ನಟರಾದವರು ತಮ್ಮ ಪಾತ್ರದ ಒಳಗೆ ಪರಕಾಯ ಪ್ರವೇಶ ಮಾಡಿ, ಆ ಕ್ಯಾರೆಕ್ಟರ್ಗೆ ನ್ಯಾಯ ಒದಗಿಸುವುದೂ ಅಲ್ಲದೇ, ಅದು ಜನಮಾನಸದಲ್ಲಿ ಉಳಿಯುವಂತೆ ಮಾಡಲು ಹಲವರು ರೀತಿಯಲ್ಲಿ ಶ್ರಮ ವಹಿಸುತ್ತಾರೆ. ಸಿನಿಮಾ ಮಾತ್ರವಲ್ಲದೇ ಸೀರಿಯಲ್ಗಳಲ್ಲಿಯೂ ಇಂದು ಹಲವು ನಟರು ತಮ್ಮ ಪಾತ್ರದ ಬಗ್ಗೆ ತುಂಬಾ ಸೀರಿಯಸ್ ಆಗಿ ಅಧ್ಯಯನ ಮಾಡುವುದು ಇದೆ. ಅವರಲ್ಲಿ ಒಬ್ಬರು ಕರ್ಣ ಸೀರಿಯಲ್ನಲ್ಲಿ ಕರ್ಣ ಪಾತ್ರಧಾರಿಯಾಗಿರುವ ಕಿರಣ್ ರಾಜ್.
27
ವೈದ್ಯನಾಗಿ ಕಿರಣ್ ರಾಜ್
ಈ ಸೀರಿಯಲ್ನಲ್ಲಿ ಕಿರಣ್ ಅವರದ್ದು ಡಾಕ್ಟರ್ ರೋಲ್. ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಿಗೆ ಒಳ್ಳೆಯತನವನ್ನು ತೋರಿರುವುದರಿಂದ ಈಗಲೇ ವೀಕ್ಷಕರಿಗೆ ಈ ಪಾತ್ರದ ಮೇಲೆ ಯಾಕೋ ಸ್ವಲ್ಪ ಅಸಮಾಧಾನ ಇರುವುದು ಕಮೆಂಟ್ಗಳಿಂದಲೇ ತಿಳಿದುಬರುತ್ತಿದೆ. ಆದರೆ ನಿರ್ದೇಶಕರು ಹೇಳಿದಂತೆ ಮಾಡುವುದು ನಟರ ಕರ್ತವ್ಯವೂ ಆಗಿರುವ ಕಾರಣ, ಕರ್ಣನಾಗಿ ಕಿರಣ್ ಅವರು ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.
37
ಕ್ರಷ್ ಬಗ್ಗೆ ಕಿರಣ್ ರಾಜ್
ಅದಕ್ಕೆ ಅವರು ನನಗೆ ಏನಾದ್ರೂ ಕ್ರಷ್ ಇದ್ದಿದ್ರೆ ಇಷ್ಟೊತ್ತಿಗೆ ಪ್ರಪೋಸ್ ಮಾಡಿ ಡೇಟಿಂಗ್ ಮಾಡ್ತಾ ಇದ್ದೆ ಎಂದಿದ್ದಾರೆ. ಕೊನೆಗೆ ಇಡೀ ಚಿತ್ರರಂಗವೇ ನನ್ನ ಕ್ರಷ್ ಎಂದು ಹೇಳುವ ಮೂಲಕ, ಹುಡುಗಿಯರಿಗಂತೂ ಸದ್ಯ ಗುಡ್ನ್ಯೂಸ್ ಕೊಟ್ಟಿದ್ದಾರೆ ಕಿರಣ್ ರಾಜ್.
ಈ ಹಿಂದಿನ ಸಂದರ್ಶನದಲ್ಲಿ ಕಿರಣ್ ರಾಜ್ ಅವರು, ವೈದ್ಯನ ಪಾತ್ರ ಮಾಡಲು ತಾವು ಹೇಗೆಲ್ಲಾ ಪ್ರಿಪೇರ್ ಆಗಿದ್ದು ಎನ್ನುವ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದರು. 'ಆಸ್ಪತ್ರೆಗಳಿಗೆ ಭೇಟಿ ಕೊಟ್ಟು, ಹಲವು ವೈದ್ಯರ ಜೊತೆ ಮಾತನಾಡಿದ್ದೇನೆ. ಡಾಕ್ಟರ್ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಸ್ಟಡಿಮಾಡಿದ್ದೇನೆ. ಮಾತ್ರವಲ್ಲದೇ ಪ್ರಸವದ ಸಮಯದಲ್ಲಿ ಏನಾಗುತ್ತದೆ, ಮಹಿಳೆಯರ ಮನಸ್ಥಿತಿ ಹೇಗೆ ಇರುತ್ತದೆ, ಕರ್ನಾಟಕದಲ್ಲಿ ಗರ್ಭಿಣಿಯರ ಸಾವು ಯಾಕೆ ಆಗ್ತಿದೆ, ಇದನ್ನು ತಡೆಯಲು ಏನು ಮಾಡಬಹುದು, ಹೆರಿಗೆ ಸಮಯದಲ್ಲಿ ರಕ್ತದ ಕೊರತೆ ಏಕೆ ಕಾಡುತ್ತಿದೆ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ ಕೊರತೆ ಇವೆ ಇವೆಲ್ಲವುಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ' ಎಂದಿದ್ದರು.
57
ತೆಲುಗು ಮತ್ತು ಹಿಂದಿಯಲ್ಲೂ ಮಿಂಚಿಂಗ್
ಇನ್ನು ನಟನ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರದಲ್ಲಿಯೂ ನಟಿಸಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಕೆಲ ಧಾರಾವಾಹಿ ಮತ್ತು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ನಟನಾ ಜೀವನ ಹಿಂದಿ ಸೀರಿಯಲ್‌ನಿಂದ ಆರಂಭವಾಗಿದ್ದು, ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಕನ್ನಡಕ್ಕೆ ಬಂದರು.
67
ವಿವಿಧ ಸೀರಿಯಲ್ಗಳಲ್ಲಿ ನಾಯಕ
ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದರು. ಕಲರ್ಸ್ ಕನ್ನಡದ ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು.
77
ಸಿನಿಮಾದಲ್ಲಿಯೂ ನಟನೆ
ಅಸತೋಮ ಸದ್ಗಮಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು, ಬಳಿಕ ಮಾರ್ಚ್ 22, ಜೀವ್ನಾನೇ ನಾಟ್ಕ ಸ್ವಾಮಿ, ಬಹುದ್ದೂರ್ ಗಂಡು, ಬಡ್ಡೀಸ್, ಒನ್ ವೇ, ರಾನಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗುವಿನಲ್ಲಿ ನುವ್ವೇ ನಾ ಪ್ರಾಣಂ, ವಿಕ್ರಮ್ ಗೌಡ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.