ಮಲೇಷ್ಯಾದ ದ್ವೀಪದಲ್ಲಿ ನಟಿ ಮೃಣಾಲಿನಿ ರವಿ-ಮಹಾ ವಿಷ್ಣು ಲವ್ ಮ್ಯಾರೇಜ್: ಪೋಟೋಸ್ ಇಲ್ಲಿವೆ!

Published : Nov 16, 2026, 09:38 PM IST

ತಮಿಳು ಚಿತ್ರರಂಗದ ನಟಿ ಮೃಣಾಲಿನಿ ರವಿ ಅವರು ಆಧ್ಯಾತ್ಮಿಕ ಭಾಷಣಕಾರ ಮಹಾ ವಿಷ್ಣು ಅವರನ್ನು ವಿವಾಹವಾಗಿದ್ದಾರೆ. ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

PREV
17
ವೈರಲ್ ಆದ ಮೃಣಾಲಿನಿ ರವಿ ಮದುವೆ ಫೋಟೋಗಳು

ಟಿಕ್ ಟಾಕ್ ಮೂಲಕವೇ ಸಾಕಷ್ಟು ಜನಪ್ರಿಯತೆ ಗಳಿಸಿದವರು ನಟಿ ಮೃಣಾಲಿನಿ ರವಿ. ತಮ್ಮ ಮುದ್ದಾದ ನಟನೆ ಮತ್ತು ವಿಶಿಷ್ಟ ಲುಕ್‌ನಿಂದ ಯುವಜನರ ಗಮನ ಸೆಳೆದ ಇವರು, ಈಗ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಮಲೇಷ್ಯಾ ಮೂಲದ ಆಧ್ಯಾತ್ಮಿಕ ಭಾಷಣಕಾರ ಮಹಾ ವಿಷ್ಣು ಅವರನ್ನು ಪ್ರೀತಿಸುತ್ತಿದ್ದ ಮೃಣಾಲಿನಿ, ಈಗ ಅವರನ್ನೇ ಮದುವೆಯಾಗಿದ್ದಾರೆ. ಇವರ ವಿವಾಹದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

27
ಟಿಕ್ ಟಾಕ್ ಸ್ಟಾರ್‌ ಇಂದ ನಟಿಯಾದ ಮೃಣಾಲಿನಿ

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಟಿಕ್‌ಟಾಕ್ ವಿಡಿಯೋಗಳ ಮೂಲಕ ಫೇಮಸ್ ಆದ ಮೃಣಾಲಿನಿ ರವಿ, ವಿಜಯ್ ಸೇತುಪತಿ ಅಭಿನಯದ 'ಸೂಪರ್ ಡೀಲಕ್ಸ್' ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆನಂತರ 'ಚಾಂಪಿಯನ್', 'ಎಂಜಿಆರ್ ಮಗನ್', 'ಎನಿಮಿ', 'ಕೋಬ್ರಾ', 'ರೋಮಿಯೋ' ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

37
ತೆಲುಗಿನಲ್ಲೂ ಜನಪ್ರಿಯ

ತಮಿಳು ಮಾತ್ರವಲ್ಲದೆ ತೆಲುಗು ಸಿನಿಮಾಗಳಲ್ಲೂ ಇವರು ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ವಿಶೇಷವಾಗಿ 'ಕದ್ದಲಕೊಂಡ ಗಣೇಶ್', 'ಆರ್ಗ್ಯಾನಿಕ್ ಮಾಮಾ ಹೈಬ್ರಿಡ್ ಅಲ್ಲುಡು', 'ಮಾಮಾ ಮಸೀಂದ್ರ' ಮುಂತಾದ ಚಿತ್ರಗಳ ಮೂಲಕ ತೆಲುಗು ಪ್ರೇಕ್ಷಕರಿಗೂ ಹತ್ತಿರವಾಗಿದ್ದಾರೆ.

47
ಪ್ರೀತಿ ವಿಚಾರ ಹಂಚಿಕೊಂಡ ಕೆಲವೇ ತಿಂಗಳಲ್ಲಿ ಮದುವೆ

ಮೃಣಾಲಿನಿ ರವಿ ಕಳೆದ ಆಗಸ್ಟ್‌ನಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಮಲೇಷ್ಯಾ ಮೂಲದ ಆಧ್ಯಾತ್ಮಿಕ ಭಾಷಣಕಾರ ಮಹಾ ವಿಷ್ಣು ಅವರೊಂದಿಗಿನ ಆಪ್ತವಾಗಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

57
ಗುಟ್ಟಾಗಿ ನಡೆದ ಮದುವೆ ಸಮಾರಂಭ

ಇದಾದ ನಂತರ ಈ ಜೋಡಿ ಯಾವಾಗ ಹಸೆಮಣೆ ಏರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಈ ನಡುವೆ ಆಗಸ್ಟ್ ತಿಂಗಳಲ್ಲೇ ಇಬ್ಬರಿಗೂ ನಿಶ್ಚಿತಾರ್ಥ ನಡೆದಿತ್ತು. ಇದೀಗ ನವೆಂಬರ್ 15, ಭಾನುವಾರದಂದು ಮಲೇಷ್ಯಾದ ಸುಂದರ ಲಂಗ್ಕಾವಿ ದ್ವೀಪದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

67
ಲಂಗ್ಕಾವಿ ದ್ವೀಪದಲ್ಲಿ ಅದ್ಧೂರಿ ವಿವಾಹ

ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಈ ವಿವಾಹ ನೆರವೇರಿದೆ. ವಿದೇಶದಲ್ಲಿ ನಡೆದ ಈ ಡೆಸ್ಟಿನೇಶನ್ ವೆಡ್ಡಿಂಗ್‌ನ ಫೋಟೋಗಳನ್ನು ಮೃಣಾಲಿನಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ. ಪ್ರೇಮಿಗಳಾಗಿ ತಮ್ಮ ಪಯಣವನ್ನು ಆರಂಭಿಸಿದ ಇವರಿಬ್ಬರು ಇದೀಗ ಬಾಳಸಂಗಾತಿಗಳಾಗಿ ಒಂದಾಗಿರುವುದನ್ನು ಕಂಡು ಅಭಿಮಾನಿಗಳು ಸಂತಸದಿಂದ ಶುಭಾಶಯ ತಿಳಿಸುತ್ತಿದ್ದಾರೆ.

77
ಶುಭಾಶಯಗಳ ಮಹಾಪೂರ

ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ತಮ್ಮ ಪಯಣವನ್ನು ಮುಂದುವರೆಸುತ್ತಿರುವ ಮೃಣಾಲಿನಿ, ಇದೀಗ ವೈಯಕ್ತಿಕ ಜೀವನದಲ್ಲೂ ಹೊಸ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅವರ ಮದುವೆಯ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಈ ನವ ದಂಪತಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories