ನಟ ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುವ ಹೊತ್ತಲ್ಲಿ, ಅವರ ವೈಯಕ್ತಿಕ ಜೀವನದ ಚರ್ಚೆ ಮುನ್ನೆಲೆಗೆ ಬಂದಿದೆ. ಅವರು ತಮ್ಮ ಮೂರು ಮದುವೆಗಳ ಹಿಂದಿನ ಕಾರಣ ಮತ್ತು ಹೊಂದಾಣಿಕೆಯ ಕೊರತೆಯಿಂದ ಸಂಬಂಧಗಳು ಮುರಿದುಬಿದ್ದ ಬಗ್ಗೆ ಮಾತನಾಡಿದ್ದು ವಿಡಿಯೋ ವೈರಲ್ ಆಗಿದೆ.
ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿ... ಇಷ್ಟೆಲ್ಲಾ ಬಿರುದುಗಳೊಂದಿಗೆ ತೆಲುಗು ಚಿತ್ರರಂಗವನ್ನು ಆಳುತ್ತಿರುವವರು ಪವನ್ ಕಲ್ಯಾಣ (Pawan Kalyan) ಉಸ್ತಾದ್ ಭಗತ್ ಸಿಂಗ್ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ 19 ರಂದು ಅದು ಬಿಡುಗಡೆಯಾಗಲಿದೆ. ಆದರೆ ಇದೇ ವೇಳೆ, ಅವರ ಜೀವನದ ಏಳುಬೀಳುಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅದು ಕೂಡ ಅವರ ವೈವಾಹಿಕ ಜೀವನದ ಕುರಿತು.
27
ಏಳುಬೀಳು
ಸಿನಿಮಾ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡು, ಜನಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಪವನ್ ಅವರು ಸದಾ ಗಾಸಿಪ್ ಪ್ರಿಯರ ಬಾಯಲ್ಲಿ ಚರ್ಚೆಯ ವಸ್ತುವಾಗಿಯೇ ಇರುವವರು. ಅದರಲ್ಲಿಯೂ ಇವರು ನಟನೆ, ರಾಜಕೀಯಕ್ಕಿಂತಲೂ ಹೆಚ್ಚಾಗಿ ಹೆಚ್ಚು ಪ್ರಚಲಿತವಾಗಿರುವುದು ಒಂದಲ್ಲ, ಎರಡಲ್ಲ...ಮೂರು ಮದುವೆಯಾಗಿರುವ ಬಗ್ಗೆ. ಇಷ್ಟು ಮದುವೆಯಾದರೂ, ನಟನಾಗಿ ಮಿಂಚುತ್ತಿದ್ದರೂ, ರಾಜಕಾರಣಿಯಾಗಿ ಪ್ರಸಿದ್ಧಿ ಹೊಂದಿದ್ದರೂ ಒಮ್ಮೆ ಆತ್ಮಹತ್ಯೆಯೂ ಯೋಚಿಸಿದ್ದರಂತೆ. ಇವುಗಳ ಕುರಿತು ಬಾಲಯ್ಯ ಅವರ ನಿರೂಪಣೆಯ ಟಾಕ್ ಶೋ ಅನ್‌ಸ್ಟಾಪೆಬಲ್ ಶೋ(Unstoppable Show) ಶೋನಲ್ಲಿ ಒಮ್ಮೆ ಇವರು ಮಾತನಾಡಿದ್ದು, ಅದೀಗ ಮತ್ತೆ ವೈರಲ್ ಆಗಿದೆ.
37
ಜೀವನದ ದಪಯಣ
ಈ ಷೋನಲ್ಲಿ ನಟ, ಮೂರು ಮದುವೆ, ಮಕ್ಕಳು, ಆತ್ಮಹತ್ಯೆ, ಖಿನ್ನತೆ, ನಟನೆ, ರಾಜಕೀಯ ಹೀಗೆ ಎಲ್ಲವುಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಇಷ್ಟೇ ಅಲ್ಲದೇ ಬಾಲ್ಯದಿಂದಲೂ ಬ್ರಾಂಕೈಟಿಸ್ ಮತ್ತು ಅಸ್ತಮಾದಿಂದ ಬಳಲುತ್ತಿರುವ ಬಗ್ಗೆಯೂ ಹೇಳಿಕೊಂಡಿರುವ ನಟ, ಒಂದೇ ಬಾರಿಗೆ ಅನೇಕ ಸಮಸ್ಯೆಗಳು ತನ್ನನ್ನು ಕಾಡಿದ್ದ ಕೆಟ್ಟ ದಿನಗಳನ್ನೂ ನೆನೆಸಿಕೊಂಡಿದ್ದಾರೆ.
