ಕೊಟ್ಟ ಮಾತನ್ನು ಉಳಿಸಿಕೊಂಡ್ರು ನಟ ವಿಜಯ್ ದೇವರಕೊಂಡ; ರಶ್ಮಿಕಾ ಜೊತೆ ಸ್ವಗ್ರಾಮಕ್ಕೆ ಭೇಟಿ

Published : Jun 14, 2026, 02:19 PM IST

Vijay Rashmika social work updates: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ನಟ ವಿಜಯ್ ದೇವರಕೊಂಡ, ಪತ್ನಿ ರಶ್ಮಿಕಾ ಮಂದಣ್ಣ ಮತ್ತು ಕುಟುಂಬಸ್ಥರ ಜೊತೆಗೂಡಿ ತಮ್ಮ ಸ್ವಗ್ರಾಮವಾದ ತುಮ್ಮನ್‌ಪೇಟೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕೊಟ್ಟ ಮಾತನ್ನ ಇಂದು ಉಳಿಸಿಕೊಂಡಿದ್ದಾರೆ.

PREV
16
ಸಿನಿಮಾ ಕೆಲಸಗಳಲ್ಲಿ ಫುಲ್ ಬ್ಯುಸಿ

ಸಿನಿಮಾ ಕೆಲಸಗಳಲ್ಲಿ ಫುಲ್ ಬ್ಯುಸಿ
ಸ್ಟಾರ್ ಹೀರೋ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ಮದುವೆಯಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಸುದೀರ್ಘ ಕಾಲದಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರ ಇವರಿಬ್ಬರೂ ತಮ್ಮ ತಮ್ಮ ಸಿನಿಮಾಗಳ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅಂದಹಾಗೆ ವಿಜಯ್ ದೇವರಕೊಂಡ ಸಿನಿಮಾಗಳ ಜೊತೆಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕ ನೂರಾರು ಜನರಿಗೆ ಸಹಾಯ ಮಾಡುತ್ತಿದ್ದಾರೆ.

26
ಸ್ಕಾಲರ್‌ಶಿಪ್ ವಿತರಣೆ

ಸ್ಕಾಲರ್‌ಶಿಪ್ ವಿತರಣೆ
ಇದೀಗ ನಾಗರ್ ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿಜಯ್ ದೇವರಕೊಂಡ-ರಶ್ಮಿಕಾ ದಂಪತಿ ಸ್ಕಾಲರ್‌ಶಿಪ್ ವಿತರಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಅಂದರೆ ಮದುವೆಯಾದ ತಕ್ಷಣವೇ, ವಿಜಯ್ ದೇವರಕೊಂಡ ತಮ್ಮ ಸ್ವಂತ ಊರಾದ ನಾಗರ್ ಕರ್ನೂಲ್ ಜಿಲ್ಲೆಯ ತುಮ್ಮನ್‌ಪೇಟೆ ಗ್ರಾಮಕ್ಕೆ ಭೇಟಿ ನೀಡಿದ್ದರು.

36
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ
ಆ ಸಂದರ್ಭದಲ್ಲಿ, ಅಚ್ಚಂಪೇಟೆ ಡಿವಿಷನ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಟಾಪರ್ಸ್ (ಹೆಚ್ಚು ಅಂಕ ಗಳಿಸಿದ) ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಆ ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 'ದಿ ದೇವರಕೊಂಡ ಫೌಂಡೇಶನ್' ಮೂಲಕ, 44 ಸರ್ಕಾರಿ ಶಾಲೆಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಸ್ವತಃ ಸ್ಕಾಲರ್‌ಶಿಪ್ ವಿತರಿಸುತ್ತಿದ್ದಾರೆ.

46
ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ದಂಪತಿ

ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ದಂಪತಿ
9 ಮತ್ತು 10ನೇ ತರಗತಿಯ ಒಟ್ಟು 180 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಆರ್ಥಿಕ ಸಹಾಯ ಮಾಡಿದ್ದಾರೆ. ಗುರುಗಳು ಮತ್ತು ಪೋಷಕರು ಹೇಳುವ ಮಾತುಗಳನ್ನು ಕೇಳುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು ಎಂದು ದಂಪತಿ ಆಶಿಸಿದ್ದಾರೆ.

56
ಅದ್ಧೂರಿ ಸುಸ್ವಾಗತ ಕೋರಿದ ಗ್ರಾಮಸ್ಥರು

ಅದ್ಧೂರಿ ಸುಸ್ವಾಗತ ಕೋರಿದ ಗ್ರಾಮಸ್ಥರು
ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಇಂದು (ಜೂನ್ 14) ವಿಜಯ್ ದೇವರಕೊಂಡ ತಮ್ಮ ಪತ್ನಿಯೊಂದಿಗೆ ತಂದೆಯ ಜನ್ಮಸ್ಥಳವಾದ ನಾಗರ್ ಕರ್ನೂಲ್ ಜಿಲ್ಲೆಯ, ಅಚ್ಚಂಪೇಟೆ ವಿಧಾನಸಭಾ ಕ್ಷೇತ್ರದ ತುಮ್ಮನ್‌ಪೇಟೆ ಗ್ರಾಮಕ್ಕೆ ತೆರಳಿದ್ದಾರೆ. ಸ್ವಂತ ಊರಿಗೆ ಆಗಮಿಸಿದ ಈ ಹೊಸ ದಂಪತಿಗೆ ಗ್ರಾಮಸ್ಥರು ಅದ್ಧೂರಿ ಸುಸ್ವಾಗತ ಕೋರಿದ್ದಾರೆ.

66
ಸಂಪೂರ್ಣ ವೆಚ್ಚವನ್ನು ಭರಿಸಲಿರುವ ವಿಜಯ್-ರಶ್ಮಿಕಾ

ಸಂಪೂರ್ಣ ವೆಚ್ಚವನ್ನು ಭರಿಸಲಿರುವ ವಿಜಯ್-ರಶ್ಮಿಕಾ
ಅಚ್ಚಂಪೇಟೆ ಕ್ಷೇತ್ರದ ವ್ಯಾಪ್ತಿಯ 44 ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜಯ್-ರಶ್ಮಿಕಾ ಸ್ಕಾಲರ್‌ಶಿಪ್ ಒದಗಿಸಲಿದ್ದು, 'ದಿ ದೇವರಕೊಂಡ ಫೌಂಡೇಶನ್' ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ವಿಜಯ್ ಮತ್ತು ರಶ್ಮಿಕಾ ಅವರೇ ಭರಿಸಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories