ಸದ್ಗುರುಗಳ ಸನ್ನಿಧಿಯಲ್ಲಿ ನಟಿ ಸಮಂತಾ; ಮದ್ವೆಯಾದ ಜಾಗದಲ್ಲೇ ಬೇಬಿ ಬಂಪ್ ಸಂಭ್ರಮ

Published : Sep 07, 2026, 10:57 PM IST

ನಟಿ ಸಮಂತಾ ರುತ್ ಪ್ರಭು ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆಧ್ಯಾತ್ಮಿಕ ಪಯಣವನ್ನು ಮುಂದುವರಿಸಿದ್ದಾರೆ. ಮದುವೆಯಾದ ಪವಿತ್ರ ಜಾಗದಲ್ಲೇ ಕಾಲ ಕಳೆಯುತ್ತಿರುವ ಸಮಂತಾ, ಇದು ತಮ್ಮ ಜೀವನದ ಹೊಸ ಸಾಧ್ಯತೆಗಳಿಗೆ ದಾರಿಯಾಗಿದೆ ಎಂದು ಹೇಳಿದ್ದಾರೆ.

PREV
15
ಸದ್ಗುರುಗಳ ಸನ್ನಿಧಿಯಲ್ಲಿ ಸಮಂತಾ

ಸ್ಟಾರ್ ನಟಿ ಸಮಂತಾ ರುತ್ ಪ್ರಭು ಸದ್ಯ ತಮ್ಮ ಜೀವನದ ಅತ್ಯಂತ ಸುಂದರ ಮತ್ತು ಮಹತ್ವದ ಘಟ್ಟದಲ್ಲಿದ್ದಾರೆ. ಒಂದೆಡೆ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಮನಸ್ಸಿನ ಶಾಂತಿಗಾಗಿ ಆಧ್ಯಾತ್ಮದ ಹಾದಿ ಹಿಡಿದಿದ್ದಾರೆ. ಇತ್ತೀಚೆಗೆ ಸಮಂತಾ ಕೊಯಮತ್ತೂರಿನ ಸದ್ಗುರುಗಳ ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದು ಈ ಭೇಟಿಯನ್ನು ತಮ್ಮ 'ಸ್ಪಿರಿಚುವಲ್ ಪ್ರೆಗ್ನೆನ್ಸಿ ಟೂರ್' (Spiritual Pregnancy Tour) ಎಂಬಂತೆ ಆನಂದಿಸುತ್ತಿದ್ದಾರೆ.

25
ಮದುವೆಯಾದ ಜಾಗಕ್ಕೆ ಮರಳಿದ ಸಮಂತಾ

ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೂ ಸಮಂತಾ ಅವರಿಗೂ ಒಂದು ಅವಿನಾಭಾವ ಸಂಬಂಧವಿದೆ. 2025ರ ಡಿಸೆಂಬರ್‌ನಲ್ಲಿ ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ಇದೇ ಕೇಂದ್ರದಲ್ಲಿ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ತಾಯಿಯಾಗುತ್ತಿರುವ ಹೊಸ್ತಿಲಲ್ಲಿರುವ ಸಮಂತಾ, ತಾವು ಮದುವೆಯಾದ ಅದೇ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿರುವುದು ವಿಶೇಷ.

35
ಕಳೆದ 5 ವರ್ಷಗಳ ಪಾಠ ಏನು?

ತಮ್ಮ ಭೇಟಿಯ ಫೋಟೋಗಳನ್ನು ಹಂಚಿಕೊಂಡಿರುವ ಸಮಂತಾ, ಕಳೆದ ಐದು ವರ್ಷಗಳಲ್ಲಿ ತಮ್ಮಲ್ಲಾದ ಬದಲಾವಣೆಯ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ನನ್ನ ಬಗ್ಗೆ ನನಗೆ ಎಲ್ಲವೂ ತಿಳಿದಿದೆ, ಇಷ್ಟೇ ನನ್ನ ಸಾಮರ್ಥ್ಯ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಕಳೆದ ಐದು ವರ್ಷಗಳು ನನಗೆ ಬೇರೆಯದ್ದೇ ಪಾಠ ಕಲಿಸಿವೆ. ಪ್ರತಿ ಬಾರಿ ನಾನು ಇಲ್ಲಿಗೆ ಬಂದಾಗಲೂ ಹೊಸ ಸಾಧ್ಯತೆಗಳೊಂದಿಗೆ ಹೊರಹೋಗುತ್ತೇನೆ. ಇನ್ನೂ ಕಲಿಯುವುದು ತುಂಬಾ ಇದೆ ಎಂಬ ಹಸಿವು ನನ್ನಲ್ಲಿ ಮೂಡುತ್ತದೆ ಎಂದು ಸಮಂತಾ ಹೇಳಿದ್ದಾರೆ.

45
ಬೇಬಿ ಬಂಪ್ ಸಂಭ್ರಮ

ಇಶಾ ಕೇಂದ್ರದಲ್ಲಿ ಸಮಂತಾ ಕರುಗಳ ಜೊತೆ ಸಮಯ ಕಳೆಯುವುದು, ಮೌನವಾಗಿ ಪವಿತ್ರ ಆವರಣದಲ್ಲಿ ನಡಿಗೆ ಮಾಡುವುದು ಮತ್ತು ಲಿಂಗ ಭೈರವಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದರಲ್ಲಿ ಮಗ್ನರಾಗಿದ್ದಾರೆ. ಕಳೆದ ಜೂನ್‌ನಲ್ಲಿ ತಮ್ಮ ಗರ್ಭಾವಸ್ಥೆಯ ವಿಚಾರ ತಿಳಿಸಿದ್ದ ಸಮಂತಾ, ಇತ್ತೀಚೆಗೆ ಬೇಬಿ ಬಂಪ್‌ನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈಗ ಈ ಆಧ್ಯಾತ್ಮಿಕ ಪ್ರವಾಸವು ಅವರ ಮನಸ್ಸು ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡಿದೆ.

55
ಒಂದು ಕಿವಿ ಮಾತು

ಒಟ್ಟಾರೆಯಾಗಿ, ಸಮಂತಾ ಸದ್ಯ ತಮಗೆ ಇಷ್ಟವಾದ ಜಾಗದಲ್ಲಿ ಇಷ್ಟವಾದ ಜನರ ನಡುವೆ ಪ್ರಶಾಂತವಾಗಿ ಕಾಲ ಕಳೆಯುತ್ತಿದ್ದಾರೆ. ನಿಮ್ಮನ್ನು ಬೆಳೆಸುವಂತಹ ವ್ಯಕ್ತಿಗಳು ಮತ್ತು ಸ್ಥಳಗಳನ್ನು ಹುಡುಕಿಕೊಳ್ಳಿ ಎಂಬ ಕಿವಿಮಾತನ್ನು ಅವರು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories