ಫ್ಯಾಷನ್ ಫಿಲ್ಮ್ ಒಂದರ ಕೆಲಸದಲ್ಲಿ ಬ್ಯುಸಿಯಾಗಿರುವ ನಟಿ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ವಿಚಾರ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರ ಫ್ಯಾಶನ್ ಇವೆಂಟ್ ನಲ್ಲಿ ಕಾಣಿಸಿಕೊಂಡ ನಟಿಯ ಪೋಟೋಗಳು ವೈರಲ್ ಆಗುತ್ತಿವೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ಬಾಲಿವುಡ್ ನಟಿ ನೋರಾ ಫತೇಹಿ ವೈಟ್ ಕಟೌಟ್ ಉಡುಪಿನಲ್ಲಿ ಕಂಡು ಬಂದಿದ್ದು ವೈರಲ್ ಆಗಿತ್ತು. ಸ್ಟೈಲಿಷ್ ಉಡುಪಿನಲ್ಲಿ ಹೊರಗೆ ಬಂದ ನಟಿಯ ಬಾಡಿಕಾನ್ ಡ್ರೆಸ್ ಗೆ ಬಗೆಬಗೆಯ ಪ್ರತಿಕ್ರಿಯೆ ಹರಿದು ಬಂದಿತ್ತು.
ಈ ಬಾರಿ ಸಹ ಅಂತಹುದೆ ಅವತಾರದಲ್ಲಿ ಕಾಣಿಸಿಕೊಂಡಿದ್ದು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಕಿರು ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ.
ಸಿನಿಮಾಗಳಿಗಿಂತ ಆಲ್ಬಂ ಸಾಂಗ್‌ಗಳ ಮೂಲಕ ವೈರಲ್ ಆಗಿರುವ ನಟಿ ಯೂಟ್ಯೂಬ್‌ನಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಖ್ಯಾತ ಗಾಯಕರ ಜೊತೆ ಆಲ್ಬಂಸ ಸಾಂಗ್ ಮಾಡೋ ನೋರಾ ಹಾಡುಗಳಲ್ಲಿಯೂ ಚಂದದ ಥೀಮ್ ಇದ್ದೇ ಇರುತ್ತದೆ.
ಡ್ಯಾನ್ಸ್ ಶೋ ಮೂಲಕ ಹೆಸರು ಗಳಿಸಿದ ನೋರಾ ನಂತರ ಡ್ಯಾನ್ಸ್ ಶೋ ಗಳಿಗೆ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳತೊಡಗಿದ್ದಾರೆ. ಸೋಶಿಯಲ್ ಮೀಡಿಯಾ ಬಿಸಿ ಏರಿಸುವಲ್ಲಿ ಇವರದ್ದು ಎತ್ತಿದ ಕೈ.
'ರಾಣಿಯಂತೆ ಕಂಗೊಳಿಸುತ್ತಿದ್ದೀರಿ, ಆದರೆ ಒಂದೇ ಸಮಸ್ಯೆ. ಮುಖ ಚಿಕ್ಕದಾಗಿ ಕಾಣುತ್ತಿದೆ ಎಂದು ಕಮೆಂಟ್ ಮಾಡಿದವರು ಇದ್ದಾರೆ.