ಪ್ರೇಮದ ಊರಲಿ ಪಾರ್ಟ್-2 ಬರುತ್ತಾ? ನಿರ್ದೇಶಕ ಮನೋಜ್ ಕುಮಾರ್ ನಿರ್ಧಾರಕ್ಕೆ ಅಭಿಮಾನಿಗಳ ಸೆಲ್ಯೂಟ್!

Published : Nov 02, 2026, 01:16 PM IST

ಕೇವಲ 2 ಕೋಟಿ ಬಜೆಟ್‌ನಲ್ಲಿ ತಯಾರಾಗಿ ಬರೋಬ್ಬರಿ 200 ಕೋಟಿ ಕ್ಲಬ್ ಸೇರಲು ಸಜ್ಜಾಗಿರುವ ಸ್ಯಾಂಡಲ್‌ವುಡ್‌ನ ಅಚ್ಚರಿಯ ಹಿಟ್ 'ಪ್ರೇಮದ ಊರಲಿ' ಚಿತ್ರಕ್ಕೆ ಪಾರ್ಟ್ 2 ಬರುತ್ತಾ? ಅಭಿಮಾನಿಗಳ ನಿರೀಕ್ಷೆಗೆ ನಿರ್ದೇಶಕ ಮನೋಜ್ ಕುಮಾರ್ ಶಾಕಿಂಗ್ ಹಾಗೂ ನೇರವಾದ ಉತ್ತರ ನೀಡಿದ್ದಾರೆ.

PREV
15
ಪ್ರೇಮದ ಊರಲಿ’ ಪಾರ್ಟ್-2 ಬರುತ್ತಾ?

ಕನ್ನಡ ಚಿತ್ರರಂಗದಲ್ಲಿ 'ಕೆಜಿಎಫ್, ಕಾಂತಾರ'ದ ಬಳಿಕ ಮೌತ್ ಪಬ್ಲಿಸಿಟಿಯಿಂದಲೇ ಇಡೀ ದೇಶದ ಗಮನ ಸೆಳೆದ ಮತ್ತೊಂದು ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರವೆಂದರೆ ಅದು ‘ಪ್ರೇಮದ ಊರಲಿ’. ಯಾವುದೇ ಬಿಲ್ಡಪ್, ಸ್ಟಾರ್ ಕಾಸ್ಟಿಂಗ್ ಅಥವಾ ಭರ್ಜರಿ ಪ್ರಚಾರವಿಲ್ಲದೆ, ಶುದ್ಧ ಕಥೆಯ ಬಲದಿಂದಲೇ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ, ಭಾರತೀಯ ಚಿತ್ರರಂಗವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಚಿತ್ರ ಬ್ಲಾಕ್‌ಬಸ್ಟರ್ ಆಗುತ್ತಿದ್ದಂತೆ ಎಲ್ಲೆಡೆ ಶುರುವಾಗಿದ್ದು ಒಂದೇ ಚರ್ಚೆ— ‘ಪ್ರೇಮದ ಊರಲಿ’ ಪಾರ್ಟ್-2 ಬರುತ್ತಾ? ಎಂದು.

25
ಕೇವಲ 2 ಕೋಟಿ ಬಜೆಟ್, 200 ಕೋಟಿಯತ್ತ ನಾಗಾಲೋಟ!

ಹೊಸಬರೇ ಸೇರಿಕೊಂಡು ಕೇವಲ 2 ಕೋಟಿ ರೂ. ಅಲ್ಪ ಬಜೆಟ್‌ನಲ್ಲಿ ನಿರ್ಮಿಸಿದ ಈ ಸಿನಿಮಾ ಈಗಾಗಲೇ ಬರೋಬ್ಬರಿ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರದ ಆಡಿಯೋ ಹಕ್ಕುಗಳೇ 1 ಕೋಟಿಗೆ ಬಿಕರಿಯಾಗಿದ್ದು, ಒಟಿಟಿ (OTT) ಹಕ್ಕುಗಳಿಗೆ ಭಾರೀ ಬೇಡಿಕೆ ಬಂದಿದೆ. ಕರ್ನಾಟಕದಲ್ಲಿ ಗೆದ್ದು, ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲೂ ರಿಲೀಸ್ ಆಗಿ ಧೂಳೆಬ್ಬಿಸಿರುವ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವುದು ಕಮರ್ಷಿಯಲ್ ದೃಷ್ಟಿಯಿಂದ ಅತ್ಯಂತ ಲಾಭದಾಯಕ. ಆದರೆ, ನಿರ್ದೇಶಕ ಮನೋಜ್ ಕುಮಾರ್ ಅವರ ಯೋಚನೆಯೇ ಬೇರೆಯಾಗಿದೆ.

35
ಪ್ರೇಮದ ಊರಲಿ ಪಾರ್ಟ್ 2 ಬರುತ್ತಾ? ಮನೋಜ್ ನೇರ ಉತ್ತರ ‘ಇಲ್ಲ’!

ಸಾಮಾನ್ಯವಾಗಿ ಒಂದು ಸಿನಿಮಾ ಹಿಟ್ ಆದರೆ ಸಾಕು, ನಿರ್ಮಾಪಕರು-ನಿರ್ದೇಶಕರು ತಕ್ಷಣವೇ 'ಪಾರ್ಟ್-2' ಘೋಷಣೆ ಮಾಡಿಬಿಡುತ್ತಾರೆ. ಆದರೆ, ಮನೋಜ್ ಕುಮಾರ್ ಈ ಕಮರ್ಷಿಯಲ್ ಬಲೆಗೆ ಬೀಳಲು ಸಿದ್ಧರಿಲ್ಲ. "ಪ್ರೇಮದ ಊರಲಿ ಚಿತ್ರಕ್ಕೆ ಪಾರ್ಟ್ 2 ಖಂಡಿತಾ ಬರುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಕೆಲವು ಕಥೆಗಳು ಅಲ್ಲಿಗೇ ಮುಕ್ತಾಯವಾಗಬೇಕು’ ಎಂದು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

45
ಪ್ರೇಕ್ಷಕರಿಗೆ ಸಿಕ್ಕ ಆ ಸುಂದರ ಅನುಭವ ಹಾಗೆಯೇ ಉಳಿಯಬೇಕು

ಈ ಬಗ್ಗೆ ಮುಂದುವರೆದು ಮಾತನಾಡಿದ ಅವರು, 'ಈಗಾಗಲೇ ಯಶಸ್ವಿಯಾಗಿರುವ ಪ್ರೇಮದ ಊರಲಿ ಕಥೆಯನ್ನು ಎಳೆದಾಡಿ ಸೀಕ್ವೆಲ್ ಹೆಸರಿನಲ್ಲಿ ಹಣ ಮಾಡಲು ಹೋದರೆ ಮೊದಲ ಭಾಗದ ಆತ್ಮ ಮತ್ತು ಮುಗ್ಧತೆ ನಾಶವಾಗಿಬಿಡುತ್ತದೆ. ಈಗಾಗಲೇ ಸಿನಿಮಾದಿಂದ ಪ್ರೇಕ್ಷಕರಿಗೆ ಸಿಕ್ಕ ಆ ಸುಂದರ ಅನುಭವ ಹಾಗೆಯೇ ಉಳಿಯಬೇಕು. ಹಣ ಮಾಡುವುದಕ್ಕಾಗಿಯೇ ಕಥೆಯನ್ನು ಮುಂದುವರಿಸುವ ಯಾವುದೇ ಉದ್ದೇಶ ನನಗಿಲ್ಲ' ಎಂದು ಮನೋಜ್ ಖಡಕ್ ಆಗಿ ಹೇಳಿದ್ದಾರೆ.

55
ಜನರ ಹೃದಯ ಗೆದ್ದ ಆ ಮುಗ್ಧತೆ:

ಇಬ್ಬರು ನಾಯಕಿಯರಿದ್ದರೂ ಎಲ್ಲಿಯೂ ತುಸು ಅಶ್ಲೀಲತೆಯಿಲ್ಲದ ಶುದ್ಧ ಗ್ರಾಮೀಣ ಉಡುಗೆ-ತೊಡುಗೆ, ಹಳ್ಳಿ ಮಕ್ಕಳ ಶಿಕ್ಷಣದ ಸವಾಲುಗಳು, ಪರಿಸರ ಕಾಳಜಿ, ಹಳ್ಳಿಯ ಸಣ್ಣ ಪುಟ್ಟ ರಾಜಕೀಯ ಮತ್ತು ಗಾಳಿ ಸುದ್ದಿಗಳಿಂದಾಗುವ ದುರಂತಗಳು ಹಾಗೂ ಭಾವನಾತ್ಮಕ ಅಪ್ಪ-ಮಗನ ಬಾಂಧವ್ಯವೇ ಈ ಚಿತ್ರದ ಅಸಲಿ ಜೀವಾಳ. ಕೇವಲ ಲಾಭಕ್ಕಾಗಿ ಸೀಕ್ವೆಲ್ ಮಾಡದೆ, ಕಥೆಯ ನೈತಿಕತೆಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ ನಿರ್ದೇಶಕ ಮನೋಜ್ ಕುಮಾರ್ ಅವರ ನಿಲುವಿಗೆ ಸಿನಿ ರಸಿಕರು ಹಾಗೂ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories