ಇನ್‌ಸ್ಟಾ ಗರಿಷ್ಠ ಫಾಲೋವರ್ಸ್ ಹೊಂದಿದ ಏಷ್ಯಾದ ಟಾಪ್ 10 ಮಹಿಳಾ ಸೆಲೆಬ್ರೆಟಿ, ನಂ.2 ಭಾರತದ ನಟಿ

Published : Nov 16, 2026, 07:20 PM IST

ಇನ್‌ಸ್ಟಾಗ್ರಾಂನಲ್ಲಿ ಗರಿಷ್ಠ ಫಾಲೋವರ್ಸ್ ಮೂಲಕ ದಾಖಲೆ ಬರೆದ ಏಷ್ಯಾದ ಟಾಪ್ 10 ಸೆಲೆಬ್ರೆಟಿಗಳ ಪಟ್ಟಿ ಬಿಡುಗಡೆಯಾಗಿದೆ. ವಿಶೇಷ ಅಂದರೆ ಈ ಪಟ್ಟಿಯಲ್ಲಿ ನಂ.2 ಮಾತ್ರವಲ್ಲ, ಭಾರತದ ಹಲವು ನಟಿಯರಿದ್ದಾರೆ.

PREV
16
ಗರಿಷ್ಠ ಫಾಲವೋರ್ಸ್ ದಾಖಲೆ

ಇನ್‌ಸ್ಟಾಗ್ರಾಂ ಇದೀಗ ಅತೀ ಹೆಚ್ಚು ಮಂದಿ ಅತೀ ಹೆಚ್ಚು ಸಮಯ ಕಳೆಯುವ ಸೋಶಿಯಲ್ ಮೀಡಿಯಾ ಆಗಿ ಬದಲಾಗಿದೆ. ಸೆಲೆಬ್ರೆಟಿಗಳು, ರಾಜಕಾರಣಿಗಳು, ಉದ್ಯಮಿಗಳು, ಇನ್‌ಫ್ಲುಯೆನ್ಸರ್ ಸೇರಿದಂತೆ ಹಲವರು ಇನ್‌ಸ್ಟಾಗ್ರಾಂ ಮೂಲಕ ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹೀಗೆ ಏಷ್ಯಾದಲ್ಲಿ ಗರಿಷ್ಠ ಫಾಲೋವರ್ಸ್ ಹೊಂದಿರುವ ಮಹಿಳಾ ಸೆಲೆಬ್ರೆಟಿಗಳ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಭಾರತದ ನಟಿಯರೇ ತುಂಬಿದ್ದಾರೆ.

26
ಏಷ್ಯಾದ ಮಹಿಳೆ ಸೆಲೆಬ್ರೆಟಿಸ್, ನಂ.1 ಪ್ರಿಯಾಂಕಾ

ಇನ್‌ಸ್ಟಾಗ್ರಾಂನಲ್ಲಿ ಗರಿಷ್ಠ ಫಾಲೋವರ್ಸ್ ಹೊಂದಿಗೆ ಏಷ್ಯಾದ ಮಹಿಳಾ ಸೆಲೆಬ್ರೆಟಿಗಳ ಪೈಕಿ ಪ್ರಿಯಾಂಕ ಚೋಪ್ರಾ 2ನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ ಬರೋಬ್ಬರಿ 92.76 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರಾಜಮೌಳಿ ನಿರ್ದೇಶನದ ವಾರಣಸಿ ಸಿನಿಮಾದಲ್ಲಿ ನಾಯಕಿಯಾಗಿರುವ ಪ್ರಿಯಾಂಕ ಚೋಪ್ರಾ, ಹಾಲಿವುಡ್ ಸಿನಿಮಾದಲ್ಲೂ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಪ್ರಿಯಾಂಕಾ ಗರಿಷ್ಠ ಫಾಲವೋರ್ಸ್ ಹೊಂದಿದ್ದಾರೆ.

36
ಮಹಿಳಾ ಸೆಲೆಬ್ರೆಟಿ ಪೈಕಿ ನಂ.1 ಯಾರು

ಇನ್‌ಸ್ಟಾಗ್ರಾಂ ಫಾಲೋವರ್ಸ್ ಮೂಲಕ ಏಷ್ಯಾದ ನಂ.1 ಮಹಿಳಾ ಸೆಲೆಬ್ರೆಟಿ ಅನ್ನೋ ಹೆಗ್ಗಳಿಗೆ ರ್ಯಾಪರ್ ಲಿಸಾ ಪಾತ್ರರಾಗಿದ್ದಾರೆ. ಥೈಲ್ಯಾಂಡ್ ರ್ಯಾಪರ್ 105 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪೂರ್ಣ ಹೆಸರು ಲಿಸಾ ಮನೋಬಾಲ್, ಲಿಸಾ ಮ್ಯೂಸಿಕ್, ಹಾಡುಗಳು ಅತ್ಯಂತ ಜನಪ್ರಿಯವಾಗಿದೆ.

46
ಶ್ರದ್ಧಾ ಕಪೂರ್‌ಗೆ 3ನೇ ಸ್ಥಾನ

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಂ ಮೂಲಕ ಗರಿಷ್ಠ ಅಭಿಮಾನಿಗಳನ್ನು ಹೊಂದಿದ್ದಾರೆ. ಶ್ರದ್ಧಾ ಬ್ಯೂಟಿಗೆ ಹಲವರು ಮಾರು ಹೋಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಶ್ರದ್ಧಾ 92.70 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈತಾ ಸಿನಿಮಾದಲ್ಲಿ ಬ್ಯೂಸಿಯಾಗಿರುವ ಶ್ರದ್ಧಾ ಶೀಘ್ರದಲ್ಲೇ ಹೊಸ ದಾಖಲೆ ಬರೆಯುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

56
ಪಟ್ಟಿಯಲ್ಲಿದ್ದಾರೆ ಆಲಿಯಾ ಭಟ್, ಕತ್ರಿನಾ ಕೈಫ್

ಟಾಪ್ ಏಷ್ಯಾ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಆಲಿಯಾ ಭಟ್ 8ನೇ ಸ್ಥಾನ ಪಡೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅಲಿಯಾ ಭಯ್ 85.1 ಮಿಲಿಯನ್ ಫಾಲೋವರ್ಸ್ ಪಡೆದಿದ್ದಾರೆ. ಇನ್ನು ಸಿನಿಮಾದಿಂದ ದೂರವಾಗಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕತ್ರಿನಾ ಕೈಫ್ ಇನ್‌ಸ್ಟಾಗ್ರಾಂನಲ್ಲಿ 78.6 ಮಿಲಿಯನ್ ಫಾಲವೋರ್ಸ್ ಹೊಂದಿದ್ದಾರೆ.

66
ಏಷ್ಯಾದ ಟಾಪ್ ಸೆಲೆಬ್ರೆಟಿಯಲ್ಲಿಕೊಹ್ಲಿ ನಂ.1

ಏಷ್ಯಾದ ಟಾಪ್ ಟಾಪ್ 10 ಸೆಲೆಬ್ರೆಟಿಯಲ್ಲಿ ನಂ.1 ವಿರಾಟ್ ಕೊಹ್ಲಿ. ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 271 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ. ನರೇಂದ್ರ ಮೋದಿ 106 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories