ರಾಜಮೌಳಿಗೆ 'ನೋ' ಹೇಳಲಾಗದೆ ರಾಮ್ ಚರಣ್ ಮಾಡಿದ ಅತಿದೊಡ್ಡ ರಿಸ್ಕ್ ಇದು: ಮೈ ಜುಮ್ಮೆನ್ನುತ್ತೆ!

Published : Nov 27, 2026, 10:02 PM IST

ರಾಜಮೌಳಿ ಹೇಳಿದ ಒಂದು ಮಾತಿಗಾಗಿ ದೊಡ್ಡ ರಿಸ್ಕ್ ಮಾಡಲು ರೆಡಿಯಾದ ಮೆಗಾ ಪವರ್ ಸ್ಟಾರ್ ರಾಮ್ ಚರಣ್. ಆರ್‌ಆರ್‌ಆರ್‌ಗಾಗಿ ಚರಣ್ ಮಾಡಿದ ಮೊದಲ ಆಕ್ಷನ್ ಸೀನ್ ಯಾವುದು ಗೊತ್ತಾ? ಆ ಸೀನ್ ಗಾಗಿ ಮೆಗಾ ಪವರ್ ಸ್ಟಾರ್ ಎಷ್ಟು ದೊಡ್ಡ ಸಾಹಸ ಮಾಡಿದರು? ಅದರ ಹಿಂದಿನ ಕಥೆಯೇನು?

PREV
14
ರಾಜಮೌಳಿ ರಿಸ್ಕಿ ಶಾಟ್, ರಾಮ್ ಚರಣ್‌ಗೆ ಶಾಕ್..

ಎಸ್.ಎಸ್. ರಾಜಮೌಳಿ ಸಿನಿಮಾಗಳಲ್ಲಿ ನಟಿಸುವುದು ಎಂದರೆ ಸಾಮಾನ್ಯ ವಿಷಯವಲ್ಲ. ತೆರೆಯ ಮೇಲೆ ಕಾಣುವ ಪ್ರತಿಯೊಂದು ಅದ್ಭುತ ಆಕ್ಷನ್ ದೃಶ್ಯದ ಹಿಂದೆ ಸಾಕಷ್ಟು ಶ್ರಮ, ಪ್ಲಾನಿಂಗ್, ರಿಸ್ಕ್ ಇರುತ್ತದೆ. ಅವರ ಸಿನಿಮಾಗಳಲ್ಲಿ ನಟಿಸುವ ಹೀರೋಗಳು ಅದಕ್ಕೆ ರೆಡಿಯಾಗಿರಬೇಕಾಗುತ್ತದೆ. ಅಂತಹ ಸಂದರ್ಭದ ಬಗ್ಗೆಯೇ ರಾಮ್ ಚರಣ್ ಈ ಹಿಂದೆ ನಡೆದ ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. 'RRR' ಸಿನಿಮಾ ಪ್ರಮೋಷನ್ಸ್ ಸಂದರ್ಭದಲ್ಲಿ ರಾಮ್ ಚರಣ್ ಹಂಚಿಕೊಂಡ ಒಂದು ಆಸಕ್ತಿದಾಯಕ ವಿಷಯ ಆ ಕಾಲದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆರ್‌ಆರ್‌ಆರ್‌ಗಾಗಿ ತಮ್ಮ ಮೊದಲ ಆಕ್ಷನ್ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಎದುರಾದ ಅನುಭವವನ್ನು ಚರಣ್ ತಮಾಷೆಯಾಗಿ ವಿವರಿಸಿದ್ದಾರೆ.

24
ಆರ್‌ಆರ್‌ಆರ್‌ ಫಸ್ಟ್ ಡೇ ಶೂಟ್..

ರಾಜಮೌಳಿ 'RRR' ಗಾಗಿ ಮೊದಲ ಬಾರಿಗೆ ಒಂದು ಆಕ್ಷನ್ ಸೀಕ್ವೆನ್ಸ್ ಶೂಟ್ ಮಾಡುತ್ತಿದ್ದ ದಿನ ಅದು. ಆಗಲೇ ರಾಮ್ ಚರಣ್ ಜಿಮ್ ವರ್ಕೌಟ್ ಗಳು, ಇತರ ಸಿದ್ಧತೆಗಳನ್ನೆಲ್ಲಾ ಪೂರೈಸಿ ಉತ್ಸಾಹದಿಂದ ಸೆಟ್ ಗೆ ಬಂದಿದ್ದರು . ಎಂದಿನಂತೆ ಗುಡ್ ಮಾರ್ನಿಂಗ್ ಹೇಳಿ, ಸೆಟ್ ಗೆ ಕಾಲಿಡುತ್ತಿದ್ದಂತೆ ರಾಜಮೌಳಿ ಅವರನ್ನು ಪ್ರೀತಿಯಿಂದ ಮಾತನಾಡಿಸಿದರು. ಸೆಟ್ ನಲ್ಲಿದ್ದ ಪರಿಸ್ಥಿತಿಯನ್ನು ನೋಡಿದರೆ, ಸುಮಾರು 40 ಅಡಿ ಎತ್ತರದಿಂದ ಕೆಳಗೆ ಜಿಗಿಯಬೇಕಾದ ದೃಶ್ಯವಿದೆ. ನೋಡಲು ಅದು ತುಂಬಾ ಚೆನ್ನಾಗಿದೆ, ಆದರೆ ಆ ಎತ್ತರ ನೋಡಿದರೆನೇ ಸ್ವಲ್ಪ ಭಯವಾಗುವಂತಿದೆ.

34
ಚರಣ್‌ಗೆ ಶಾಕ್ ಕೊಟ್ಟ ರಾಜಮೌಳಿ..

ಆ ಶಾಟ್ ಸ್ವಲ್ಪ ರಿಸ್ಕಿಯಾಗಿರುವುದರಿಂದ, ರಾಮ್ ಚರಣ್ ತಮಾಷೆಯಾಗಿ "ಸರ್, ಇದನ್ನ ಯಾರು ಮಾಡ್ತಿದ್ದಾರೆ? ಸ್ವಲ್ಪ ರಿಸ್ಕಿ ಆಗಿದೆ ಅಲ್ವಾ" ಎಂದು ಕೇಳಿದರು. ಅದಕ್ಕೆ ರಾಜಮೌಳಿ ಸ್ವಲ್ಪವೂ ತಡಬಡಾಯಿಸದೆ, "ಚರಣ್, ನೀನೇ" ಎಂದು ತೀರ್ಮಾನಿಸಿದರು. ಇಲ್ಲ ಸರ್, ನಾನಂತೂ ಮಾಡೋಕೆ ಆಗಲ್ಲವೇನೋ ಎನ್ನುವಂತೆ ಚರಣ್ ಮಾತು ಸೇರಿಸಿದರೂ, ರಾಜಮೌಳಿ ಸ್ಟೈಲ್ ಗೊತ್ತಲ್ಲವೇ . ತಕ್ಷಣ ಅಸಿಸ್ಟೆಂಟ್ ಗಳನ್ನು ಕರೆದು ಲ್ಯಾಪ್ ಟಾಪ್ ತರಲು ಹೇಳಿದರು .

ಲ್ಯಾಪ್ ಟಾಪ್ ಓಪನ್ ಮಾಡಿ ನೋಡಿದರೆ, ಅಸಲಿ ವಿಷಯ ಹೊರಬಿತ್ತು. ಶೂಟಿಂಗ್ ಗೂ ಎರಡು ದಿನ ಮೊದಲೇ ಸ್ಟಂಟ್ ಮಾಸ್ಟರ್ ಸಿಂಧುಲ್ ಅವರೊಂದಿಗೆ ಆ ದೃಶ್ಯವನ್ನು ಎಲ್ಲಾ ಆಂಗಲ್ ಗಳಲ್ಲಿ ಚಿತ್ರೀಕರಿಸಿ ಸಿದ್ಧವಾಗಿಟ್ಟಿದ್ದರು. ಪ್ರೀ-ವಿಶುವಲೈಸೇಶನ್ ಅಥವಾ ರಿಹರ್ಸಲ್ ವಿಡಿಯೋದಲ್ಲಿ ಆ ಸ್ಟಂಟ್ ಹೇಗೆ ಮಾಡಬೇಕೆಂದು ಸ್ಪಷ್ಟವಾಗಿ ಕಾಣಿಸುತ್ತಾ, ಶಾಟ್ ಪರ್ಫೆಕ್ಟ್ ಆಗಿತ್ತು. ಆಗಲೇ ಅಷ್ಟು ಪಕ್ಕಾ ಆಗಿ ಮಾಡಿ ತೋರಿಸಿದ ಮೇಲೆ, "ನಾನು ಮಾಡಲ್ಲ ಸರ್" ಎಂದು ಹೇಳಿ ಹೊರಟುಹೋಗುವ ಅವಕಾಶ ಎಲ್ಲಿರುತ್ತೆ?

44
ರಾಮ್ ಚರಣ್‌ಗೆ ತಪ್ಪಿಸಿಕೊಳ್ಳಲು ಚಾನ್ಸ್ ಕೊಡಲಿಲ್ಲ..

ಆ ವಿಡಿಯೋ ನೋಡಿದ ಮೇಲೆ ರಾಮ್ ಚರಣ್‌ಗೆ ಇನ್ನು ತಪ್ಪಿಸಿಕೊಳ್ಳುವ ದಾರಿಯಿಲ್ಲ ಎಂದು ಅರ್ಥವಾಯಿತು. ರಾಜಮೌಳಿ ಇಷ್ಟು ಮುಂಚಿತವಾಗಿಯೇ ಪ್ಲಾನ್ ಮಾಡಿ, ಎಲ್ಲಾ ಆಂಗಲ್ ಗಳಲ್ಲಿ ರೆಕಾರ್ಡ್ ಮಾಡಿ ತೋರಿಸಿದ ಮೇಲೆ ಬೇಡ ಎನ್ನೋದು ಕಷ್ಟ ಅಲ್ವಾ . ಅದಕ್ಕೇ ಏನೂ ಅನ್ನಲಾಗದೆ, ಆ ರಿಸ್ಕಿ ಶಾಟ್ ಅನ್ನು ಚರಣ್ ಪೂರ್ತಿ ಮಾಡಬೇಕಾಯಿತು. ಇನ್ನು ಈ ಚಿಕ್ಕ ವಿಡಿಯೋ ರಾಜಮೌಳಿ ನಿರ್ದೇಶನ ಶೈಲಿಯನ್ನು, ಸೆಟ್ ನಲ್ಲಿರುವ ವಾತಾವರಣವನ್ನು ತಮಾಷೆಯಾಗಿ ಕಣ್ಣಿಗೆ ಕಟ್ಟುವಂತೆ ಮಾಡಿದೆ . 40 ಅಡಿ ಎತ್ತರದಿಂದ ಜಿಗಿಯುವ ಶಾಟ್ ಅನ್ನು ಕೂಡ ಚರಣ್ ಯಾವುದೇ ಅನುಮಾನವಿಲ್ಲದೆ ಪೂರ್ತಿ ಮಾಡುವುದರಲ್ಲಿ ರಾಜಮೌಳಿ ಪ್ಲಾನಿಂಗ್, ಚರಣ್ ನಂಬಿಕೆ ಅಲ್ಲಿ ಕಾಣಿಸುತ್ತದೆ. ಇಷ್ಟು ಪ್ಲಾನಿಂಗ್ ಮಾಡಿದ್ದಾರೆ ಅಂತಲೇ.. ಆರ್‌ಆರ್‌ಆರ್‌ ಆಸ್ಕರ್ ರೇಂಜ್‌ಗೆ ಹೋಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories