ಚೊಚ್ಚಲ ಹಿಟ್ ಚಿತ್ರ ನೀಡಿದ ನಟನ ಬದುಕು 34ನೇ ವಯಸ್ಸಿಗೆ ರೇಪ್‌ ಅರೋಪಕ್ಕೆ ಕೊನೆಯಾಯ್ತು

First Published Aug 29, 2023, 4:44 PM IST

ಚೊಚ್ಚಲ ಸಿನೆಮಾದಲ್ಲಿ ಹೆಸರು ಮಾಡಿ ಬೆಳೆದ ಅನೇಕ  ನಟರಿದ್ದಾರೆ. ಆದರೆ ಈಗ ಅಂತಹ ಹಲವು ನಟರು ಜನಮನದಿಂದ ದೂರವಿದ್ದಾರೆ. ಭೂಲ್ ಭುಲೈಯಾ ಮತ್ತು ಗ್ಯಾಂಗ್‌ಸ್ಟರ್-ಫೇಮ್ ನಟ  ತಮ್ಮ ಚೊಚ್ಚಲ ಚಿತ್ರಕ್ಕಾಗಿ  ಪ್ರಶಸ್ತಿ ಪಡೆದಿದ್ದರೂ, ಆದರೆ ಈಗ ಗ್ಲಾಮರ್ ಬದುಕಿನಿಂದ ದೂರವಿದ್ದಾರೆ. ಗ್ಲಾಮರ್  ಉದ್ಯಮದಲ್ಲಿ ತಮ್ಮ ವೃತ್ತಿ ಜೀವನವನ್ನು ಜಾಹೀರಾತುಗಳೊಂದಿಗೆ ಪ್ರಾರಂಭಿಸಿದ ನಟ ಮೊದಲ ಚಿತ್ರದಲ್ಲೇ ಹಿಟ್‌ ಆಗಿ ಭವಿಷ್ಯದ ಭರವಸೆ ಆಗಿದ್ದರು. ಆದರೆ ಅತ್ಯಚಾರ ಆರೋಪದಲ್ಲಿ 34ನೇ ವಯಸ್ಸಿಗೆ ಭರವಸೆಯ ನಟನ ಬಣ್ಣದ ಬದುಕು ಅಂತ್ಯವಾಯ್ತು.

2005 ರಲ್ಲಿ, ಸುಧೀರ್ ಮಿಶ್ರಾ ಅವರ Hazaaron Khwaishein Aisi ಬಿಡುಗಡೆಯಾದಾಗ,  ಅದು ದೊಡ್ಡ ಚಿತ್ರವಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ.  ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ  ಕೊಳ್ಳೆಹೊಡೆಯಿತು. ಸಾರ್ವತ್ರಿಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು, ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮತ್ತು ಭಾರತದಲ್ಲಿ ಪ್ರಶಸ್ತಿಗಳನ್ನು ಗೆದ್ದಿತು. ಇದು ಚಿತ್ರದಲ್ಲಿನ ಮೂರು ನಾಯಕರ ವೃತ್ತಿಜೀವನಕ್ಕೆ ಹೊಸ ಭಾಷ್ಯ ಬರೆಯಿತು. ಕೇ ಕೇ ಮೆನನ್, ಚಿತ್ರಾಂಗದಾ ಸಿಂಗ್ ಮತ್ತು ಶೈನಿ ಅಹುಜಾ ಆ ಮೂವರು ನಾಯಕರು. 

ಮೂವರಲ್ಲಿ ಶೈನಿ ತುಂಬಾ ಮಿಂಚಿದರು. 70 ರ ದಶಕದ ಭಾರತದಲ್ಲಿ ನೈತಿಕವಾಗಿ ದ್ವಂದ್ವಾರ್ಥದ ಉದ್ಯಮಿಯಾಗಿ ಅವರ ಅಭಿನಯಕ್ಕೆ, ಫಿಲ್ಮ್‌ಫೇರ್, IIFA, ಜೀ ಸಿನಿ ಸೇರಿ ಎಲ್ಲಾ ಪ್ರಮುಖ ಬಾಲಿವುಡ್ ಪ್ರಶಸ್ತಿಗಳು ಅರಸಿ ಬಂತು ಮತ್ತು ಸ್ಕ್ರೀನ್‌ನಲ್ಲಿ ಶೈನಿ ಅತ್ಯುತ್ತಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದರು.

Latest Videos


2006ರಲ್ಲಿ ಎರಡು ದೊಡ್ಡ ಹಿಟ್ ಚಿತ್ರಗಳಾದ ಗ್ಯಾಂಗ್‌ಸ್ಟರ್ ಮತ್ತು ವೋ ಲಮ್ಹೆಯನ್ನು ಮುನ್ನಡೆಸುವ ಮೊದಲು ಅವರು ಕರಮ್‌ನಲ್ಲಿ ಪೋಷಕ ಪಾತ್ರ ನಿರ್ವಹಿಸಿದರು.  ನಂತರದ ವರ್ಷ ಅವರು ಎರಡು  ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ ಕಾರಣ ತನ್ನ ವೃತ್ತಿ ಜೀವನದ ಉತ್ತಂಗಕ್ಕೇರಿದರು. 2008 ರ ಮೊದಲು ಭೂಲ್ ಭುಲೈಯಾ ಮತ್ತು ಲೈಫ್ ಇನ್ ಎ ಮೆಟ್ರೋ  ತೆರೆ ಕಂಡಿತು. ಹೈಜಾಕ್‌ ಅವರ ಮೊದಲ ದೊಡ್ಡ ಫ್ಲಾಪ್ ಸಿನೆಮಾ.

ಮೇ 15, 1973 ರಂದು ಪಂಜಾಬಿ ಕುಟುಂಬದಲ್ಲಿ ಜನಿಸಿದರು, ಹುಟ್ಟಿ ಬೆಳೆದದ್ದು ನವದೆಹಲಿಯಲ್ಲಿ. ನಟ ತನ್ನ ಶಾಲಾ ಶಿಕ್ಷಣವನ್ನು ರಾಂಚಿಯ ಸೇಂಟ್ ಕ್ಸೇವಿಯರ್ ಶಾಲೆ ಮತ್ತು ಧೌಲಾ ಕುವಾನ್‌ನ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ಅವರು ತಮ್ಮ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.
 

ಶೈನಿ ಅಹುಜಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಜಾಹೀರಾತುಗಳೊಂದಿಗೆ ಪ್ರಾರಂಭಿಸಿದರು. ಪೆಪ್ಸಿಗಾಗಿ ಅವರು ತಮ್ಮ ಮೊದಲ ವಾಣಿಜ್ಯ ಜಾಹೀರಾತನ್ನು ಪಡೆದರು, ಅದು ಅವರನ್ನು ಜನರ ದೃಷ್ಟಿಗೆ ತಂದಿತು ಮತ್ತು ನಟನಿಗೆ ಆಫರ್‌ಗಳ ಪ್ರವಾಹ ಬಂದಿತು. ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮುನ್ನ ಅವರು 40 ವಾಣಿಜ್ಯ ಜಾಹೀರಾತುಗಳನ್ನು ಮಾಡಿದ್ದರು.

ಹೊಸತನದ ಚಿತ್ರವನ್ನು ಶೈನಿ ಹುಡುಕುತ್ತಿರುವಾಗ ಅವರ ಜೀವನದಲ್ಲಿ ಬಹುದೊಡ್ಡ ಬಿರುಗಾಳಿ ಬೀಸಿದಂತಾಯ್ತು. 2009 ರಲ್ಲಿ ನಟನನ್ನು ಮುಂಬೈ ಪೊಲೀಸರು ಬಂಧಿಸಿದರು, ಮನೆಕೆಲಸದವಳ ಮೇಲೆ ಅತ್ಯಾಚಾರ, ಬಂಧನ ಮತ್ತು ಬೆದರಿಕೆ ಆರೋಪ ಬಂತು ನಂತರ ಶೈನಿ ಅಹುಜಾ ಅವರ ವೃತ್ತಿಜೀವನವು ಯು-ಟರ್ನ್ ತೆಗೆದುಕೊಂಡಿತು. 

ಸಂತ್ರಸ್ತೆಗೆ ಒತ್ತಡವಿದೆ ಬೆದರಿಕೆ ಇದೆ ಎಂಬ ಆರೋಪದಲ್ಲಿ ಬಾಂಬೆ ಹೈಕೋರ್ಟ್ 2011 ರಲ್ಲಿ ನಟನಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.  ಆದರೆ, ನಟನ  ಹೆಂಡತಿ ಅನುಪಮ್ ಅಹುಜಾ  ಹೋರಾಡಿ ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದರು. ದಂಪತಿಗೆ ಅರ್ಷಿಯಾ ಎಂಬ ಮಗಳೂ ಇದ್ದಾಳೆ.

ನಟನಿಗೆ 2015 ರವರೆಗೆ ಕೆಲಸ ಸಿಗಲಿಲ್ಲ ಮತ್ತು ಅದರ ನಂತರ, ನಟ ಚಿತ್ರರಂಗದಿಂದ ದೂರವಾಗಿದ್ದಾರೆ ಮತ್ತು ಅವರು ಎಲ್ಲಿದ್ದಾರೆಂದು ಯಾರಿಗೂ ತಿಳಿದಿಲ್ಲ. ನಟ ತನ್ನ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಎಂಟು ವರ್ಷಗಳಿಂದ ಚಲನಚಿತ್ರ ಉದ್ಯಮದಲ್ಲಿ ಕೆಲಸ ಮಾಡಿಲ್ಲ. 

2012 ರಲ್ಲಿ, ಶೈನಿ ಘೋಸ್ಟ್ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಲು ಪ್ರಯತ್ನಿಸಿದರು, ಇದರಲ್ಲಿ ಸಯಾಲಿ ಭಗತ್ ಕೂಡ ನಟಿಸಿದ್ದಾರೆ. ಚಿತ್ರವು ವಿಮರ್ಶಾತ್ಮಕವಾಗಿ ಪ್ಯಾನ್ ಮಾಡಲ್ಪಟ್ಟಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ. ಮೂರು ವರ್ಷಗಳ ನಂತರ, ಅವರು ವೆಲ್ಕಮ್ ಬ್ಯಾಕ್‌ನಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು, ಇದರಲ್ಲಿ ಜಾನ್ ಅಬ್ರಹಾಂ, ಅನಿಲ್ ಕಪೂರ್ ಮತ್ತು ನಾನಾ ಪಾಟೇಕರ್ ಸೇರಿದಂತೆ ಇತರರು ನಟಿಸಿದ್ದಾರೆ. ಈ ಚಿತ್ರವು ದೊಡ್ಡ ಹಿಟ್ ಆದರೆ ಪರದೆಯ ಮೇಲೆ ಶೈನಿ ಅವರ ಅಂತಿಮ ಪ್ರದರ್ಶನವನ್ನು ಗುರುತಿಸಿತು. 

click me!