ಡಾನ್ಸ್​ ಮಾಡಿ ಮಾಡಿ ಸೊಂಟ ಬಿದ್ದೋಗಿದೆ: ಮದುವೆ ಬೆನ್ನಲ್ಲೇ Rashmika Mandanna ವಿಡಿಯೋ ವೈರಲ್​!

Published : Mar 01, 2026, 06:58 PM IST

'ಪುಷ್ಪಾ' ಚಿತ್ರದ 'ಸಾಮಿ ಸಾಮಿ' ಹಾಡು ದಾಖಲೆ ಬರೆದಿತ್ತು. ಆದರೆ, ಈ ಹಾಡಿಗೆ ಅದೆಷ್ಟು ಬಾರಿ ಕುಣಿದಿದ್ದೇನೆಂದರೆ ಸೊಂಟ ಬಿದ್ದು ಹೋಗಿದೆ, ಇನ್ನು ಮುಂದೆ ಕುಣಿಯಲಾರೆ ಎಂದು ರಶ್ಮಿಕಾ ಹಿಂದೆ ಹೇಳಿದ್ದರು. ಇದೀಗ ಅವರ ಮದುವೆ ಸುದ್ದಿಯ ಹಿನ್ನೆಲೆಯಲ್ಲಿ ಈ ಹಳೆಯ ಹೇಳಿಕೆ ಮತ್ತೆ ವೈರಲ್ ಆಗಿದೆ.

PREV
16
ದಾಖಲೆ ಬರೆದ ರಶ್ಮಿಕಾ

ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಈಗ ಶ್ರೀಮತಿ ಆಗಿದ್ದಾರೆ. ಬಹು ವರ್ಷಗಳ ಗೆಳೆಯ ವಿಜಯ ದೇವರಕೊಂಡ ಅವರ ಸಂಗಾತಿಯಾಗಿದ್ದು ದಾಂಪತ್ಯ ಜೀವನ ಶುರುಮಾಡಿಕೊಂಡಿದ್ದಾರೆ. ಇವರಿಬ್ಬರ ಫೋಟೋ ಕ್ಲಿಕ್ಸ್​ನಲ್ಲಿ ಇದಾಗಲೇ ದಾಖಲೆ ಬರೆದಿರುವುದು ಗೊತ್ತೇ ಇದೆ. ಆದರೆ ಇದೇ ರೀತಿ, ಹಿಂದೆಯೂ ರಶ್ಮಿಕಾ ದಾಖಲೆ ಬರೆದಿದ್ದರು. ಅದು ಅವರ 'ಪುಷ್ಪಾ' (Pushpa) ಸಿನಿಮಾದ ಸೂಪರ್‌ ಹಿಟ್‌ ಹಾಡು 'ಸಾಮಿ ಸಾಮಿ'. ಹಾಡಿನ ಪೂರ್ಣ ವಿಡಿಯೋ ಯೂಟ್ಯೂಬ್‌ನಲ್ಲಿ 100 ಮಿಲಿಯನ್ ವೀಕ್ಷಣೆಯೊಂದಿಗೆ ದಾಖಲೆಯನ್ನು ಮಾಡಿತ್ತು.

26
ಬಹು ಭಾಷಾ ನಟಿ

ರಶ್ಮಿಕಾ ಅವರ ಮದುವೆಯ ಬೆನ್ನಲ್ಲೇ ಅವರು ಇದೇ ವಿಷಯವಾಗಿ ಮಾತನಾಡಿರುವುದು ಮತ್ತೆ ವೈರಲ್​ ಆಗ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇರುವವರು ಇವರು.

36
ಪುಷ್ಪಾ ಚಿತ್ರದ ಸಾಮಿ ಸಾಮಿ

'ಪುಷ್ಪಾ' (Pushpa) ಸಿನಿಮಾ ಅಂತೂ ಸೂಪರ್​ ಹಿಟ್​ ಆಯಿತು. ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಡಿಸೆಂಬರ್ 17, 2021 ರಂದು ಬಿಡುಗಡೆಯಾಗಿತ್ತು. ಈ ಚಿತ್ರದ ಸಾಮಿ ಸಾಮಿ ಹಾಡು ದಾಖಲೆ ಬರೆದಿತ್ತು. ಸಿನಿಮಾದ ಇತರ ಹಾಡುಗಳಿಗೂ ಬಹುತೇಕ ಅದೇ ರೇಂಜ್ ರೆಸ್ಪಾನ್ಸ್ ಸಿಕ್ಕಿತ್ತು. ಈ ಹಾಡು ಸಕತ್​ ಹಿಟ್​ ಆದ ಬಳಿಕ ಜಾಲತಾಣಗಳ ರೀಲ್ಸ್​ನಲ್ಲಿ ಇದರ ಹಾಡಿನ ರೀಲ್ಸ್​ಗಳೇ ತುಂಬಿ ಹೋಗಿದ್ದವು. ಚಿತ್ರ ತಾರೆಯರೂ ಸ್ಟೆಪ್​ ಹಾಕುವಷ್ಟರ ಮಟ್ಟಿಗೆ ಈ ಹಾಡು ಹಿಟ್​ ಆಯಿತು. ಖುದ್ದು ರಶ್ಮಿಕಾ ಮಂದಣ್ಣ ಅವರೇ ಹಲವು ಬಾರಿ ಹಾಡಿಗೆ ಡಾನ್ಸ್​ ಮಾಡಿದರು. ಅವರ ಅಭಿಮಾನಿಗಳೂ ಹೋದಲ್ಲಿ, ಬಂದಲ್ಲಿ ಈ ಹಾಡನ್ನೇ ಅವರಿಂದ ಕೇಳುತ್ತಿದ್ದರು.

46
ಇನ್ನು ಹೆಜ್ಜೆ ಹಾಕಲ್ಲ

ಆದರೆ ಆಗ ರಶ್ಮಿಕಾ ಮಂದಣ್ಣ ಹೇಳಿಕೆ ನೀಡಿದ್ದು, ಮತ್ತೀಗ ಮುನ್ನೆಲೆಗೆ ಬಂದಿದೆ. ಅದೇನೆಂದರೆ ಸಾಮಿ ಸಾಮಿ ಹಾಡಿಗೆ ಇನ್ನು ಮುಂದೆ ಹೆಜ್ಜೆ ಹಾಕುವುದಿಲ್ಲ ಎಂದಿದ್ದರು ನಟಿ. ಟ್ವಿಟ್ಟರ್‌ನಲ್ಲಿ ಅಭಿಮಾನಿಗಳಿಗಾಗಿ ಅವರು ನಡೆಸಿದ್ದ 'ಆಸ್ಕ್‌ ಮಿ ಎನಿಥಿಂಗ್‌' ಸೆಷನ್‌ನಲ್ಲಿ, ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಅವಕಾಶ ಕೊಟ್ಟಿದ್ದ ನಟಿ, ಅದರಲ್ಲಿ ಅಭಿಮಾನಿಯೊಬ್ಬರ ಮಾತಿಗೆ ಹೀಗೆ ಉತ್ತರ ಕೊಟ್ಟಿದ್ದರು.

56
ಸೊಂಟ ಬಿದ್ದು ಹೋಗಿದೆ

ರಶ್ಮಿಕಾ ಮಂದಣ್ಣ ಅವರೂ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ನಾನು ನಿಮ್ಮೊಂದಿಗೆ ಸಾಮಿ ಸಾಮಿ (Sami Sami) ಹಾಡಿಗೆ ಹೆಜ್ಜೆ ಹಾಕಬೇಕು ಎಂದಿದ್ದರು. ಅದಕ್ಕೆ ರಶ್ಮಿಕಾ, ಅದು ಸಾಧ್ಯವೇ ಇಲ್ಲ, ನಾನು ಇನ್ನುಮುಂದೆ ಈ ನೃತ್ಯ ಮಾಡಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ನೀಡಿರುವ ಅವರು, 'ನಾನು ಈಗಾಗಲೇ ಈ ಹಾಡಿಗೆ ಹಲವಾರು ಬಾರಿ ನೃತ್ಯ ಮಾಡಿಯಾಗಿದೆ, ಅಲ್ಲದೆ ಈ ಹಾಡಿಗೆ ನಾನು ಎಷ್ಟು ನೃತ್ಯ ಬಾರಿ ಮಾಡಿದ್ದೇನೆ ಎಂದರೆ ಈಗಲೇ ಸೊಂಟ ಬಿದ್ದು ಹೋಗಿದೆ. ವಯಸ್ಸಾದ ಮೇಲೆ ನನಗೆ ಬೆನ್ನು ನೋವು ಕಾಣಿಸಬಹುದು, ಅಷ್ಟು ಕುಣಿದಿದ್ದೇನೆ. ಅದಕ್ಕೆ ಇನ್ಮುಂದೆ ಜಪ್ಪಯ್ಯ ಎಂದರೂ ಇದಕ್ಕೆ ಡಾನ್ಸ್​ ಮಾಡಲ್ಲ' ಎಂದು ಚಟಾಕಿ ಹಾರಿಸಿದ್ದರು.

66
ಮದ್ವೆಯಾದ ಮೇಲೆ

ಮದುವೆಯಾದ ಮೇಲೆ ಸೊಂಟ ಬಿದ್ದು ಹೋದ್ರೆ ಕಷ್ಟನಪ್ಪ ಎಂದು ಆಗ ಅವರ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಇದೀಗ ನಟಿ ಮದುವೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಅದು ಮುನ್ನೆಲೆಗೆ ಬಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories