'ಮದ್ವೆ ಆಗಿ ನೀನೇನು ಕಿತ್ತಾಕಿದ್ದೀಯಾ?': ಟ್ರೋಲಿಗನ ಬಾಯಿ ಮುಚ್ಚಿಸಿದ ಶಿಲ್ಪಾ ಶೆಟ್ಟಿ ತಂಗಿ!

Published : May 28, 2026, 04:38 PM IST

ನಟಿ ಶಮಿತಾ ಶೆಟ್ಟಿ ಅವರಿಗೆ 47 ವರ್ಷ. ಮದುವೆ, ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದ ಟ್ರೋಲಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. 'ಸರಿಯಾದ ಸಮಯಕ್ಕೆ ಮದುವೆ ಆಗಿದ್ರೆ ಇಷ್ಟೊತ್ತಿಗೆ ಮಕ್ಕಳೇ ದೊಡ್ಡವರಾಗ್ತಿದ್ರು' ಅಂದವನಿಗೆ ಶಮಿತಾ ಕೊಟ್ಟ ಉತ್ತರ ಈಗ ವೈರಲ್ ಆಗಿದೆ.

PREV
14
ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಬಾಲಿವುಡ್ ನಟಿ ಶಮಿತಾ ಶೆಟ್ಟಿ ತಮ್ಮ ವಯಸ್ಸು ಮತ್ತು ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಟ್ರೋಲಿಗರು ಮಾಡಿದ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಶೇರ್ ಮಾಡಿರುವ ಶಮಿತಾ, ವಯಸ್ಸಾಗೋದು ಜೀವನದ ಸಹಜ ಪ್ರಕ್ರಿಯೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ, ಹೆಣ್ಣುಮಕ್ಕಳನ್ನು ಅವರ ಮದುವೆ ಅಥವಾ ವಯಸ್ಸಿನ ಆಧಾರದ ಮೇಲೆ ಜಡ್ಜ್ ಮಾಡೋದು ತಪ್ಪು ಮನಸ್ಥಿತಿಯನ್ನು ತೋರಿಸುತ್ತೆ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಶಮಿತಾ ಅವರ ಈ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ಹಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲ, ಆ ಟ್ರೋಲಿಗನಿಗೆ ನೇರವಾಗಿ 'ಅನ್‌ಫಾಲೋ ಮಾಡು' ಅಂತಾನೂ ಹೇಳಿದ್ದಾರೆ.

24
ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದವರಿಗೆ ಶಮಿತಾ ಖಡಕ್ ಉತ್ತರ

ಶಮಿತಾ ಶೆಟ್ಟಿ ಶೇರ್ ಮಾಡಿದ ಸ್ಕ್ರೀನ್‌ಶಾಟ್‌ನಲ್ಲಿ ಒಬ್ಬ ಬಳಕೆದಾರ, “ನಿಮ್ಮ ವಯಸ್ಸಾಗಿದೆ, ಮೊದಲಿನ ಕಳೆ ಇಲ್ಲ” ಎಂದು ಬರೆದಿದ್ದ. ಇದಕ್ಕೆ ಉತ್ತರಿಸಿದ ನಟಿ, “ಹೌದು, ನಾನು ಬೇರೆ ರೀತಿ ಕಾಣಿಸ್ತೀನಿ. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತೆ, ಇದು ಜೀವನದ ನಿಯಮ. ಯಾವುದೂ ಶಾಶ್ವತವಲ್ಲ, ದೈಹಿಕ ಸೌಂದರ್ಯ ಕೂಡ. ಆದರೆ ನನ್ನ ವಯಸ್ಸಿಗೆ ತಕ್ಕಂತೆ ನಾನು ಆರೋಗ್ಯವಾಗಿ, ಫಿಟ್ ಆಗಿ, ಖುಷಿಯಾಗಿದ್ದೀನಿ. ದೇವರು ಕೊಟ್ಟಿದ್ದಕ್ಕೆ ನಾನು ಆಭಾರಿ. ನನಗೆ ಅದೇ ಮುಖ್ಯ,” ಎಂದು ಬರೆದುಕೊಂಡಿದ್ದಾರೆ.

34
ಮದುವೆ ಬಗ್ಗೆ ಕಾಮೆಂಟ್ ಮಾಡಿದವನಿಗೆ ತಕ್ಕ ಶಾಸ್ತಿ

ಇನ್ನೊಬ್ಬ ಬಳಕೆದಾರ, “ಸರಿಯಾದ ಸಮಯಕ್ಕೆ ಮದುವೆ ಆಗಿದ್ರೆ ಇವತ್ತು ನಿಮ್ಮ ಮಕ್ಕಳೇ ದೊಡ್ಡವರಾಗಿರ್ತಿದ್ರು” ಎಂದು ಕೇಳಿದ್ದ. ಈ ಕಾಮೆಂಟ್‌ಗೆ ಶಮಿತಾ ಶೆಟ್ಟಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ನೀನು ಮದುವೆ ಆಗಿ ಏನು ಕಿತ್ತಾಕಿದ್ದೀಯಾ (ಭಾಯಿ)? ಮುಖ್ಯವಾಗಿ, ಅವಿವಾಹಿತ ಮಹಿಳೆಯರನ್ನು ಏಜ್-ಶೇಮ್ ಮಾಡಲು ಮತ್ತು ನಿಮ್ಮ ಪಿತೃಪ್ರಧಾನ, ಹಳೆ ಕಾಲದ ಮನಸ್ಥಿತಿಯನ್ನು ಹೇರಲು ನಮ್ಮನ್ನು ಯಾಕೆ ಫಾಲೋ ಮಾಡ್ತೀರಾ? ದಯವಿಟ್ಟು ಒಂದು ಉಪಕಾರ ಮಾಡಿ, ತಕ್ಷಣ ನನ್ನನ್ನು ಅನ್‌ಫಾಲೋ ಮಾಡಿ,” ಎಂದು ಖಾರವಾಗಿ ಬರೆದಿದ್ದಾರೆ.

44
ಸೋಷಿಯಲ್ ಮೀಡಿಯಾದಲ್ಲಿ ಶಮಿತಾ ಉತ್ತರ ವೈರಲ್

ಶಮಿತಾ ಶೆಟ್ಟಿ ಅವರ ಈ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಮಹಿಳೆಯರನ್ನು ಮದುವೆ ಮತ್ತು ವಯಸ್ಸಿನ ಆಧಾರದ ಮೇಲೆ ಅಳೆಯುವುದು ತಪ್ಪು ಎಂದು ಹಲವು ಬಳಕೆದಾರರು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಕೆಲವರು ಶಮಿತಾ ಅವರ ದಿಟ್ಟತನವನ್ನು ಹೊಗಳಿದ್ದಾರೆ. ಶಮಿತಾ ಶೆಟ್ಟಿ ಅವರು 'ಮೊಹಬ್ಬತೇನ್', 'ಝೆಹರ್', 'ಬೇವಾಫಾ' ಮತ್ತು 'ಕ್ಯಾಶ್' ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, 'ಬಿಗ್ ಬಾಸ್ 15', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 9' ಮತ್ತು 'ಝಲಕ್ ದಿಖ್ಲಾ ಜಾ 8' ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ನಟಿ ಕೊನೆಯದಾಗಿ 'ದಿ ಟೆನೆಂಟ್' ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories