ನಿರ್ದೇಶಕ ಯೋಗರಾಜ್ ಭಟ್ ಸಾಲುಗಳ ಮೂಲಕ ಅಪ್ಪುವಿಗೆ ಅಂತಿಮ ನಮನ ಸಲ್ಲಿಸಿ ಬಾಂಧವ್ಯ ಸ್ಮರಿಸಿದ್ದಾರೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ.. ನಿಮ್ಮನ್ನು ಕೊನೆಯ ಬಾರಿ ಇವತ್ತು ಬಳಿನಿಂತು ನೋಡಿ, ಭುಜ ಮುಟ್ಟಿದಾ ನನಗೆ ಅನ್ನಿಸಿದ್ದು ಇಷ್ಟೆ.. ಸಾವಲ್ಲ ಇದು ನಿಮ್ಮ ಹುಟ್ಟು.. ದೇಹ ಹೋಗಬಹುದು ಸ್ನೇಹ ಹೋದೀತೆ? ಸತತವಾಗಿ ಈ ನಾಡಿಗೆ ನಿತ್ಯ ನೂತನವಾಗಿ ನೆನಪಾಗುತ್ತ ಇನ್ನಷ್ಟು ನಳನಳಿಸುವ ಕನ್ನಡ ಚೈತನ್ಯವಾಗಿ ಶಾಶ್ವತವಾಗಿ ಬಾಳುತ್ತೀರಿ ನೀವು... ಕುಟುಂಬಕ್ಕೆ ಸಕಲ ಕನ್ನಡಿಗರ ಶ್ರೀರಕ್ಷೆ ಇದೆ. ಆಪ್ತನಾಗಿ..ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ನಮನ ಹೋಗಿ ಬನ್ನಿ... ಇವು ಯೋಗರಾಜ್ ಭಟ್ ಅವರ ಸಾಲುಗಳು