ಬೆಂಗಳೂರು: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಅವರ ಕುರಿತಂತೆ ಬಹುಭಾಷಾ ನಟ ರಾಮ್ ಚರಣ್ ಆಡಿರುವ ಒಂದು ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೇ ಕ್ಷಮೆಯಾಚಿಸಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ ನೋಡೋಣ ಬನ್ನಿ.
ಖ್ಯಾತ ಟಾಲಿವುಡ್ ನಟ ರಾಮ್ ಚರಣ್ ಭೂಪಾಲ್‌ನಲ್ಲಿ ನಿನ್ನೆ ಪೆದ್ದಿ ಸಿನಿಮಾದ ಗ್ರ್ಯಾಂಡ್ ಮ್ಯೂಸಿಕ್ ಲಾಂಚ್ ಮಾಡಿದರು. ಈ ಸಂದರ್ಭದಲ್ಲಿ ಎ.ಆರ್ ರೆಹಮಾನ್, ಜಾಹ್ನವಿ ಕಪೂರ್ ಹಾಗೂ ಸಿನಿಮಾ ತಂಡ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ರಾಮ್ ಚರಣ್ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
26
ಕ್ರಿಕೆಟಿಗರ ಬಗ್ಗೆ ತಮ್ಮದೇ ವ್ಯಾಖ್ಯಾನ ಮಾಡಿದ ರಾಮ್ ಚರಣ್
ಹೌದು, ಪೆದ್ದಿ ಸಿನಿಮಾದ ಮ್ಯೂಸಿಕ್ ಲಾಂಚ್ ವೇಳೆಯಲ್ಲಿ ನಿರೂಪಕರು, ಭಾರತೀಯ ಕ್ರಿಕೆಟರ್ಸ್ ಬಗ್ಗೆ ನಿಮ್ಮದೇ ರೀತಿಯಲ್ಲಿ ಬಣ್ಣಿಸಿ ಎಂದು ಕೇಳಿಕೊಂಡರು. ಒಬ್ಬೊಬ್ಬ ಕ್ರಿಕೆಟಿಗರ ಬಗ್ಗೆ ರಾಮ್ ಚರಣ್ ತನ್ನದೇ ಆದ ವ್ಯಾಖ್ಯಾನ ಮಾಡಿದರು.
36
ಕೊಹ್ಲಿ ಒಂದು ರೀತಿ ಬೆಂಕಿ ಎಂದ ಪೆದ್ದಿ ನಟ
ಸಚಿನ್ ತೆಂಡೂಲ್ಕರ್ ಬಗ್ಗೆ ಕೇಳಿದಾಗ ಅವರೊಬ್ಬ ಲೆಜೆಂಡ್ ಹಾಗೂ ದೀರ್ಘಕಾಲ ಆಡಿದ ಅತಿಹೆಚ್ಚು ಬಾರಿಸಿದ ಸರದಾರ ಎಂದು ಬಣ್ಣಿಸಿದರು. ಇನ್ನು ಧೋನಿ ತಾಳ್ಮೆ ಹಾಗೂ ಶಾಂತತೆಯ ಪ್ರತೀಕ ಎಂದರು. ಇನ್ನು ರೋಹಿತ್ ಶರ್ಮಾ ಪ್ರತಿಯೊಬ್ಬರ ಪ್ರೀತಿಯ ವ್ಯಕ್ತಿ ಎಂದು ಅಭಿಪ್ರಾಯಪಟ್ಟರೇ, ಕೊಹ್ಲಿ ಒಂದು ರೀತಿಯ ಬೆಂಕಿ ಎಂದು ಬಣ್ಣಿಸಿದರು.
ಇದೇ ವೇಳೆ ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಕೇಳಿದಾಗ, ರಾಮ್ ಚರಣ್, ತಾವು ಅವರ ಅತಿದೊಡ್ಡ ಅಭಿಮಾನಿ ಎಂದು ಹೇಳಿದರು. ಆದರೆ ಅವರನ್ನು ಬಣ್ಣಿಸುವ ವೇಳೆ ಕ್ರಿಕೆಟ್ ಹಾಗೂ ಫುಟ್ಬಾಲ್ ಮಿಕ್ಸ್ ಮಾಡಿದರು. ಬುಮ್ರಾ ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ. ನನಗೆ ಫುಟ್ಬಾಲ್ ತುಂಬಾನೆ ಇಷ್ಟ. ನೀವು ಇದನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೀರ. ಲವ್ ಯೂ ಸರ್ ಎಂದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
56
ಕ್ರಿಕೆಟ್ ಜತೆ ಫುಟ್ಬಾಲ್ ಮಿಕ್ಸ್ ಮಾಡಿದ ರಾಮ್ ಚರಣ್
ರಾಮ್ ಚರಣ್, ಬುಮ್ರಾ ಅವರನ್ನು ಸುನಿಲ್ ಚೆಟ್ರಿ ಅಂದುಕೊಂಡು ಹೀಗೆ ಹೇಳಿರಬಹುದು ಎನ್ನುವ ಚರ್ಚೆ ಕೂಡಾ ನಡೆಯುತ್ತಿದೆ. ಆದರೆ ತಾವು ಮಾತನಾಡಿರುವುದು ಬುಮ್ರಾಗೆ ಅಗೌರವ ಸೂಚಿಸಿದಂತಾಗುತ್ತದೆ ಎನ್ನುವುದು ಗಮನಕ್ಕೆ ಬರುತ್ತಿದ್ದಂತೆಯೇ ರಾಮ್ ಚರಣ್, ತಮ್ಮ ಅಧಿಕೃತ ಎಕ್ಸ್(ಟ್ವಿಟರ್) ಖಾತೆಯಲ್ಲಿ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.
66
ಬಹಿರಂಗವಾಗಿ ಬುಮ್ರಾ ಕ್ಷಮೆ ಕೋರಿದ ರಾಮ್ ಚರಣ್
ನಾನು ಕೆಲವೊಮ್ಮೆ ಹೆಸರುಗಳನ್ನು ಮರೆತುಬಿಡುತ್ತೇನೆ. ಇದಕ್ಕಾಗಿ ಜಸ್ಪ್ರೀತ್ ಬುಮ್ರಾ ಅವರಲ್ಲಿ ಕ್ಷಮೆ ಕೇಳುತ್ತೇನೆ. ಅಪಾರ ಜನಸಮೂಹದ ನಡುವೆ ಎಕ್ಸೈಟ್‌ಮೆಂಟ್‌ನಲ್ಲಿ ನಡೆದ ಮನುಷ್ಯ ಸಹಜ ತಪ್ಪು. ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ ಹಾಗೂ ನಿಮ್ಮ ಆಟದ ದೊಡ್ಡ ಅಭಿಮಾನಿ. ನೀವು ಎದುರಾಳಿ ದೇಶದ ಆಟಗಾರರ ವಿಕೆಟ್ ಕಬಳಿಸುವ ಮೂಲಕ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತೆ ಮಾಡುತ್ತಿದ್ದೀರ ಎಂದು ಪೆದ್ದಿ ನಾಯಕ ನಟ ರಾಮ್ ಚರಣ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.