ರಾಮ್ ಚರಣ್ ಪತ್ನಿ ಹಾಗೂ ಉದ್ಯಮಿ ಉಪಾಸನಾ ತಮ್ಮ ಪತಿಯ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸ್ಕ್ರೀನ್ ಮೇಲೆ ಚರಣ್ ಅವರನ್ನು ಆ ರೀತಿ ನೋಡಲು ಉಪಾಸನಾಗೆ ಆಗಲ್ವಂತೆ. ತಮ್ಮಿಬ್ಬರ ನಡುವಿನ ಹಲವು ಸೀಕ್ರೆಟ್‌ಗಳನ್ನು ಅವರು ಬಿಚ್ಚಿಟ್ಟಿದ್ದಾರೆ.
ಮೆಗಾ ಸೊಸೆ ಉಪಾಸನಾ ಈಗ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದಕ್ಕೂ ಮುನ್ನ ಕ್ಲಿನ್ ಕಾರಾ ಹುಟ್ಟಿದ್ದಳು. ಉಪಾಸನಾ ಒಂದು ಕಡೆ ಮಕ್ಕಳನ್ನು ನೋಡಿಕೊಳ್ಳುತ್ತಲೇ, ಮತ್ತೊಂದು ಕಡೆ ಬ್ಯುಸಿನೆಸ್ ಕೂಡ ನಿಭಾಯಿಸುತ್ತಿದ್ದಾರೆ. ಅಪೋಲೋ ಆಸ್ಪತ್ರೆಯ ಜವಾಬ್ದಾರಿಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಸೊಸೆಯಾಗಿ, ಪತ್ನಿಯಾಗಿ, ತಾಯಿಯಾಗಿ ಹಾಗೂ ಆಸ್ಪತ್ರೆಯ ಮುಖ್ಯಸ್ಥೆಯಾಗಿ ಎಲ್ಲವನ್ನೂ ಅವರು ಬ್ಯಾಲೆನ್ಸ್ ಮಾಡುತ್ತಿದ್ದಾರೆ.
24
ರಾಮ್ ಚರಣ್, ಉಪಾಸನಾ ಲವ್ ಸ್ಟೋರಿ
ರಾಮ್ ಚರಣ್ ಹಾಗೂ ಉಪಾಸನಾ ಪ್ರೀತಿಸಿ ಮದುವೆಯಾದವರು. ಇದು ಹಿರಿಯರು ನಿಶ್ಚಯಿಸಿದ ಮದುವೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಅದಕ್ಕೂ ಮುನ್ನವೇ ಇವರಿಬ್ಬರು ಪ್ರೀತಿಸುತ್ತಿದ್ದರು. ಇವರ ಲವ್ ಸ್ಟೋರಿ ಸೀಕ್ರೆಟ್ ಆಗಿಯೇ ನಡೆದಿತ್ತು. ಈ ವಿಚಾರಗಳನ್ನು ಅವರು ಗುಟ್ಟಾಗಿಯೇ ಇಟ್ಟಿದ್ದಾರೆ. ಈ ಬಗ್ಗೆ ಹಳೆಯ ಸಂದರ್ಶನವೊಂದರಲ್ಲಿ ಉಪಾಸನಾ ಮಾತನಾಡಿದ್ದರು. ರಾಮ್ ಚರಣ್ ಬಗ್ಗೆ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಅವರು ಹಂಚಿಕೊಂಡಿದ್ದರು. ತಮ್ಮಿಬ್ಬರ ಅಭಿರುಚಿಗಳು ತುಂಬಾ ಮ್ಯಾಚ್ ಆಗುತ್ತವೆ ಎಂದು ಅವರು ಹೇಳಿದ್ದರು.
34
ನನ್ನನ್ನು ರಾಣಿಯಂತೆ ನೋಡ್ಕೊಳ್ತಾರೆ
ತಾವಿಬ್ಬರು ಮೊದಲ ಬಾರಿ ಭೇಟಿಯಾದ ಜಾಗದ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದಿದ್ದ ಉಪಾಸನಾ, ಅದೊಂದು ಫನ್ನಿ ಸ್ಟೋರಿ ಎಂದಿದ್ದರು. ಆ ವಿಚಾರ ಗೊತ್ತಾದರೆ ಫ್ಯಾಮಿಲಿ ಫುಲ್ ಶಾಕ್ ಆಗುತ್ತೆ ಎಂದು ಅವರು ಹೇಳಿದ್ದರು. ಇದೇ ವೇಳೆ ರಾಮ್ ಚರಣ್ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚರಣ್ ವ್ಯಕ್ತಿತ್ವ ತುಂಬಾ ದೊಡ್ಡದು, ಅವರನ್ನು ಮದುವೆಯಾಗಿದ್ದು ನನ್ನ ಜೀವನದ ಅತ್ಯಂತ ಖುಷಿಯ ವಿಚಾರ ಎಂದಿದ್ದರು. ಚರಣ್ ನನ್ನನ್ನು ಯಾವಾಗಲೂ ಖುಷಿಯಾಗಿ ಇಡುತ್ತಾರೆ, ರಾಣಿಯಂತೆ ನೋಡಿಕೊಳ್ಳುತ್ತಾರೆ ಎಂದು ಉಪಾಸನಾ ಹೇಳಿದ್ದರು.
ಉಪಾಸನಾ ಅವರು ಚರಣ್ ನಟಿಸಿದ ಎಲ್ಲಾ ಸಿನಿಮಾಗಳನ್ನು ನೋಡುತ್ತಾರಂತೆ. ಸ್ಕ್ರೀನ್ ಮೇಲೆ ಚರಣ್ ನೋಡಿದಾಗ ಅವರಿಗೆ ತುಂಬಾ ಹೆಮ್ಮೆ ಆಗುತ್ತಂತೆ. ಯಾರಾದರೂ ಅವರನ್ನು ಹೊಗಳಿದರೆ ಖುಷಿಯಿಂದ ಕಣ್ಣಲ್ಲಿ ನೀರು ಬರುತ್ತಂತೆ. ಆದರೆ, ಸ್ಕ್ರೀನ್ ಮೇಲೆ ಚರಣ್ ರಕ್ತದ ಮಡುವಿನಲ್ಲಿ, ಗಾಯಗೊಂಡಿರುವುದನ್ನು ನೋಡಲು ಅವರಿಗೆ ಆಗಲ್ವಂತೆ. ಸಿನಿಮಾ ಅಂತ ಗೊತ್ತಿದ್ದರೂ ಅದನ್ನು ಸಹಿಸಿಕೊಳ್ಳಲು ಆಗಲ್ಲ ಎಂದು ಉಪಾಸನಾ ಹೇಳಿದ್ದಾರೆ. ಅವರು ಸುಮಾರು ಏಳು ವರ್ಷಗಳ ಹಿಂದೆ 'ಈನಾಡು' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಹಂಚಿಕೊಂಡಿದ್ದರು. ಇತ್ತೀಚೆಗೆ 'ಪೆದ್ದಿ' ಸಿನಿಮಾದ ಮೂಲಕ ಸಕ್ಸಸ್ ಕಂಡಿರುವ ರಾಮ್ ಚರಣ್, ಸದ್ಯ ಸುಕುಮಾರ್ ಜೊತೆಗಿನ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಇದು ಶುರುವಾಗಲಿದೆಯಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.