ಮೊದಲಿಗೆ ಇವರ ಮೂರು ಮದುವೆಯ ಕಾಂಟ್ರವರ್ಸಿ (Contraversy) ಕುರಿತು ಹೇಳುವುದಾದರೆ, ಪವನ್ ಕಲ್ಯಾಣ್ 1997 ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾದರು. 2007ರಲ್ಲಿ ಅವರು ವಿಚ್ಛೇದನ ನೀಡಿದ ಅವರು, 2008ರಲ್ಲಿ ರೇಣು ಎಂಬುವವರನ್ನು ವಿವಾಹವಾದರು. ಬದ್ರಿ ಚಿತ್ರದಲ್ಲಿ ಪವನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ನಟಿ ರೇಣು ದೇಸಾಯಿ ಅವರಿಂದ ಇಬ್ಬರು ಮಕ್ಕಳನ್ನು ಪಡೆದರು. ಅದಾದ ನಂತರ ರೇಣು ದೇಸಾಯಿ ಜೊತೆಗಿನ ಸಂಬಂಧ ಮುರಿದುಬಿತ್ತು. ಅವರಿಗೆ ಡಿವೋರ್ಸ್ (Divorce) ಕೊಟ್ಟರು. ಪವನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ರೇಣು ದೇಸಾಯಿ ಸದ್ಯ ಪುಣೆಯಲ್ಲಿ ವಾಸವಾಗಿದ್ದು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಆಗಾಗ ಹಲವು ಟಿವಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೇಣು ಅವರಿಗೆ ಡಿವೋರ್ಸ್ ನೀಡಿದ ಬಳಿಕ ಪವನ್ ಕಲ್ಯಾಣ್ ಅವರು ರಷ್ಯಾದ ಹುಡುಗಿ ಅನ್ನಾ ಲೆಜಿನೇವಾರನ್ನು ಮದುವೆಯಾಗಿದ್ದಾರೆ. ಈ ಜೋಡಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.
57
ಮದುವೆಗಳ ಬಗ್ಗೆ
ಇನ್ನು ಮೂರು ಮೂರು ಮದುವೆಯಿಂದ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುತ್ತಿರುವ ಪವನ್ ಅವರು ಅದರ ಬಗ್ಗೆ ಅಸಮಾಧಾನ ಹೊರಹಾಕಿ, ತಾವ್ಯಾಕೆ ಇಷ್ಟು ಮದುವೆಯಾಗಿರುವುದು ಎಂಬುದನ್ನು ತಿಳಿಸಿದ್ದಾರೆ. ಹೊಂದಾಣಿಕೆಯ ಕೊರತೆಯಿಂದ ಮೂರು ಸಂಬಂಧಗಳು ಮುರಿದು ಬಿತ್ತು. ನಾನು ಒಂದೇ ಸಲಕ್ಕೆ ಮೂರು ಸಲ ಮದುವೆಯಾಗಿಲ್ಲ ಎಂದಿದ್ದಾರೆ. ನಾನು ಮದುವೆಯನ್ನೇ ಆಗಬಾರದು ಎಂದುಕೊಂಡವ, ಒಂಟಿತನ ಇಷ್ಟವಾಗಿತ್ತು. ಈಗ ಹಿಂದುರುಗಿ ನೋಡಿದರೆ ಇದು ನಾನೇನಾ ಅನ್ನಿಸುತ್ತದೆ. ಮೊದಲ ಮದುವೆ ಹೊಂದಾಣಿಕೆ ಆಗಲಿಲ್ಲ, ಅದಕ್ಕೇ ಎರಡನೆಯದ್ದು ಆದೆ. ಅದು ಕೂಡ ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿದ್ದವು. ಅದಕ್ಕೆ ಆ ಮದುವೆಗೂ (Marriage)ಅಂತ್ಯ ಹಾಡಿದೆ ಎಂದಿದ್ದಾರೆ ನಟ.
67
ಮೂರನೇ ಬಾರಿ ಮದುವೆ
ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಅದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿಲ್ಲವಲ್ಲ, ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು? ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ (Political) ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್ ಕಲ್ಯಾಣ್ ಬೇಸರ ವ್ಯಕ್ತಪಡಿಸಿದ್ದಾರೆ.
77
ಆತ್ಮ*ಹತ್ಯೆ ಯೋಚನೆ
ಹಿಂದೊಮ್ಮೆ ತಾವು ಆತ್ಮ*ಹತ್ಯೆ ಮಾಡಿಕೊಳ್ಳಲು ಯೋಚಿಸಿರುವ ಬಗ್ಗೆಯೂ ಪವನ್ ಕಲ್ಯಾಣ್ ಹೇಳಿದ್ದಾರೆ. ಅದ್ಯಾಕೋ ಜೀವನದಲ್ಲಿ ತೀರಾ ಖಿನ್ನತೆಗೆ ಜಾರಿದೆ. ಅಣ್ಣ ಚಿರಂಜೀವಿ ಅವರ ಕೊಠಡಿಯಿಂದ ಪರವಾನಗಿ ಪಡೆದ ರಿವಾಲ್ವರ್ ಎತ್ತಿಕೊಂಡು ಬಂದಿದ್ದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.