ಲೈಟ್ಸ್, ಕ್ಯಾಮೆರಾ, ಅಕ್ಷನ್ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿ; ಆ ಕಣ್ಣೀರ ಕಥೆಯ ಹಿಂದೇನಿದೆ ಗೊತ್ತಾ?

Published : Sep 01, 2026, 11:39 AM IST

ಸಿನಿಮಾ ಅಂದ್ರೆ ಅಲ್ಲಿ ಬಣ್ಣವಿದೆ, ಬೆಡಗಿದೆ, ಪ್ರಸಿದ್ಧಿಯ ಹಪಹಪಿಯಿದೆ. ಒಮ್ಮೆ ಕ್ಯಾಮೆರಾ ಮುಂದೆ ನಿಂತು ಚಪ್ಪಾಳೆ ಗಿಟ್ಟಿಸಿಕೊಂಡವರು ಆ ಲೋಕವನ್ನು ಬಿಟ್ಟು ಹೊರಬರುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಇಲ್ಲೊಬ್ಬರು ‘ಗ್ಲಾಮರ್’ ಲೋಕ ಬಿಟ್ಟು ಸುಪ್ರೀಂ ಕೋರ್ಟ್ ಲಾಯರ್ ಆಗಿದ್ದಾರೆ.

PREV
17

South Indian Actress Reshma Rathore Success Story, Cinema to Lawyer-ರೇಷ್ಮಾ ರಾಥೋಡ್: ಸಿನಿಮಾ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿಯ ರೋಚಕ ಜೀವನ ಪಯಣ!

ಸಿನಿಮಾ ಅಂದ್ರೆ ಅಲ್ಲಿ ಬಣ್ಣವಿದೆ, ಬೆಡಗಿದೆ, ಪ್ರಸಿದ್ಧಿಯ ಹಪಹಪಿಯಿದೆ. ಒಮ್ಮೆ ಕ್ಯಾಮೆರಾ ಮುಂದೆ ನಿಂತು ಚಪ್ಪಾಳೆ ಗಿಟ್ಟಿಸಿಕೊಂಡವರು ಆ ಲೋಕವನ್ನು ಬಿಟ್ಟು ಹೊರಬರುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಇಲ್ಲೊಬ್ಬರು ತೆಲುಗು ಸುಂದರಿ "ಗ್ಲಾಮರ್ ಅನ್ನೋದು ಬರಿ ಕ್ಷಣಿಕ, ನ್ಯಾಯಕ್ಕಾಗಿ ಹೋರಾಡುವುದೇ ನಿಜವಾದ ಬದುಕು" ಎಂದು ಸಾಬೀತುಪಡಿಸಿದ್ದಾರೆ. ಅವರೇ ಟಾಲಿವುಡ್‌ನ ಮಾಜಿ ನಟಿ, ಪ್ರಸ್ತುತ ಸುಪ್ರೀಂ ಕೋರ್ಟ್‌ನ ಖಡಕ್ ವಕೀಲೆ ರೇಷ್ಮಾ ರಾಥೋಡ್!

27

ಬೆಳ್ಳಿತೆರೆಯ ಮಿಂಚು:

ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಮಣ್ಣಿನ ಮಗಳಾದ ರೇಷ್ಮಾ ಅವರಿಗೆ ಬಾಲ್ಯದಿಂದಲೇ ನಟನೆಯೆಂದರೆ ಅಪಾರ ಪ್ರೀತಿ. ಬಾಲನಟಿಯಾಗಿಯೇ ಬಣ್ಣ ಹಚ್ಚಿದ್ದ ಇವರು, ವಾರಂಗಲ್‌ನ ಕಾಕತೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗಲೇ ಚಿತ್ರರಂಗದ ಕಣ್ಣಿಗೆ ಬಿದ್ದರು. ಖ್ಯಾತ ನಿರ್ದೇಶಕ ಮಾರುತಿ ಅವರ ಕಣ್ಣು ಈ ಪ್ರತಿಭೆಯ ಮೇಲೆ ಬಿತ್ತು. ಅವರ ನಿರ್ದೇಶನದ ಸೂಪರ್ ಹಿಟ್ ಯೂತ್ ಫುಲ್ ಸಿನಿಮಾ 'ಈರೋಜುಲ್ಲೋ' ಮೂಲಕ ರೇಷ್ಮಾ ರಾಥೋಡ್ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಮೊದಲ ಚಿತ್ರವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದರಿಂದ ರೇಷ್ಮಾಗೆ ಅವಕಾಶಗಳ ಸುರಿಮಳೆಯೇ ಆಯಿತು.

37

ಅಷ್ಟೇ ಅಲ್ಲದೆ, ವಿಕ್ಟರಿ ವೆಂಕಟೇಶ್ ಅವರ 'ಬಾಡಿಗಾರ್ಡ್' ಚಿತ್ರದಲ್ಲಿ ನಾಯಕಿಯ ಆಪ್ತ ಗೆಳತಿಯಾಗಿ, ದಿವಂಗತ ನಟ ಉದಯ್ ಕಿರಣ್ ಅವರೊಂದಿಗೆ 'ಜೈ ಶ್ರೀರಾಮ್' ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ತೆಲುಗು ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ರೇಷ್ಮಾ ಚಿರಪರಿಚಿತರಾದರು.

47

ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಕಪ್ಪು ಸುಂದರಿ:

2017ರವರೆಗೂ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ರೇಷ್ಮಾಗೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಬಣ್ಣದ ಲೋಕದ ಅನಿಶ್ಚಿತತೆ ಅವರಿಗರಿವಾಯಿತು. ಈ ಹಂತದಲ್ಲಿ ಅವರು ಒಂದು ದಿಟ್ಟ ನಿರ್ಧಾರ ಮಾಡಿದರು. ಅದುವೇ ತನ್ನ ತಾಯಿ ರಾಧಾಬಾಯಿ ರಾಥೋಡ್ (ಹೈಕೋರ್ಟ್ ವಕೀಲೆ) ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು. ತಾಯಿಯ ವೃತ್ತಿಯೇ ಮಗಳಿಗೆ ಸ್ಪೂರ್ತಿಯಾಯಿತು. ಮೆಕಪ್ ಕಿಟ್ ಪಕ್ಕಕ್ಕಿಟ್ಟು ಕೈಗೆ ಕಾನೂನು ಪುಸ್ತಕಗಳನ್ನು ಎತ್ತಿಕೊಂಡರು.

57

ಕರಾಮತ್ತಿನ ಕಪ್ಪು ಕೋಟು:

ಸಿನಿಮಾದ ಡೈಲಾಗ್‌ಗಳಿಗಿಂತ ಸಂವಿಧಾನದ ವಿಧಿಗಳು ಅವರಿಗೆ ಹೆಚ್ಚು ಆಪ್ತವೆನಿಸಿದವು. ಕಾನೂನು ಪದವಿಯನ್ನು ಯಶಸ್ವಿಯಾಗಿ ಮುಗಿಸಿದ ರೇಷ್ಮಾ, ವಕೀಲೆಯಾಗಿ ವೃತ್ತಿ ಜೀವನ ಆರಂಭಿಸಿದರು. ತಮ್ಮ ಚುರುಕುತನ ಮತ್ತು ಜಾಣ್ಮೆಯಿಂದಾಗಿ ಇಂದು ಅವರು ದೇಶದ ಅತ್ಯುನ್ನತ ನ್ಯಾಯಾಲಯವಾದ ದೆಹಲಿಯ ಸುಪ್ರೀಂ ಕೋರ್ಟ್‌ನಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿನಿಮಾ ಸೆಟ್‌ನಲ್ಲಿ ಲೈಟ್ಸ್‌ಗಳ ನಡುವೆ ಇರುತ್ತಿದ್ದ ಹುಡುಗಿ ಇಂದು ನ್ಯಾಯಾಲಯದ ಪೀಠದ ಮುಂದೆ ನ್ಯಾಯಕ್ಕಾಗಿ ವಾದಿಸುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ!

67

ಮಾದರಿ ವ್ಯಕ್ತಿತ್ವ:

ಕೇವಲ ನ್ಯಾಯಾಲಯಕ್ಕೆ ಸೀಮಿತವಾಗದ ರೇಷ್ಮಾ, ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದಾರೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂದು ನಟಿಯಾಗಿ ಜನರ ಮನರಂಜಿಸಿದ್ದ ರೇಷ್ಮಾ, ಇಂದು ವಕೀಲೆಯಾಗಿ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ.

77

"ಸಿನಿಮಾ ಪ್ರಪಂಚದಿಂದ ಸುಪ್ರೀಂ ಕೋರ್ಟ್‌ವರೆಗೆ" ರೇಷ್ಮಾ ನಡೆದು ಬಂದ ಹಾದಿ ಕೇವಲ ಒಂದು ಬದಲಾವಣೆಯಲ್ಲ, ಅದು ದೃಢ ನಿರ್ಧಾರದ ವಿಜಯೋತ್ಸವ. ಸಾಧಿಸುವ ಛಲವಿದ್ದರೆ ಗ್ಲಾಮರ್ ಲೋಕದಿಂದ ಜಸ್ಟಿಸ್ ಲೋಕದವರೆಗೂ ಎಲ್ಲಿ ಬೇಕಾದರೂ ಗೆಲ್ಲಬಹುದು ಎಂಬುದಕ್ಕೆ ಇವರೇ ಸಾಕ್ಷಿ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories