ಮಗು ತೋರಿಸಿ ಶಾಕ್​ ಕೊಟ್ಟ Sonal Monteiro! ವಿಷ್ ಮಾಡಿದ್ರಾ Bigg Boss ತನಿಷಾ ಕುಪ್ಪಂಡ?

Published : Sep 03, 2025, 09:50 PM IST

ನಟಿ ಸೋನಲ್ ಮೊಂಥೆರೋ ಅವರು ಮಗುವಿನೊಂದಿಗೆ ಕಾಣಿಸಿಕೊಂಡ ಫೋಟೋ ವೈರಲ್ ಆಗಿದೆ. ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ಮಗುವನ್ನು ಸೋನಲ್‌ಗೆ ನೀಡಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

PREV
18
ತರುಣ್- ಸೋನಲ್ ಮದುವೆಯಾಗಿ ಒಂದು ವರ್ಷ

ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ 2024 ಆಗಸ್ಟ್​ 11ರಂದು ನಡೆದಿದೆ. ಈಚೆಯಷ್ಟೇ ಜೋಡಿ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಮಡಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ.

28
ಹಿಂದೂ- ಕ್ರೈಸ್ತ ಸಂಪ್ರದಾಯ

ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ.

38
ಮಗುವಿನ ಬಗ್ಗೆ ಮಾತನಾಡಿದ್ದ ಸೋನಲ್​

ಈ ಹಿಂದೆ ಸಂದರ್ಶನವೊಂದರಲ್ಲಿ ಸೋನಲ್​ ಮಗುವಿನ ಬಗ್ಗೆ ಮಾತನಾಡುತ್ತಾ, ಫ್ಯಾಮಿಲಿ ಪ್ಲ್ಯಾನ್​ ಏನೂ ಇಲ್ಲ, ಯಾವಾಗ ಆಗುತ್ತೋ ಆವಾಗ ಮಗು ಆಗಲಿ ಎಂದಿರುವ ಸೋನಲ್​, ನಮ್ಮ ಮನೆಯಲ್ಲಿ ಹೆಚ್ಚು ಹೆಣ್ಣುಮಕ್ಕಳೇ ಇರುವುದರಿಂದ ನನಗೆ ಗಂಡು ಮಗು ಇಷ್ಟ, ತರುಣ್​ ಮನೆಯಲ್ಲಿ ಹೆಚ್ಚಾಗಿ ಗಂಡುಮಕ್ಕಳೇ ಇರುವುದರಿಂದ ಅವರಿಗೆ ಹೆಣ್ಣುಮಗು ಇಷ್ಟ. ಸೋ ಏನಾಗುತ್ತೋ ಆಗಲಿ ಎಂದಿದ್ದರು.

48
ಮಗು ಹಿಡಿದು ಸೋನಲ್​ ಶಾಕ್​

ಆದರೆ ಇದರ ಬೆನ್ನಲ್ಲೇ ಇದೀಗ ಮಗುವನ್ನು ಹಿಡಿದು ಸೋನಲ್​ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ. ಅಷ್ಟಕ್ಕೂ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಸೋನಲ್​ ಅವರ ಕೈಗೆ ಮಹಿಳೆಯೊಬ್ಬರು ಮಗು ಕೊಟ್ಟು ಇದು ಉಡುಗೊರೆ ಎಂದಿದ್ದಾರೆ. ಮಗುವನ್ನು ಹಿಡಿದುಕೊಳ್ಳಲು ಆರಂಭದಲ್ಲಿ ಭಯಪಟ್ಟ ಸೋನಲ್​ ಅವರು ಕೊನೆಗೆ ಮಗುವನ್ನು ಹಿಡಿದುಕೊಂಡು ಪೋಸ್​ ಕೊಟ್ಟಿದ್ದಾರೆ.. ಪಕ್ಕದಲ್ಲಿಯೇ ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ (Tanisha Kuppanda) ಅವರನ್ನು ನೋಡಬಹುದು. 

58
ಥರಹೇವಾರಿ ಕಮೆಂಟ್ಸ್​

ಇದಕ್ಕೆ ಥರಹೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ನಿಮ್ಮದೇ ಮಗು ಅಂದುಕೊಂಡ್ವಿ ಎಂದು ಕೆಲವರು ನಟಿಯ ಕಾಲೆಳೆಯುತ್ತಿದ್ದಾರೆ. ಇವರಿಬ್ಬರ ನಡುವೆ ಪ್ರೀತಿಗೆ ನಟ ದರ್ಶನ್​ ಕಾರಣ ಎನ್ನುವುದೂ ಈ ಹಿಂದೆ ರಿವೀಲ್​ ಆಗಿತ್ತು. ರಾಬರ್ಟ್‌ ಸಿನಿಮಾ ಸೆಟ್‌ನಲ್ಲಿಯೇ ದರ್ಶನ್‌ ಹಲವು ಬಾರಿ ತರುಣ್‌ ಸುಧೀರ್‌ಗೆ ಮದುವೆ ಮಾಡಿಸಬೇಕು. ಒಳ್ಳೆಯ ಹುಡುಗಿ ಇದ್ದರೆ ಹೇಳಿ ಎನ್ನುತ್ತಿದ್ದಂತೆ. ಇದೇ ವೇಳೆ ಶೂಟಿಂಗ್‌ ಸೆಟ್‌ನಲ್ಲಿದ್ದ ತರುಣ್‌-ಸೋನಲ್‌ ಇಬ್ಬರನ್ನೂ ಇದೇ ವಿಚಾರವಾಗಿ ರೇಗಿಸುತ್ತಿದ್ದರು.

68
ದರ್ಶನ್​ರಿಂದ ಪರಿಚಯ

ಕೊನೆಗೆ ಇಬ್ಬರ ನಡುವೆ ಪ್ರೀತಿ ಹುಟ್ಟಲು ಇದೇ ಅಂಶ ಕಾರಣವಾಗಿದೆ ಎನ್ನಲಾಗಿದೆ. ಇವರ ಮದುವೆಯ ದಿನ ನಟ ದರ್ಶನ್​ (Darshan) ಜೈಲಿನಲ್ಲಿ ಇದ್ದರು. ಅವರು ಜೈಲಿನಿಂದ ಹೊರಕ್ಕೆ ಬಂದ ಮೇಲೆ ಜೋಡಿ ಅವರಿಂದ ಆಶೀರ್ವಾದ ಪಡೆದು ಬಂದಿತ್ತು.

78
ಸಿನಿ ಪಯಣ

ಇನ್ನು ತರುಣ್‌ ಅವರು ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡುತ್ತಿದ್ದರೆ, ಸೋನಲ್‌ ಅವರು, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು.

88
ಪಂಚತಂತ್ರದಲ್ಲಿ ನಾಯಕಿ

2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್‌ ಫ್ಯಾಕ್ಟರಿ, ಬನಾರಸ್‌, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್‌, ಶಂಭೋ ಶಿವ ಶಂಕರ್‌ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories