ಬರೋಬ್ಬರಿ ₹ 500 ಕೋಟಿ ಗಳಿಸಿದ ಕನಕವತಿ, ಕಮಾಲ್ ಮಾಡಿದ ರುಕ್ಮಿಣಿ ವಸಂತ್; ಇವರೀಗ ಯಾವ ಕ್ರಶ್..?

Published : Oct 10, 2025, 01:40 PM IST

ರಿಷಭ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ನಟಿಸಿರೋ ನಟಿ ರುಕ್ಮಿಣಿ ವಸಂತ್ ಅವರೀಗ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಅವರನ್ನು ಫ್ಯಾನ್ಸ್ ದಂಡು ಮುತ್ತಿಕೊಂಡು ಸೆಲ್ಫೀ, ಆಟೋಗ್ರಾಫ್ ತೆಗೆದುಕೊಳ್ಳುತ್ತಿದ್ದಾರೆ. ಅವರೀಗ  ಯಾವ ಕ್ರಶ್?

PREV
112

ಕನ್ನಡದ ನಟಿ, ;ಸಪ್ತಸಾಗರದಾಚೆ ಎಲ್ಲೋ ' ಸಿನಿಮಾದ ಖ್ಯಾತಿಯ ರುಕ್ಮಿಣಿ ವಸಂತ್ ಅವರು ಇದೀಗ ಸಖತ್ ಟ್ರೆಂಡಿಂಗ್‌ ಸೃಷ್ಟಿಸಿಕೊಂಡಿದ್ದಾರೆ. 

212

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ‘ಕನಕವತಿ’ಯಾಗಿ ನಟಿಸಿರುವ ನಟಿ ರುಕ್ಮಿಣಿ ವಸಂತ್ ಈಗ ಇಂಟರ್‌ನ್ಯಾಷನಲ್ ಕ್ರಶ್ ಆಗಿ ಮಿಣಚುತ್ತಿದ್ದಾರೆ. 

312

ರಿಷಬ್ ಶೆಟ್ಟಿಯವರ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಕಲೆಕ್ಷನ್ ರೂ. 500 ಕೋಟಿ ದಾಟಿದೆ ಎಂದು ಈ ಸಿನಿಮಾದ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲಂಸ್‌’ ಸಂಸ್ಥೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ ಮೂಲಕ ಘೋಷಿಸಿದೆ. 

412

ಅಲ್ಲಿಗೆ ಕನ್ನಡದ ಸಿನಿಮಾವೊಂದು ಇತ್ತೀಚೆಗೆ ಒಂದೇ ವಾರದಲ್ಲಿ 500 ಕೋಟಿ ರೂಪಾಯಿ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ.

512

ನಟಿ ರುಕ್ಮಿಣಿ ವಸಂತ್ ಅವರು ಈ ಸಿನಿಮಾದಲ್ಲಿ ಕನಕವತಿ ಪಾತ್ರ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಚಿತ್ರದಲ್ಲಿ ನಾಯಕಿಯೂ ಖಳನಾಯಕಿಯೂ ಆಗಿ ಅವರ ಪಾತ್ರ ಪೋಷಣೆ ಅಮೋಘ ಎನ್ನಬಹುದು.

612

ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್-1 ಹಾಗೂ ಪಾರ್ಟ್ 2 ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ರುಕ್ಮಿಣಿ ವಸಂತ್ ಅವರು ಸದ್ಯ ತಮಿಳು ಹಾಗೂ ಕನ್ನಡ ಸಿನಿಮಾಗಳ ಮೂಲಕ ಸ್ಟಾರ್ ನಟಿ ಎನ್ನಿಸಿಕೊಂಡಿದ್ದಾರೆ.

712

ಕಾಂತಾರ ಸಿನಿಮಾದ ಭಾರೀ ಸಕ್ಸಸ್ ಹಾಗೂ ತತಮ್ಮ ಸ್ವಂತ ಪ್ರತಿಭೆ ಮೂಲಕ ನಟಿ ರುಕ್ಮಿಣಿ ವಸಂತ್ ಅವರು ಇದೀಗ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸಖತ್ ಶೈನ್ ಆಗುತ್ತಿದ್ದಾರೆ. 

812

ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ‘ಪುಟ್ಟಿ’ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಅವರು ಇದೀಗ ಕನಕವತಿಯಾಗಿ ಮನೆಮನೆಯಲ್ಲಿ ಮಿಂಚು ಹರಿಸಿದ್ದಾರೆ. ಅವರನ್ನು ಈಗ ಯಾವ ಕ್ರಶ್ ಎಂದು ಕರೆಯಬಹುದು ಎಂಬ ಚರ್ಚೆ ಶುರುವಾಗಿದೆ. 

912

ಅವರನ್ನು ಈಗ ಯಾವ ಕ್ರಶ್ ಎಂದು ಕರೆಯಬಹುದು ಎಂಬ ಚರ್ಚೆ ಶುರುವಾಗಿದೆ. ಕನ್ನಡದ ಕ್ರಶ್, ಕರ್ನಾಟಕದ ಕ್ರಶ್, ನ್ಯಾಷನಲ್ ಕ್ರಶ್ ಅಥವಾ ಇಂಟರ್‌ನ್ಯಾಷನಲ್ ಕ್ರಶ್ ಯಾವುದು ಇವರಿಗೆ ಸೂಕ್ತ ಎಂಬ ಚರ್ಚೆಯೀಗ ಶುರುವಾಗಿದೆ. 

1012

ನಟಿ ರಶ್ಮಿಕಾ ಮಂದಣ್ಣ ವಿರೋಧಿಗಳಂತೂ ಈ ಚರ್ಚೆಯನ್ನು ಇನ್ನೂ ಒಂದು ಹೆಚ್ಚಿನ ಲೆವೆಲ್‌ಗೆ ತೆಗೆದುಕೊಂಡು ಹೋಗಿ ‘ಇಂಟರ್‌ನ್ಯಾಷನಲ್ ಕ್ರಶ್' ಎನ್ನತೊಡಗಿದ್ದಾರೆ. ಆದರೆ, ಅದಿನ್ನೂ ಬಳಕೆಯಲ್ಲಿ ಬಂದಿಲ್ಲ.

1112

ನಟಿ ರುಕ್ಮಿಣಿ ವಸಂತ್ ನಟನೆಯ ಸಿನಿಮಾ ‘ಕಾಂತಾರ ಚಾಪ್ಟರ್ 1’ ಚಿತ್ರವು ಬರೋಬ್ಬರಿ 500 ಕೋಟಿ ಗಳಿಸಿ, ಒಂದೇ ವಾರದಲ್ಲಿ '500 ಕೋಟಿ ಕ್ಲಬ್' ಸೇರುವ ಮೂಲಕ ಕಮಾಲ್ ಮಾಡಿದೆ.

1212

ಒಟ್ಟಿನಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರ ಹೊಸ ಚಾಪ್ಟರ್ ಈ ಮೂಲಕ ಶುರುವಾಗಿದೆ. ನಟಿ ರಶ್ಮಿಕಾ ಮಂದಣ್ಣ ಎಂಗೇಜ್‌ಮೆಂಟ್ ಸುದ್ದಿ ಹಬ್ಬಿರುವ ಈ ಸಮಯದಲ್ಲಿ ಆ ಸ್ಥಾನವನ್ನು ಈ ನಟಿ ತುಂಬಬಹುದಾ? ಕಾದು ನೋಡಬೇಕಷ್ಟೇ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories