ಗೂಬೆ ಕೂರಿಸಿದವರಿಗೆ ತಕ್ಕ ಉತ್ತರ: ವೀಕ್‌ಡೇಸ್‌ನಲ್ಲೂ ‘ಪ್ರೇಮದ ಊರಲಿ’ 5 ಶೋ ಹೌಸ್‌ಫುಲ್!

Sathish Kumar KH   | Kannada Prabha
Published : Oct 08, 2026, 10:46 AM IST

ಬೆಂಗಳೂರಿನ ಅತಿದೊಡ್ಡ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ‘ಪ್ರಸನ್ನ’ ಥಿಯೇಟರ್‌ನಲ್ಲಿ 'ಪ್ರೇಮದ ಊರಲಿ' ಹೊಸಬರ ಸಿನಿಮಾ ಕಳೆದ ಏಳೆಂಟು ದಿನಗಳಿಂದ ದಿನದ 5 ಶೋಗಳು ಕೂಡ ಹೌಸ್‌ಫುಲ್ ಪ್ರದರ್ಶನವಾಗುತ್ತಿದೆ. ಟಿಕೆಟ್ ಇಲ್ಲದೇ ಜನರು ಮನೆಗಳಿಗೆ ವಾಪಸ್ ಹೋಗುತ್ತಿದ್ದಾರೆ.

PREV
16
ಚಿತ್ರರಂಗದ ಆರೋಪಕ್ಕೆ ಫುಲ್‌ಸ್ಟಾಪ್ ಇಟ್ಟ ಜನ

ಬೆಂಗಳೂರಿನ ಅತಿದೊಡ್ಡ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಒಂದಾದ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ 'ಪ್ರೇಮದ ಊರಲಿ' ಹೊಸಬರ ಸಿನಿಮಾ ಕಳೆದ ಏಳೆಂಟು ದಿನಗಳಿಂದ ದಿನದ 5 ಶೋಗಳು ಕೂಡ ಹೌಸ್‌ಫುಲ್ ಪ್ರದರ್ಶನವಾಗುತ್ತಿದೆ. ಟಿಕೆಟ್ ಇಲ್ಲದೇ ಜನರು ಮನೆಗಳಿಗೆ ವಾಪಸ್ ಹೋಗುತ್ತಿದ್ದಾರೆ.

ಕಳೆದ ಎರಡ್ಮೂರು ವರ್ಷಗಳಿಂದ ನೂರಾರು ಕನ್ನಡ ಸಿನಿಮಾಗಳು ಬಿಡುಗಡೆಯಾದರೂ ಯಶಸ್ಸು ಕಂಡಿದ್ದು ಮಾತ್ರ ಬೆರಳೆಣಿಕೆ ಚಿತ್ರಗಳು ಮಾತ್ರ. ಮಲೆಯಾಳಂ, ತಮಿಳು, ತೆಲುಗು ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಂಡು ಕನ್ನಡಿಗರ ಹಣವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ನಾಯಕರು, ನಾಯಕಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ಕನ್ನಡ ಸಿನಿಮಾಗಳಿಗೆ ಜನರು ಬರುತ್ತಿಲ್ಲ, ಕನ್ನಡ ಸಿನಿಮಾಗಳನ್ನು ಜನರು ನೋಡುವುದಿಲ್ಲ ಎಂಬ ಆರೋಪಗಳನ್ನು ಮಾಡುತ್ತಿದ್ದರು.

26
ಸೈಕಲ್‌ನಲ್ಲಿ ಪ್ರಚಾರ

ಆದರೆ, "ಪ್ರೇಮದ ಊರಲಿ" ಸಿನಿಮಾದ ಕನ್ನಡ ಚಿತ್ರರಂಗದವರು ಜನರ ಮೇಲೆ ಮಾಡುತ್ತಿದ್ದ ಎಲ್ಲ ಆರೋಪಗಳನ್ನು ಸಂಪೂರ್ಣ ಸುಳ್ಳಾಗಿಸಿದೆ. ಪ್ರೇಮದ ಊರಲಿ ಸಿನಿಮಾ ಸೆ.25ಕ್ಕೆ ಬಿಡುಗಡೆ ಆಗಿದ್ದು, ಆರಂಭದಲ್ಲಿ ಸೈಕಲ್ ಹೊಡೆಯುತ್ತಿತ್ತು. ಅಷ್ಟಕ್ಕೂ ಸಿನಿಮಾ ಹೀರೋ, ಹೀರೋಯಿನ್‌ಗಳೆಲ್ಲರೂ ಬೀದಿ ಬೀದಿಗಳಲ್ಲಿ ಸೈಕಲ್‌ನಲ್ಲಿ ಪೋಸ್ಟರ್ ಅನ್ನು ಹಿಡಿದು ಪ್ರಚಾರ ಮಾಡಿದ್ದರು. ಸಿನಿಮಾ ನೋಡಲು ಬನ್ನಿ ಎಂದು ಜನರನ್ನು ಆಹ್ವಾನ ಮಾಡುತ್ತಿದ್ದರು. ಆದರೆ, ಜನರು ನೀವು ಸಿನಿಮಾಗೆ ಆಹ್ವಾನ ಮಾಡುವುದೇ ಬೇಡ, ನಾವೇ ಹೌಸ್‌ಫುಲ್ ಮಾಡುತ್ತೇವೆ ಎಂಬಂತೆ ಬಹುತೇಕ ಶೋಗಳು ಹೌಸ್‌ಫುಲ್ ಆಗುವಂತೆ ಬರುತ್ತಿದ್ದಾರೆ.

36
ಪ್ರಸನ್ನ ಥಿಯೇಟರ್ ಹೌಸ್‌ಫುಲ್

ಬೆಂಗಳೂರಿನಲ್ಲಿ ಹಾಲಿ ಅತಿದೊಡ್ಡ ಚಿತ್ರಮಂದಿರಗಳಲ್ಲಿ (ಸಿಂಗಲ್ ಸ್ಕ್ರೀನ್) ಒಂದಾದ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ ಕಳೆದ ಏಳೆಂಟು ದಿನಗಳಿಂದ 'ಪ್ರೇಮದ ಊರಲಿ' ಹೌಸ್‌ಫುಲ್ ಪ್ರದರ್ಶನ ಆಗುತ್ತಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್ ಶೇ.70ಕ್ಕಿಂತ ಹೆಚ್ಚು ಆಗುತ್ತಿದೆ. ಉಳಿದಂತೆ ಜನರು ಬಂದು ಸರತಿ ಸಾಲಿನಲ್ಲಿ ನಿಂತುಕೊಂಡರೂ ಕೆಲವರಿಗಷ್ಟೇ ಟಿಕೆಟ್ ಸಿಗುತ್ತದೆ. ಉಳಿದವರು ಟಿಕೆಟ್ ಸಿಗದೇ ವಾಪಸ್ ಹೋಗುತ್ತಿದ್ದಾರೆ. ಇನ್ನು ದಿನದಲ್ಲಿ ನಡೆಯುವ ಎಲ್ಲ ಶೋಗಳು ಕೂಡ ಹೌಸ್‌ಫುಲ್ ಪ್ರದರ್ಶನ ಆಗುತ್ತಿದೆ. ಕಿಕ್ಕಿರಿದು ಜನರು ತುಂಬಿದ್ದಾರೆ.

46
10 ಕೋಟಿ ಗಳಿಕೆ ದಾಖಲೆ:

ಕನ್ನಡದಲ್ಲಿ ‘ಪ್ರೇಮದ ಊರಲಿ’ ಪ್ರೇಕ್ಷಕರ ಮುಂದೆ ಬಂದು ಇಂದಿಗೆ (ಅ.7) 12 ದಿನಗಳಾಗುತ್ತಿವೆ. ಎರಡನೇ ವಾರಕ್ಕೆ 500ಕ್ಕೂ ಹೆಚ್ಚು ಶೋಗಳು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿವೆ. ಮೊದಲ ಎರಡ್ಮೂರು ದಿನಗಳಲ್ಲಿ ಕೇವಲ ಲಕ್ಷ ಗಳಿಸುವುದಕ್ಕೆ ಒದ್ದಾಡುತ್ತಿದ್ದ ಸಿನಿಮಾ ಇದೀಗ ಕೋಟಿ, ಕೋಟಿ ಗಳಿಕೆ ಮಾಡುತ್ತಿದೆ. 12ನೇ ದಿನಕ್ಕೆ ₹10 ಕೋಟಿ ಹಣವನ್ನು ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಸಿನಿಮಾ ನೀರಸವಾಗಿ ಸಾಗುತ್ತಿದ್ದ ಸಿನಿಮಾ ನಂತರ ಬಾಯಿಂದ ಬಾಯಿಗೆ ಪ್ರಚಾರವಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಅ.2ರ ಗಾಂಧಿ ಜಯಂತಿ ರಜಾ ದಿನದಂದು ಈ ಸಿನಿಮಾ ಬರೋಬ್ಬರಿ ₹3.46 ಕೋಟಿ ಗಳಿಕೆ ಮಾಡಿದೆ.

56
ಪ್ರೇಮದ ಕಥಾಹಂದರದಲ್ಲಿ ವಿವಿಧ ಕವಲುಗಳು

ಒಂದೊಳ್ಳೆ ಕಥೆಯನ್ನು ಹೊಂದಿರುವ ಸಿನಿಮಾವನ್ನು ಜನರು ಎಂದಿಗೂ ತಿರಸ್ಕಾರ ಮಾಡುವುದಿಲ್ಲ ಎಂಬುದಕ್ಕೆ 'ಪ್ರೇಮದ ಊರಲಿ' ಸಿನಿಮಾ ಕೂಡ ಸಾಕ್ಷಿಯಾಗಿದೆ. ರಂಗಾಯಣ ರಘು ಹೊರತುಪಡಿಸಿ ಶ್ರೀ ರಾಮ್ (Shree Raam), ರಮಿಕಾ (Ramika), ತಪಸ್ವಿನಿ ಪುಣಚ್ಚ ಎಲ್ಲರೂ ಹೊಸಬರೇ ಸೇರಿಕೊಂಡು ಮಾಡಿದ್ದಾರೆ. ಪ್ರೇಮದ ಕಥಾಹಂದರ, ರೈತರಿಗೆ ಹೆಣ್ಣು ಸಿಗುವುದಿಲ್ಲ, ಮೊದಲ ಪ್ರೇಮದಲ್ಲಿ ಮೋಸ, ಮದುವೆಗೆ ಡಿಗ್ರಿ ಮುಗಿಸಿದ ಹೆಣ್ಣು ಹುಡುಕುವುದು, ಪ್ರೀತಿ ಎಂದರೆ ದೇಹವನ್ನೇ ಅರ್ಪಿಸುವುದಲ್ಲ, ಅಪ್ಪನ ಪ್ರೀತಿ ಹೀಗೆ ಹಲವು ಅಂಶಗಳನ್ನು ಸಿನಿಮಾ ಒಳಗೊಂಡಿದ್ದು, ಪ್ರೇಕ್ಷಕರನ್ನು ಆಹ್ವಾನಿಸುತ್ತಿದೆ.

66
ದೊಡ್ಡ ನಾಯಕರ ಸಿನಿಮಾಗಳೂ ಫೇಲ್

ಈ ಹಿಂದೆ 'ಸು ಫ್ರಂ ಸೋ' ಸಿನಿಮಾ ಕೂಡ ಜನರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ಇದೀಗ ಪ್ರೇಮದ ಊರಲಿ ಕೂಡ ಹಾಗೆಯೇ ಯಶಸ್ಸಿನ ಹಾದಿಗೆ ಮರಳಿದೆ. ಇನ್ನು ಅದ್ಧೂರಿ ಪ್ರಚಾರವನ್ನು ಮಾಡಿದರೂ ಕತೆ ಚೆನ್ನಾಗಿಲ್ಲ ಅಥವಾ ಸಿನಿಮಾವನ್ನು ಜನರ ಮುಂದಿಡುವ ಪ್ರಯತ್ನದಲ್ಲಿ ವಿಫಲವಾದರೆ ಜನರು ಸಿನಿಮಾ ವೀಕ್ಷಣೆಗೆ ಬರುವುದಿಲ್ಲ. ತಮ್ಮ ನಾಯಕರು ಎಂಬ ಮಾತ್ರಕ್ಕೆ ಅವರ ಅಭಿಮಾನಿಗಳಷ್ಟೇ ಚಿತ್ರಮಂದಿರಕ್ಕೆ ಹೋಗುತ್ತಾರೆ ಹೊರತು ಕುಟುಂಬ ಸಮೇತರಾಗಿ ಸಿನಿಮಾ ಥಿಯೇಟರ್‌ಗೆ ಹೋಗುವುದಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories