'ಅನಿಮಲ್' ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದ ಪರಿಣೀತಿ ಚೋಪ್ರಾ, ದಿನಾಂಕಗಳ ಸಮಸ್ಯೆಯಿಂದಾಗಿ 'ಅಮರ್ ಸಿಂಗ್ ಚಮ್ಕಿಲಾ' ಚಿತ್ರವನ್ನು ಆಯ್ದುಕೊಂಡರು. ಈ ನಿರ್ಧಾರದಿಂದಾಗಿಯೇ ತಮಗೆ ಪತಿ ರಾಘವ್ ಚಡ್ಡಾ ಸಿಕ್ಕಿದ್ದು, 'ಅನಿಮಲ್' ಒಪ್ಪಿಕೊಂಡಿದ್ದರೆ ಮದುವೆ ಆಗುತ್ತಿರಲಿಲ್ಲ ಎಂದು ಪರಿಣೀತಿ ಬಹಿರಂಗಪಡಿಸಿದ್ದಾರೆ
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ರಣ್‌ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರು 'ಅನಿಮಲ್' (Animal) ಸಿನಿಮಾ ಯಾವ ಮಟ್ಟಿಗೆ ಸದ್ದು ಮಾಡಿತ್ತು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಹೆಣ್ಣಿನ ಮೇಲೆ ಕ್ರೌರ್ಯ ಹಾಗೂ ಅಶ್ಲೀಲತೆಯನ್ನು ವಿಜೃಂಭಿಸುವ ಈ ಸಿನಿಮಾದ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ಸಿನಿಮಾ ಬ್ಲಾಕ್ಬಸ್ಟರ್ ಎನ್ನಿಸಿಕೊಂಡಿತ್ತು.
26
ರಶ್ಮಿಕಾ ಬದಲು ಪರಿಣೀತಿ
ಅಸಲಿಗೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಗೀತಾಂಜಲಿ ರೋಲ್ಗೆ ಮೊದಲು ಆಯ್ಕೆಯಾಗಿದ್ದು ನಟಿ ಪರಿಣೀತಿ ಚೋಪ್ರಾ. ಅವರು ಆಗಿನ್ನೂ ಈಗ ಬಿಜೆಪಿ ಸೇರಿ ಸದ್ದು ಮಾಡ್ತಿರೋ ಆಪ್ ಸಂಸದರಾಗಿದ್ದ ರಾಘವ್ ಚಡ್ಡಾ ಅವರ ಜೊತೆ ಮದುವೆಯಾಗಿರಲಿಲ್ಲ. ಅನಿಮಲ್ ಸಿನಿಮಾದಲ್ಲಿ ಬಹುತೇಕ ಮಾತುಕತೆ ಫಿಕ್ಸ್ ಆಗಿ ಇನ್ನೇನು ಶೂಟಿಂಗ್ ಆರಂಭವಾಗುವಷ್ಟರಲ್ಲಿಯೇ ನಟಿ ಅದರಿಂದ ಹಿಂದಕ್ಕೆ ಸರಿದರು.
36
ಕಾರಣ ಏನು?
ಪರಿಣಿತಿ ಚೋಪ್ರಾ ಅವರು 'ಆ್ಯನಿಮಲ್' ಚಿತ್ರವನ್ನು ತಿರಸ್ಕರಿಸಲು ಮುಖ್ಯ ಕಾರಣವೆಂದರೆ ದಿನಾಂಕಗಳ ಹೊಂದಾಣಿಕೆ ಆಗದೇ ಇದ್ದುದು. ಆ ಸಮಯದಲ್ಲಿ ಅವರು ಇಮ್ತಿಯಾಜ್ ಅಲಿ ನಿರ್ದೇಶನದ 'ಅಮರ್ ಸಿಂಗ್ ಚಮ್ಕಿಲಾ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅನಿಮಲ್ ಮತ್ತು ಚಮ್ಕಿಲಾ ಸಿನಿಮಾದಲ್ಲಿ ಒಂದನ್ನು ಬಿಡಬೇಕಾಗಿ ಬಂದಿದ್ದರಿಂದ ಅವರು ಚಮ್ಕಿಲಾ ಸಿನಿಮಾ ಆಯ್ಕೆ ಮಾಡಿಕೊಂಡಿದ್ದರು. ಆ ಸಿನಿಮಾದ ಮೂಲಕವೂ ಪರಿಣೀತಿ ಅವರು ಸಾಕಷ್ಟು ಹೆಸರು ಮಾಡಿದರು.
ಕುತೂಹಲದ ವಿಷ್ಯ ಏನೆಂದರೆ, ಅಮರ್ ಸಿಂಗ್ ಚಮ್ಕಿಲಾ' ಚಿತ್ರದ ಬದಲು ಅನಿಮಲ್ ಚಿತ್ರ ಆಯ್ಕೆ ಮಾಡಿಕೊಂಡಿದ್ದರೆ, ಪರಿಣೀತಿ ಅವರಿಗೆ ರಾಘವ್ ಚಡ್ಡಾ ಜೊತೆ ಮದುವೆನೇ ಆಗ್ತಿರಲಿಲ್ಲವಂತೆ. ಈ ವಿಷಯವನ್ನು ಅವರು, ರಜತ್ ಶರ್ಮಾ ಷೋನಲ್ಲಿ ಬಹಿರಂಗಪಡಿಸಿದ್ದಾರೆ.
56
ನಿರ್ಧಾರವೇಕೆ?
ಚಮ್ಕಿಲಾ ಚಿತ್ರದಲ್ಲಿ, ಪಾತ್ರವು ಹೆಚ್ಚು ಪ್ರಾಮುಖ್ಯತೆ ಹೊಂದಿತ್ತು ಮತ್ತು ಎ.ಆರ್. ರೆಹಮಾನ್ ಅವರ ಸಂಗೀತದೊಂದಿಗೆ ಕೆಲಸ ಮಾಡುವ ಅವಕಾಶವಿದ್ದಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೆ. 'ಆ್ಯನಿಮಲ್' ಚಿತ್ರವು 900 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದರೂ, ನನಗೆ ಸ್ವಲ್ಪವೂ ಬೇಸರವಿಲ್ಲ. ಏಕೆಂದರೆ, 'ಚಮ್ಕಿಲಾ' ಚಿತ್ರದಲ್ಲಿನ ಅಮರ್ಜೋತ್ ಪಾತ್ರ ಸಿಕ್ಕಾಪಟ್ಟೆ ಕೀರ್ತಿ ತಂದುಕೊಟ್ಟಿದೆ ಎಂದರು.
66
ಶೂಟಿಂಗ್ನಲ್ಲಿ ರಾಘವ್ ಚಡ್ಡಾ ಭೇಟಿ
ಇದೇ ವೇಳೆ, ಈ ಸಿನಿಮಾ ಶೂಟಿಂಗ್ ಸಮಯದಲ್ಲಿಯೇ ನಾನು ರಾಘವ್ ಅವರು ಭೇಟಿಯಾಗಿದ್ದು. ಅಲ್ಲಿಯೇ ಮಾತುಕತೆ ನಡೆದು, ಪ್ರೀತಿ ಮೊಳಗಿ ಮದುವೆಯಾಗಿದ್ದು. ಅನಿಮಲ್ ಚಿತ್ರ ಒಪ್ಪಿಕೊಂಡಿದ್ದರೆ ಬಹುಶಃ ರಾಘವ್ ಸಿಗುತ್ತಿರಲಿಲ್ಲ ಎಂದಿದ್ದಾರೆ ನಟಿ ಪರಿಣೀತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.