ತನ್ನ ನಟನೆ, ನಿರ್ಮಾಣದ ‘ಟಾಕ್ಸಿಕ್’ ಸಿನಿಮಾಕ್ಕೆ ಯುವ ಜನರನ್ನು ಸೆಳೆಯುವ ಪ್ರಯತ್ನದಲ್ಲಿರುವ ಯಶ್ ಇದೀಗ ಆನ್‌ಲೈನ್ ಗೇಮಿಂಗ್ ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್‌ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ.
26
ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್
ದೇಶದೊಳಗೇ ಸುಮಾರು 26 ಕೋಟಿಗೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿರುವ ಬಿಜಿಎಂಐ ಗೇಮ್‌ನ ಹೊಸ 4.4 ಅಪ್‌ಡೇಟ್‌ನ ಭಾಗವಾಗಿ ಈ ಸಹಯೋಗ ಮಾಡಲಾಗಿದೆ. ಇದಕ್ಕೆ ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್ ಎಂಬ ಹೆಸರನ್ನಿಡಲಾಗಿದೆ.
36
ಆಯುಧಗಳ ಮೂಲಕ ಫೈಟ್
ಈ ಗೇಮ್‌ನಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ಯಶ್ ಧ್ವನಿ ಕೇಳಬಹುದು. ‘ಟಾಕ್ಸಿಕ್’ ಸಿನಿಮಾದಲ್ಲಿ ಬಳಸಲಾದ ಆಯುಧಗಳ ಮೂಲಕ ಫೈಟ್ ಮಾಡಬಹುದು. ಈ ಗೇಮ್‌ನಲ್ಲಿ ಯಶ್ ಹೇರ್‌ಸ್ಟೈಲ್, ಉಡುಪು ಮತ್ತು ಆಕ್ಷನ್ ಮ್ಯಾನರಿಸಂಗಳನ್ನು ಅಳವಡಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಯಶ್, ಜೆನ್ ಜೀಗಳಿಗೆ ಅಧಿಕೃತತೆ, ಕತ್ತಿಯಲುಗಿನ ನಡೆಯಂಥಾ ರೋಚಕತೆ, ವಿಶಿಷ್ಟ ಕಥಾಹಂದರಗಳು ಇಷ್ಟ. ಆ ವೈಬ್ ಟಾಕ್ಸಿಕ್‌ನಲ್ಲಿದೆ. ನನ್ನ ಧ್ವನಿ ಮತ್ತು ಟಾಕ್ಸಿಕ್‌ನ ಎನರ್ಜಿ ಈ ಗೇಮ್‌ಗಳಲ್ಲಿದೆ.
56
ಅದ್ಭುತ ಅನುಭವ
ದೊಡ್ಡವರ ಫೇರಿಟೇಲ್ ಯುವ ಸಮುದಾಯಕ್ಕೆ ಅದ್ಭುತ ಅನುಭವ ನೀಡುತ್ತದೆ ಎಂಬ ವಿಶ್ವಾಸವಿದೆ. ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಕುತೂಹಲವಿದೆ ಎಂದರು.
66
ಟಾಕ್ಸಿಕ್‌ಗೆ ಗೀತು ಮೋಹನ್‌ದಾಸ್ ಆಕ್ಷನ್ ಕಟ್
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಶನ್ಸ್ ಸಂಸ್ಥೆಗಳು ನಿರ್ಮಿಸುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.