವರ್ಷಿಣಿ ಸೌಂದರ್‌ ರಾಜನ್‌ ಕಿರುತೆರೆಯಲ್ಲಿ ಜನಪ್ರಿಯರು, ತೆಲುಗಿನಲ್ಲಿ ಸಾಕಷ್ಟು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿದ್ದಾರೆ. ಧೀ ಶೋ ಮೂಲಕ ವರ್ಷಿಣಿ ಸಾಕಷ್ಟು ಗಮನಸೆಳೆದಿದ್ದರು.
 

516

ಧೀ ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದ ವರ್ಷಿಣಿಸೌಂದರ್‌ ರಾಜನ್‌, ಟಿವಿಯ ಅತ್ಯಂತ ಹಾಟ್‌ ನಿರೂಪಕಿಯರ ಪೈಕಿ ಒಬ್ಬರಾಗಿದ್ದಾರೆ.

616

ಅದರೊಂದಿಗೆ ಈಗ ಬೆಳ್ಳೆತೆರೆಯಲ್ಲೂ ಅವಕಾಶ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದರಲ್ಲೂ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಸಂಪಾದಿಸಿದ್ದಾರೆ.

716

ತುಂಡುಡುಗೆ, ಮಾಡರ್ನ್‌ ಡ್ರೆಸ್‌, ಸಾಂಪ್ರದಾಯಿಕ ಸೀರೆಗಳ ಲುಕ್‌ನ ಹಲವಾರು ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪ್ರತಿ ಫೋಟೋಗಳು ಸಾವಿರಾರು ಲೈಕ್ಸ್‌ಗಳು ಬರುತ್ತವೆ.

816

ಆದರೆ, ವರ್ಷಣಿ ಸೌಂದರ್‌ ರಾಜನ್‌ ಅವರ ಬ್ಯೂಟಿಗೆ ಮನಸೋತವರು ಸೋಶಿಯಲ್‌ ಮೀಡಿಯಾದ ಅಭಿಮಾನಿಗಳು ಮಾತ್ರವಲ್ಲ. ಸಿನಿಮಾರಂಗದವರೂ ಕೂಡ ಇದ್ದಾರೆ.
 

916

ಕೆಲ ವರ್ಷಗಳ ಹಿಂದೆ ತಮಗೆ ಆಗಿರುವ ಅನುಭವವನ್ನು ಇವರು ಹೇಳಿಕೊಂಡಿದ್ದಾರೆ. ವೆಬ್‌ಸಿರೀಸ್‌ನಲ್ಲಿ ಅವಕಾಶ ಪಡೆಯುವ ನಿಟ್ಟಿನಲ್ಲಿ ನಾನು ತೀವ್ರವಾಗಿ ಪ್ರಯತ್ನ ಪಟ್ಟಿದ್ದೆ. ಕೆಲವೊಂದು ಆಡಿಷನ್‌ಗಳನ್ನೂ ನೀಡಿದ್ದೆ ಎಂದಿದ್ದಾರೆ.
 

1016

ಇದೇ ರೀತಿ ನೀಡಿದ ಆಡಿಷನ್‌ ವೇಳೆ ತಮಗಾದ ಕಾಸ್ಟಿಂಗ್‌ ಕೌಚ್‌ನ ಅನುಭವನ್ನು ಅವರು ತಿಳಿಸಿದ್ದು, ಅವರು ಹೇಳಿರುವ ಮಾತುಗಳು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

1116

ಸಂದರ್ಶನವೊಂದರಲ್ಲಿ ಮಾತನಾಡಿರುವ ಆಕೆ, ತಾನೂ ಕೂಡ ಕಾಸ್ಟಿಂಗ್‌ ಕೌಚ್‌ನ ಬಲಿಪಶು ಎಂದಿದ್ದಾರೆ. ಲಾಕ್‌ಡೌನ್‌ಗಿಂತ ಮುಂಚೆ ನನಗೆ ವೆಬ್‌ಸಿರೀಸ್‌ನಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತ್ತು. ಅದರ ನಿರ್ದೇಶಕ ಆಡಿಷನ್‌ಗಾಗಿ ಹೋಟೆಲ್‌ಗೆ ಬರುವಂತೆ ತಿಳಿಸಿದ್ದರು ಎಂದಿದ್ದಾರೆ.

1216

ನಾನು ಹೋಟೆಲ್‌ಗೆ ಹೋಗಿದ್ದೆ. ಈ ವೇಳೆ 'ನೀನು ನೋಡಲು ಬಹಳ ಸುಂದರವಾಗಿದ್ದೀಯ. ವೆಬ್‌ಸಿರೀಸ್‌ಗೆ ತುಂಬಾ ಚೆನ್ನಾಗಿ ಸೂಟ್‌ ಆಗಿತ್ತೀರಿ. ನಿಮ್ಮನ್ನು ನೋಡಿದ ಕ್ಷಣವೇ ನೀವು ಇದರಲ್ಲಿ ನಟಿಸಬಹುದು ಎಂದು ನಾನು ಅಂದುಕೊಂಡಿದ್ದೆ' ಎಂದು ಹೇಳಿದ್ದ.
 

1316

ಆ ಬಳಿಕ ಹೋಟೆಲ್‌ನಲ್ಲಿ ಆತ ಇದ್ದ ರೂಮ್‌ಗೆ ಬರುವಂತೆ ತಿಳಿಸಿದ್ದ. ನಾನು ಅಲ್ಲಿಗೆ ಹೋಗಿದ್ದೆ. ಈ ವೇಳೆ ಆತ ನನ್ನ ಕೈಗಳನ್ನು ಹಿಡಿದುಕೊಂಡಿದ್ದ ಎಂದು ವರ್ಷಿಣಿ ಸೌಂದರ್‌ರಾಜನ್‌ ಹೇಳಿದ್ದಾರೆ.

1416

ಕೈಗಳನ್ನು ಹಿಡಿದುಕೊಂಡ ಆತ ನನ್ನನ್ನು ಬೆಡ್‌ ಮೇಲೆ ದೂಡಿದ್ದ. ಅದರ ಬೆನ್ನಲ್ಲಿಯೇ ನಿನ್ನ ಮೈಮೇಲಿರುವ ಬಟ್ಟೆಗಳನ್ನು ತೆಗೆದುಹಾಕು ಎಂದು ಹೇಳಿದ್ದ ಎಂದು ವರ್ಷಿಣಿ ಸ್ಫೋಟಕ ಕಾಮೆಂಟ್‌ ಮಾಡಿದ್ದಾರೆ.

1516

ನಾನು ಭಯಭೀತಳಾಗಿ ಹೋಗಿದ್ದೆ. ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದೆ. ಆ ಬಳಿಕ ಇದೇ ವಿಚಾರವನ್ನು ನೆನೆಸಿಕೊಂಡು ಬಹಳ ಕಾಲ ಅತ್ತಿದ್ದೆ ಎಂದು ವರ್ಷಿಣಿ ಮಾತನಾಡಿದ್ದಾರೆ.
 

1616

ಅದು ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣ. ನನ್ನ ಜೀವನದಲ್ಲಿ ಹಿಂದೆಂದೂ ಅಂಥ ಕ್ಷಣವನ್ನು ಎದುರಿಸಿಯೇ ಇರಲಿಲ್ಲ ಎಂದಿರುವ ವರ್ಷಿಣಿ, ಆ ನಿರ್ದೇಶಕ ಯಾರು? ಆ ವೆಬ್‌ ಸಿರೀಸ್‌ ಯಾವುದು ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories