64ರಲ್ಲೂ ಅದೇ ಎನರ್ಜಿ: 'ಆ್ಯಕ್ಷನ್ ಕಿಂಗ್' ಅರ್ಜುನ್ ಸರ್ಜಾ ಫಿಟ್‌ನೆಸ್‌ ಸೀಕ್ರೆಟ್‌ ಹಿಂದೆ ಇದೆ ಈ ಶಿಸ್ತು!

Published : Sep 26, 2026, 04:37 PM IST

64ರ ವಯಸ್ಸಿನಲ್ಲೂ ಅರ್ಜುನ್ ಸರ್ಜಾ ತಮ್ಮ ಫಿಟ್‌ನೆಸ್‌ನಿಂದ ಗಮನ ಸೆಳೆಯುತ್ತಿದ್ದಾರೆ. ನಿಯಮಿತ ವ್ಯಾಯಾಮ, ಮಾರ್ಷಲ್ ಆರ್ಟ್ಸ್, ಯೋಗ, ಸ್ಟ್ರೆಚಿಂಗ್, ಶಿಸ್ತುಬದ್ಧ ಆಹಾರ ಮತ್ತು ನಿರಂತರ ಅಭ್ಯಾಸ ಅವರ ಫಿಟ್‌ನೆಸ್‌ ಜೀವನದ ಪ್ರಮುಖ ಭಾಗಗಳಾಗಿವೆ.

PREV
16
ಆರೋಗ್ಯಕರ ಅಭ್ಯಾಸಗಳಿಗೆ ಹೆಚ್ಚಿನ ಆದ್ಯತೆ

ಬೆಳ್ಳಿತೆರೆಯಲ್ಲಿ ಆ್ಯಕ್ಷನ್‌ ದೃಶ್ಯಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ 'ಆ್ಯಕ್ಷನ್ ಕಿಂಗ್' ಅರ್ಜುನ್ ಸರ್ಜಾ, ತಮ್ಮ ಫಿಟ್‌ನೆಸ್‌ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ವಯಸ್ಸು ಹೆಚ್ಚಾದರೂ ಮೈಕಟ್ಟು ಮತ್ತು ಎನರ್ಜಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಅವರು, ಇಂದಿಗೂ ತಮ್ಮ ದೈನಂದಿನ ಜೀವನದಲ್ಲಿ ವ್ಯಾಯಾಮ ಮತ್ತು ಆರೋಗ್ಯಕರ ಅಭ್ಯಾಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

26
ಶಿಸ್ತುಬದ್ಧ ಜೀವನಶೈಲಿ

ಅರ್ಜುನ್ ಸರ್ಜಾ ಅವರ ಫಿಟ್‌ನೆಸ್‌ ಹಿಂದೆ ಯಾವುದೇ ಒಂದು ದಿನದ ಪ್ರಯತ್ನವಿಲ್ಲ. ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರುವ ಶಿಸ್ತುಬದ್ಧ ಜೀವನಶೈಲಿಯೇ ಅದರ ಪ್ರಮುಖ ಕಾರಣ. ಜಿಮ್‌, ಯೋಗ, ವ್ಯಾಯಾಮ ಮತ್ತು ದೇಹವನ್ನು ಸಕ್ರಿಯವಾಗಿರಿಸುವ ಅಭ್ಯಾಸಗಳು ಅವರ ದಿನಚರಿಯ ಪ್ರಮುಖ ಭಾಗವಾಗಿವೆ. ಅವರ ಪ್ರಕಾರ, ಫಿಟ್‌ನೆಸ್‌ ಎಂದರೆ ಕೇವಲ ದೇಹದ ಆಕಾರವನ್ನು ಕಾಪಾಡಿಕೊಳ್ಳುವುದಲ್ಲ. ಆರೋಗ್ಯ, ಚೈತನ್ಯ ಮತ್ತು ಮಾನಸಿಕ ನೆಮ್ಮದಿಗೂ ಸಮಾನ ಪ್ರಾಮುಖ್ಯತೆ ನೀಡಬೇಕು. ಇದೇ ಕಾರಣಕ್ಕೆ ಯೋಗ ಮತ್ತು ಧ್ಯಾನಕ್ಕೂ ತಮ್ಮ ಜೀವನಶೈಲಿಯಲ್ಲಿ ಸ್ಥಾನ ನೀಡಿದ್ದಾರೆ.

36
ಚಿತ್ರೀಕರಣದ ನಡುವೆಯೂ ವರ್ಕ್‌ಔಟ್ ಮಿಸ್‌ ಮಾಡಲ್ಲ!

ಅರ್ಜುನ್ ಸರ್ಜಾ ಅವರ ದಿನಚರಿಯಲ್ಲಿ ಮತ್ತೊಂದು ಗಮನಾರ್ಹ ಸಂಗತಿಯೆಂದರೆ ವ್ಯಾಯಾಮಕ್ಕೆ ನೀಡುವ ಆದ್ಯತೆ. ಬೆಳಗ್ಗೆ ಬೇಗ ಎದ್ದು ವರ್ಕ್‌ಔಟ್‌ ಮಾಡುವುದು ಅವರ ಅಭ್ಯಾಸವಾಗಿದ್ದು, ಶೂಟಿಂಗ್‌ನ ಬ್ಯುಸಿ ವೇಳಾಪಟ್ಟಿಯ ನಡುವೆಯೂ ವ್ಯಾಯಾಮವನ್ನು ತಪ್ಪಿಸಿಕೊಳ್ಳುವುದಿಲ್ಲ ಎನ್ನಲಾಗಿದೆ. ವಿವಿಧ ದೇಶಗಳಲ್ಲಿನ ಅತ್ಯಾಧುನಿಕ ಜಿಮ್‌ಗಳಿಗೆ ಭೇಟಿ ನೀಡಿರುವ ಅವರು, ಅಲ್ಲಿನ ತರಬೇತಿ ವಿಧಾನಗಳನ್ನೂ ಗಮನಿಸಿ ತಮ್ಮ ವರ್ಕ್‌ಔಟ್‌ ರೂಟೀನ್‌ನಲ್ಲಿ ಅಳವಡಿಸಿಕೊಂಡಿದ್ದಾರೆ. ಇದೇ ಶಿಸ್ತನ್ನು ಹಲವು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರುವುದು ಅವರ ಫಿಟ್‌ನೆಸ್‌ ಕಾಪಾಡಿಕೊಳ್ಳಲು ನೆರವಾಗಿದೆ.

46
16ನೇ ವಯಸ್ಸಿನಲ್ಲೇ ಇತ್ತು ಸಿಕ್ಸ್‌ ಪ್ಯಾಕ್!

‘ಗಲಾಟಾ ಪ್ಲಸ್’ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದ ಅರ್ಜುನ್ ಸರ್ಜಾ, ತಮ್ಮ ಫಿಟ್‌ನೆಸ್‌ ಪ್ರಯಾಣದ ಬಗ್ಗೆ ಆಸಕ್ತಿದಾಯಕ ಸಂಗತಿಯನ್ನು ಹಂಚಿಕೊಂಡಿದ್ದರು. 16ನೇ ವಯಸ್ಸಿನಲ್ಲಿ ನನಗೆ ಸಿಕ್ಸ್‌ ಪ್ಯಾಕ್ ಇತ್ತು. ಆಗ ನನ್ನನ್ನು ನೋಡಿದವರೆಲ್ಲ ತುಂಬಾ ಫಿಟ್ ಆಗಿದ್ದಾನೆ ಎಂದುಕೊಳ್ಳುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದರು. ಯೌವನದಿಂದಲೇ ದೈಹಿಕ ಕ್ಷಮತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಅವರು, ಇಂದಿಗೂ ಅದೇ ಅಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

56
ಆಹಾರದಲ್ಲೂ ಕಠಿಣ ಶಿಸ್ತು

ಅರ್ಜುನ್ ಸರ್ಜಾ ಅವರ ಫಿಟ್‌ನೆಸ್‌ ರೂಟೀನ್‌ನಲ್ಲಿ ಆಹಾರ ಪದ್ಧತಿಗೂ ಪ್ರಮುಖ ಸ್ಥಾನವಿದೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಬದಲಿಗೆ ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರ ಜೀವನಶೈಲಿಯಲ್ಲಿ ಮತ್ತೊಂದು ಕುತೂಹಲಕಾರಿ ಅಭ್ಯಾಸವೆಂದರೆ ಮೊಬೈಲ್ ಬಳಕೆಯ ನಿಯಂತ್ರಣ. ರಾತ್ರಿ ಮಲಗುವಾಗ ಮೊಬೈಲ್‌ ಅನ್ನು ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಳ್ಳದೆ ದೂರದ ಟೇಬಲ್‌ನಲ್ಲಿ ಇಡುತ್ತೇನೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ಮೊಬೈಲ್‌ನಿಂದ ಸಾಧ್ಯವಾದಷ್ಟು ದೂರವಿರುವುದನ್ನು ತಮ್ಮ ಅಭ್ಯಾಸವನ್ನಾಗಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

66
ಆ್ಯಕ್ಷನ್ ದೃಶ್ಯಗಳಲ್ಲೂ ಡ್ಯೂಪ್‌ಗೆ ಕಡಿಮೆ ಅವಲಂಬನೆ

ಆ್ಯಕ್ಷನ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಅರ್ಜುನ್ ಸರ್ಜಾ, ತಮ್ಮ ಸಾಹಸ ದೃಶ್ಯಗಳ ವಿಚಾರದಲ್ಲೂ ವಿಶೇಷ ಗಮನ ಸೆಳೆಯುತ್ತಾರೆ. ಇಂದಿಗೂ ಹಲವು ಆ್ಯಕ್ಷನ್ ಸನ್ನಿವೇಶಗಳಲ್ಲಿ ಡ್ಯೂಪ್‌ ಬಳಸದೆ ಸ್ವತಃ ನಟಿಸುವುದು ಅವರ ಫಿಟ್‌ನೆಸ್‌ ಮತ್ತು ತರಬೇತಿಯ ಬಗ್ಗೆ ಕುತೂಹಲ ಮೂಡಿಸುತ್ತದೆ. ಆ್ಯಕ್ಷನ್‌ ಕಿಂಗ್‌ ಎಂಬ ತಮ್ಮ ಇಮೇಜ್‌ ಅನ್ನು ದಶಕಗಳಿಂದ ಉಳಿಸಿಕೊಂಡಿರುವ ಅರ್ಜುನ್ ಸರ್ಜಾ, ಈಗ 64ರ ವಯಸ್ಸಿನಲ್ಲೂ ವ್ಯಾಯಾಮ, ಯೋಗ ಮತ್ತು ಆರೋಗ್ಯಕರ ಆಹಾರದ ಮೂಲಕ ಸಕ್ರಿಯ ಜೀವನಶೈಲಿಯನ್ನು ಮುಂದುವರಿಸುತ್ತಿದ್ದಾರೆ. ಅವರ ಫಿಟ್‌ನೆಸ್‌ ಕಥೆಯಲ್ಲಿ ದೊಡ್ಡ ರಹಸ್ಯಕ್ಕಿಂತ ನಿರಂತರ ಅಭ್ಯಾಸ, ಶಿಸ್ತು ಮತ್ತು ಆರೋಗ್ಯದ ಮೇಲಿನ ಕಾಳಜಿಯೇ ಪ್ರಮುಖ ಅಂಶ ಎನ್ನುವುದು ಅವರ ಸಂದರ್ಶನಗಳಲ್ಲಿನ ಮಾತುಗಳಿಂದ ಸ್ಪಷ್ಟವಾಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories