ದುಬೈಗೆ ಸ್ಥಳಾಂತರಗೊಂಡಿರುವ ನಟ ಅಜಿತ್ ದಾಳಿಗೂ ಕೆಲವೇ ಗಂಟೆ ಮುನ್ನ ಏರ್‌ಪೋರ್ಟ್‌ನಿಂದ ವಾಪಸ್

Published : Mar 01, 2026, 06:07 PM IST

ದುಬೈಗೆ ಸ್ಥಳಾಂತರಗೊಂಡಿರುವ ನಟ ಅಜಿತ್ ದಾಳಿಗೂ ಕೆಲವೇ ಗಂಟೆ ಮುನ್ನ ಏರ್‌ಪೋರ್ಟ್‌ನಿಂದ ವಾಪಸ್, ಸದ್ಯ ನಟ ಅಜಿತ್ ದುಬೈನಲ್ಲೇ ಉಳಿದುಕೊಂಡಿದ್ದಾರೆ. ನಟ ಅಜಿತ್ ಹೇಗಿದ್ದಾರೆ? ಉಳಿದುಕೊಂಡಿರುವ ಸ್ಥಳ ಸುರಕ್ಷಿತವೇ? 

PREV
15
ದುಬೈನಲ್ಲಿರುವ ನಟ ಅಜಿತ್

ನಟ ಅಜಿತ್ ಕುಮಾರ್ ತಮಿಳು ಸಿನಿಮಾ ಮೂಲಕ ದೇಶಾದ್ಯಂತ ಭಾರಿ ಅಭಿಮಾನಿಗಳ ಬಳಗ ಸೃಷ್ಟಿಸಿದ್ದಾರೆ. ಅಜಿತ್ ಈಗ ಸಿನಿಮಾಗಿಂತ ಹೆಚ್ಚು ತಮ್ಮ ಮೋಟಾರ್‌ಸ್ಪೂರ್ಟ್‍ ಕಡೆ ಹೆಚ್ಚಿನ ಗಮನ ಕೇಂದ್ರೀರಿಸಿದ್ದಾರೆ. ಈಗಾಗಲೇ ದುಬೈನಲ್ಲಿ ನಡೆದ ರೇಸಿಂಗ್ ಸ್ಪರ್ಧೆಯಲ್ಲೂ ಪಾಲ್ಗೊಂಡು ಎಲ್ಲರ ಹುಬ್ಬೆರಿಸಿದ್ದರು. ರೇಸಿಂಗ್‌ಗಾಗಿ ನಟ ಅಜಿತ್ ಭಾರತದಿಂದ ದುಬೈಗೆ ಸ್ಥಳಾಂತರಗೊಂಡಿದ್ದಾರೆ. ಇದೀಗ ದುಬೈ ಮೇಲೂ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಅಭಿಮಾನಿಗಳು ಆತಂಕಗೊಂಡಿದ್ದಾರೆ.

25
ಏರ್‌ಪೋರ್ಟ್‌ನಿಂದ ದುಬೈ ಮನೆಗೆ ವಾಪಾಸ್ಸಾದ ಅಜಿತ್

ಫೆಬ್ರವರಿ 28ರಂದು ಭಾರತಕ್ಕೆ ಮರಳಲು ದುಬೈ ವಿಮಾನ ನಿಲ್ದಾಣಕ್ಕೆ ಅಜಿತ್ ತೆರಳಿದ್ದರು. ಆದರೆ ಇರಾನ್ ನಡೆಸಿದ ವೈಮಾನಿಕ ದಾಳಿಯಿಂದ ಬಹುತೇಕ ವಿಮಾನಗಳು ರದ್ದಾಗಿತ್ತು. ಹೀಗಾಗಿ ಅಜಿತ್ ದುಬೈ ವಿಮಾನ ನಿಲ್ದಾಣದಿಂದ ಮರಳಿದ್ದರು. ಇದೀಗ ಅದೇ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ ನಡೆಸಿ ಸಾವು ನೋವು ಸಂಭವಿಸಿದೆ.

35
ದುಬೈನಲ್ಲಿ ಅಜಿತ್ ಸೇಫ್ ಇದ್ದಾರಾ?

ಅಜಿತ್ ದುಬೈನಲ್ಲಿರುವ ಮನೆಯಲ್ಲಿ ತಂಗಿದ್ದಾರೆ. ಸದ್ಯ ಅಜಿತ್ ಸೇಫ್ ಆಗಿದ್ದಾರೆ ಎಂದು ಅಜಿತ್ ಮ್ಯಾನೇಜರ್ ಹೇಳಿದ್ದಾರೆ. ಅಜಿತ್ ದುಬೈನಲ್ಲಿ ನೆಲೆಸದ್ದಾರೆ. ಆದರೆ ಕೆಲ ಕಾರ್ಯಕ್ರಮ, ಸಿನಿಮಾಗಾಗಿ ಭಾರತಕ್ಕೆ ಮರಳಲು ಸಜ್ಜಾಗಿದ್ದರು. ಆದರೆ ಅಷ್ಟರೊಳಗೆ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿತ್ತು. ಇರಾನ್ ಪ್ರತಿದಾಳಿಯಾಗಿ ಅರಬ್ ಎಮಿರೈಟ್ಸ್ ಮೇಲೆ ದಾಳಿ ಮಾಡಿತ್ತು. ಹೀಗಾಗಿ ವಿಮಾನ ಸಂಪರ್ಕಗಳು ಸ್ಥಗತಗೊಂಡಿತ್ತು. ಸುರಕ್ಷತೆ ಕಾರಣದಿಂದ ಅಜಿತ್ ಮನೆಯಲ್ಲೇ ಉಳಿದುಕೊಂಡಿದ್ದಾರೆ ಎಂದು ಮ್ಯಾನೇಜರ್ ಹೇಳಿದ್ದಾರೆ.

45
ರೇಸ್‌ಗಾಗಿ ದುಬೈಗೆ ಸ್ಥಳಾಂತರ

ಅಜಿತ್ ಕುಮಾರ್ ರೇಸ್‌ಗೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ.2025ರ ದುಬೈ 24ಹೆಚ್ ರೇಸ್‌ನಲ್ಲಿ 991 ಕೆಟಗರಿಯಲ್ಲಿ ನಟ ಅಜಿತ್ ಕುಮಾರ್ 3ನೇ ಸ್ಥಾನ ಪಡೆದಿದ್ದರು. ರೇಸಿಂಗ್ ವೇಳೆ ಅಜಿತ್ ಕಾರು ಅಪಘಾತಗೊಂಡ ಅಭಿಮಾನಿಗಳು ಆತಂಕ ಎದುರಿಸಿದ್ದರು. ರೇಸಿಂಗ್‌ಗಾಗಿ ನಟ ಅಜಿತ್ ಭಾರತದಿಂದ ದುಬೈಗೆ ಸ್ಥಳಾಂತರಗೊಂಡಿದ್ದಾರೆ.

55
ಸಿನಿಮಾ ಕೆಲಸ ಮಂದೂಡಿಕೆ

2025ರಲ್ಲಿ ನಟ ಅಜಿತ್ ಕುಮಾರ್ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಮೂಲಕ ಅಭಿಮಾನಿಗಳ ರಂಜಿಸಿದ್ದರು. ಇದಾದ ಬಳಿಕ ಅಜಿತ್ ರೇಸಿಂಗ್‌ನಲ್ಲಿ ಸಂಪೂರ್ಣ ಬ್ಯೂಸಿಯಾಗಿದ್ದರು. ಸದ್ಯ ಅಮರಿಕ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದೆ. ದಾಳಿ ಪ್ರತಿ ದಾಳಿಗಳಲ್ಲಿ ಹಲವು ಸಾವು ನೋವು ಸಂಭವಿಸಿದೆ. ಹೀಗಾಗಿ ನಟ ಅಜಿತ್ ಸುರಕ್ಷತಾ ದೃಷ್ಟಿಯಿಂದ ದುಬೈನಲ್ಲೇ ಉಳಿದುಕೊಳ್ಳುವಂತಾಗಿದೆ.

ಸಿನಿಮಾ ಕೆಲಸ ಮಂದೂಡಿಕೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories