ಸ್ಯಾಂಡಲ್‌ವುಡ್‌ ನಟ ಭೈರವ ವಜ್ರಮುನಿ ಪ್ರತಿಮೆ ನಿರ್ಮಾಣ

Published : Aug 29, 2023, 06:46 PM ISTUpdated : Aug 31, 2023, 02:22 PM IST

ಬೆಂಗಳೂರು (ಆ.29): ಕನ್ನಡ ಚಿತ್ರರಂಗದ ಮೇರು ನಟರಾದ ಡಾ.ರಾಜ್‌ ಕುಮಾರ್‌, ಶಂಕರ್‌ನಾಗ್‌, ಡಾ.ವಿಷ್ಣುವರ್ಧನ್‌, ಪುನೀತ್‌ ರಾಜ್‌ಕುಮಾರ್‌, ಡಾ.ಅಂಬರೀಶ್‌ ಸೇರಿದಂತೆ ಹಲವು ನಾಯಕರ ಪ್ರತಿಮೆಗಳು ಎಲ್ಲೆಡೆ ಕಾಣಸಿಗುತ್ತದೆ. ಆದರೆ, ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗ ಅಚ್ಚಳಿಯದೇ ಉಳಿಯುವ ಖಳನಾಯಕನ ಪಾತ್ರಗಳನ್ನು ಮಾಡಿದ ವಜ್ರಮುನಿ ಅವರು ನಮ್ಮನ್ನಗಲಿ 17 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ.

PREV
17
ಸ್ಯಾಂಡಲ್‌ವುಡ್‌ ನಟ ಭೈರವ ವಜ್ರಮುನಿ ಪ್ರತಿಮೆ ನಿರ್ಮಾಣ

ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗ ಅಚ್ಚಳಿಯದೇ ಉಳಿಯುವ ಖಳನಾಯಕನ ಪಾತ್ರಗಳನ್ನು ಮಾಡಿದ ವಜ್ರಮುನಿ ಅವರು ನಮ್ಮನ್ನಗಲಿದೆ 17 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ.

27

ರಾಜ್ಯದಲ್ಲಿ ಡಾ.ರಾಜ್‌ ಕುಮಾರ್‌, ವಿಷ್ಣುವರ್ಧನ್, ಅಂಬರೀಶ್‌, ಸುದೀಪ್, ಯಶ್‌ ಸೇರಿದಂತೆ ಹಲವು ನಾಯಕರ ಹೆಸರಿನಲ್ಲಿ ಅಭಿಮಾನಿಗಳ ಸಂಘಗಳು ಹಾಗೂ ಟ್ರಸ್ಟ್‌ಗಳಿವೆ. ಅದೇ ರೀತಿ ವಜ್ರಮುನಿ ಅವರ ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರನ್ನು ಒಳಗೊಂಡಂತೆ 'ನಟ ಭೈರವ ವಜ್ರಮುನಿ ಕಲಾ ಮತ್ತು ಸಾಂಸ್ಕೃತಿಕ ಟ್ರಸ್ಟ್‌ (ರಿ)' ಕೂಡ ಸ್ಥಾಪಿಸಲಾಗಿದೆ.

37

ಬಿಬಿಎಂಪಿ ವ್ಯಾಪ್ತಿಯಲ್ಲಿ ಜಯನಗರದ ಒಂದು ರಸ್ತೆಗೆ ಸ್ಯಾಂಡಲ್‌ವುಡ್‌ ಖಳನಾಯಕ ವಜ್ರಮುನಿ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಲಾಗಿದೆ. 2022ರ ಡಿಸೆಂಬರ್‌ನಲ್ಲಿ ವಜ್ರಮುನಿ ಅವರ ಹೆಸರನ್ನು ಜಯನಗರ 2ನೇ ಬ್ಲಾಕ್‌ನ 9ನೇ ಅಡ್ಡರಸ್ತೆಗೆ 'ನಟ ಭೈರವ ಶ್ರೀ ವಜ್ರಮುನಿ ರಸ್ತೆ' ಎಂದು ನಾಮಕರಣ ಮಾಡಿ ಫಲಕ ಅಳವಡಿಕೆ ಮಾಡಲಾಗಿದೆ. 

47

ಹೌದು, ಯಾವುದೇ ವ್ಯಕ್ತಿಗಳನ್ನು ಕೆಟ್ಟ ಪಾತ್ರಗಳಿಗೆ ಹೋಲಿಕೆ ಮಾಡುವುದೆಂದರೆ ಮೊದಲು ರಾವಣ ಎಂದು ಕರೆಯುತ್ತೇವೆ. ಅದನ್ನು, ಬಿಟ್ಟರೆ ಎರಡನೇ ಹೆಸರು ಬರುವುದೇ ವಜ್ರಮುನಿ ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ. ಕಾರಣ ಅಷ್ಟೊಂದು ಖಳನಾಯಕನ ಪಾತ್ರಗಳನ್ನು ಮಾಡುತ್ತಾ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದರು.

57

ಸಿನಿಮಾಗಳಲ್ಲಿ ಕೆಟ್ಟ ಪಾತ್ರಗಳಲ್ಲಿ ಉಗ್ರವಾಗಿ ನಟಿಸುತ್ತಾ ಆರ್ಭಟಿಸುತ್ತಿದ್ದ ವಜ್ರಮುನಿ ಅವರು ನಿಜ ಜೀವನದಲ್ಲಿ ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿ ಆಗಿದ್ದರು ಎಂದು ಅವರ ಕುಟುಂಬಸ್ಥರು ಹಾಗೂ ಅನೇಕ ಸಿನಿಮಾ ರಂಗದ ಸ್ನೇಹಿತರು ಹೇಳಿಕೊಂಡಿದ್ದಾರೆ.

67

ಡಾ. ರಾಜ್‌ ಕುಮಾರ್‌ ಅವರ ಸಿನಿಮಾ ಎಂದಾಕ್ಷಣ ಅವರಿಗೆ ಖಳನಾಯಕನಾಗಿ ವಜ್ರಮುನಿ ಇದ್ದರೆ ಮಾತ್ರ ಸರಿಯಾದ ನಾಯಕ -ಖಳನಾಯಕ ಜೋಡಿ ಎಂದೆನಿಸಿಕೊಳ್ಳುತ್ತಿತ್ತು. ಪೌರಾಣಿಕ ಹಾಗೂ ಸಮಾಜಿಕ ಹಿನ್ನೆಲೆಯ ಬಹುತೇಕ ಚಲನಚಿತ್ರಗಳಲ್ಲಿಯೂ ಅವರು ರಾಜ್‌ಕುಮಾರ್‌ ಮತ್ತು ವಜ್ರಮುಕಿ ನಾಯಕ- ಖಳನಾಯಕರಾಗಿ ನಟಿಸಿದ್ದಾರೆ.

77

ಇನ್ನು ಬೆಂಗಳೂರಿನ ನಾಗರಬಾವಿ ವೃತ್ತದ ಎಕ್ಸಿಸ್‌ ಬ್ಯಾಂಕ್‌ನ ಎದುರು ಆ.30ರ ಬೆಳಗ್ಗೆ 9 ಗಂಟೆಗೆ ವಜ್ರಮುನಿ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಪ್ರಿಯಾಕೃಷ್ಣ ಅವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಈ ವೇಳೆ ವಜ್ರಮುನಿ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ಭಾಗವಹಿಸಲಿದ್ದಾರೆ.

Read more Photos on
click me!

Recommended Stories