Naa Ninna Bidalaare ಶರತ್​ ತಾಯಿ, Brahmagantu ದೀಪಾ ಚಿಕ್ಕಮ್ಮ: ಅಮ್ಮನೂ ಸೀರಿಯಲ್​ ನಟಿ- ಕಲಾವಿದರ ಫ್ಯಾಮಿಲಿ

Published : Jul 10, 2026, 04:48 PM IST

'ಬ್ರಹ್ಮಗಂಟು' ಸೀರಿಯಲ್ ಖ್ಯಾತಿಯ ನಟಿ ದಿಯಾ ಪಾಲಕ್ಕಲ್ ಅವರ ತಾಯಿ ರಮ್ಯಾ ಅಜಯ್ ಮತ್ತು ಚಿಕ್ಕಮ್ಮ ರಾಧಾ ಜಯರಾಮ್ ಕೂಡ ಜನಪ್ರಿಯ ಕಿರುತೆರೆ ನಟಿಯರಾಗಿದ್ದಾರೆ. ನಟನೆಯಲ್ಲದೆ, ದಿಯಾ ಅವರ ತಾಯಿ ಮತ್ತು ಚಿಕ್ಕಮ್ಮ ಇಬ್ಬರೂ ಭರತನಾಟ್ಯ ಕಲಾವಿದೆಯರಾಗಿದ್ದು, ನೃತ್ಯ ಶಾಲೆಯನ್ನೂ ನಡೆಸುತ್ತಿದ್ದಾರೆ.

PREV
16
ದೀಪಾ- ದಿಶಾ

ಬ್ರಹ್ಮಗಂಟು ಸೀರಿಯಲ್​ (Brahmagantu serial) ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿರೋ 23 ವರ್ಷದ ದಿಯಾ ಪಾಲಕ್ಕಲ್​ ಸದ್ಯ ಈ ಸೀರಿಯಲ್​​ನಲ್ಲಿ ದೀಪಾ ಮತ್ತು ದಿಶಾ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹಜಬೆಂಡು ಹಜಬೆಂಡು ಎನ್ನುತ್ತಲೇ ಒಂದು ಟ್ರೆಂಡ್​ ಕ್ರಿಯೇಟ್​ ಮಾಡಿರುವ ದಿಯಾ ಅವರ ನಟನೆಗೆ ಎಲ್ಲರೂ ಬೆರಗಾಗಿದ್ದಾರೆ.

26
ಬಾಲನಟಿಯಾಗಿ ಫೇಮಸ್​

ಇದಾಗಲೇ ದಿಯಾ ಪಾಲಕ್ಕಲ್​ (Diya Palakkal) 'ಕಿನ್ನರಿ', 'ಸರ್ವಮಂಗಳ ಮಾಂಗಲ್ಯೇ' ಸೇರಿದಂತೆ ಕೆಲವು ಸೀರಿಯಲ್​ಗಳಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡವರು. 'ಜಾನ್‌ ಜಾನಿ ಜನಾರ್ದನ್‌', 'ಭರ್ಜರಿ', 'ಭರಾಟೆ', 'ಜಾನಿ ಜಾನಿ ಯೆಸ್‌ ಪಪ್ಪಾ' ಸಿನಿಮಾಗಳಲ್ಲಿ ಬಾಲಕಿಯಾಗಿ ಕಾಣಿಸಿಕೊಂಡಿದ್ದಾರೆ. ಕುತೂಹಲ ಎಂದರೆ ಇವರ ಇಡೀ ಫ್ಯಾಮಿಲಿಗೇ ಬಣ್ಣದ ಲೋಕದ ನಂಟು.

36
ಚಿಕ್ಕಮ್ಮ ಶರತ್​ ಅಮ್ಮ!

ಅಂದಹಾಗೆ, ಇವರ ಚಿಕ್ಕಮ್ಮನ ಬಗ್ಗೆ ಹೇಳುವುದಾದರೆ,, ನಾ ನಿನ್ನ ಬಿಡಲಾರೆ ಸೀರಿಯಲ್​ (Naa Ninna Bidalaare Serial)ನಲ್ಲಿ ಶರತ್​ ಅಮ್ಮ ದಾಕ್ಷಾಯಣಿ ಎಂಟ್ರಿ ಆಗಿದೆ. ಕುತೂಲದ ವಿಷ್ಯ ಏನೆಂದರೆ ದಾಕ್ಷಾಯಣಿಯಾಗಿ ನಟಿಸುತ್ತಿರುವ ನಟಿಯ ಹೆಸರು ರಾಧಾ ಜಯರಾಮ್‌. ಇವರು ದಿಯಾ ಪಾಲಕ್ಕಲ್​ ಅವರ ತಾಯಿಯ ತಂಗಿ. ಅರ್ಥಾತ್​ ನಟಿಯ ಚಿಕ್ಕಮ್ಮ.

46
ಪುಣ್ಯವತಿಯಲ್ಲಿ ನಟನೆ

ರಾಧಾ ಜಯರಾಮ್​ ಅವರು, ಕಲರ್ಸ್‌ ಕನ್ನಡ ವಾಹಿನಿಯ ‘ಪುಣ್ಯವತಿ’ ಸೀರಿಯಲ್​ನಲ್ಲಿಯೂ ನಟಿಸಿದ್ದರು. ಸ್ಟಾರ್‌ ಸುವರ್ಣ ವಾಹಿನಿಯ ‘ಶಾರದೆ’ ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ತಾಯಿ ಪಾತ್ರ ಮಾಡುತ್ತಿದ್ದಾರೆ ಇವರು.

56
ದಿಯಾ ಅಮ್ಮನೂ ಸೀರಿಯಲ್​ ನಟಿ

ಅಷ್ಟೇ ಅಲ್ಲದೇ ಸೀರಿಯಲ್​ ಪ್ರಿಯರು ಇದಾಗಲೇ ದಿಯಾ ಪಾಲಕ್ಕಲ್​ ಅವರ ಅಮ್ಮನನ್ನೂ ಸೀರಿಯಲ್​ಗಳಲ್ಲಿ ನೋಡಿರುತ್ತೀರಿ. ಆದರೆ ಇವರ ಮಗಳೇ ದಿಯಾ ಎನ್ನೋದು ಗೊತ್ತಿಲ್ಲ ಅಷ್ಟೇ. ದಿಯಾ ಅವರ ತಾಯಿ ರಮ್ಯಾ ಅಜಯ್‌ ಅವರು ‘ಗೌರಿಶಂಕರ’, ‘ನೀ ಇರಲು ಜೊತೆಯಲ್ಲಿ’ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

66
ಭರಟನಾಟ್ಯ ಕಲಾವಿದರು

ಇನ್ನೊಂದು ಕುತೂಹಲದ ವಿಷ್ಯ ಏನೆಂದರೆ, ದಿಯಾ ಅವರ ಅಮ್ಮ ಮತ್ತು ಚಿಕ್ಕಮ್ಮ ಇಬ್ಬರೂ ಭರತನಾಟ್ಯ ಕಲಾವಿದೆಯರು. ಇಬ್ಬರೂ ಸೇರಿ ‘ಭಾಮ ಕಲಾ ಕುಟೀರ’ ಎಂಬ ಶಾಸ್ತ್ರೀಯ ನೃತ್ಯ ಕಲಾ ತರಬೇತಿ ಶಾಲೆಯನ್ನ ನಡೆಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories