ಹೊಸ ವರ್ಷ 2024ಕ್ಕೆ ಇನ್ನೇನು ಕೆಲವೇ ವರ್ಷಗಳು ಬಾಕಿಯಿವೆ. ಹೀಗಿರುವಾಗ ಕೋಟ್ಯಾಂತರ ವ್ಯವಹಾರಗಳನ್ನು ನಿರ್ವಹಿಸೋ ಮುಕೇಶ್ ಅಂಬಾನಿ ಈ ಬಾರಿ ಬಿಸಿನೆಸ್‌ಗೆ ಹೊಸ ಐಡಿಯಾ ಕಂಡುಕೊಂಡಿದ್ದಾರೆ. ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ವಾಲ್ಟ್ ಡಿಸ್ನಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಈ ಒಪ್ಪಂದವು ಜನವರಿ ಅಥವಾ ಫೆಬ್ರವರಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದ್ರೆ ಇದು ಇನ್ನೂ ಅಧಿಕೃತವಾಗದ ಒಪ್ಪಂದವಾಗಿದೆ. ಇದರ ಅಡಿಯಲ್ಲಿ ರಿಲಯನ್ಸ್ ಭಾರತದಲ್ಲಿ ಡಿಸ್ನಿ ಹಾಟ್‌ಸ್ಟಾರ್‌ನ ಮಾಧ್ಯಮ ಕಾರ್ಯಾಚರಣೆಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಈ ಒಪ್ಪಂದದ ನಂತರ, ರಿಲಯನ್ಸ್ 51% ಪಾಲನ್ನು ಪಡೆಯಲಿದ್ದು, ಡಿಸ್ನಿ ಹಾಟ್‌ಸ್ಟಾರ್ 49% ಪಾಲನ್ನು ಉಳಿಸಿಕೊಳ್ಳುತ್ತದೆ.
ಜಿಯೋ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಿಂದ ನೇರ ಸ್ಪರ್ಧೆಯನ್ನು ಎದುರಿಸುತ್ತಿದೆ. ಜಿಯೋ ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಿಂದ ಐಪಿಎಲ್ ಹಕ್ಕುಗಳನ್ನು ಪಡೆದುಕೊಂಡಿತ್ತು. ನಂತರ, ಡಿಸ್ನಿ ಹಾಟ್‌ಸ್ಟಾರ್ ಜಿಯೋ ಸಿನಿಮಾದಿಂದ ಏಷ್ಯಾ ಕಪ್ ಮತ್ತು ಕ್ರಿಕೆಟ್ ವಿಶ್ವಕಪ್‌ನ ಹಕ್ಕುಗಳನ್ನು ಪಡೆದುಕೊಂಡಿತು. ಇದೀಗ ಮುಕೇಶ್ ಅಂಬಾನಿ ಅವರ ಕಂಪೆನಿ ಡಿಸ್ನಿ ಹಾಟ್‌ಸ್ಟಾರ್‌ನ್ನು ಖರೀದಿಸುತ್ತಿದೆ.
ಜಿಯೋ ಸಿನಿಮಾದೊಂದಿಗಿನ ಪೈಪೋಟಿಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಸಾಕಷ್ಟು ನಷ್ಟವನ್ನು ಎದುರಿಸುತ್ತಿದೆ. ಐಪಿಎಲ್ ಮತ್ತು ಫಿಫಾ ವಿಶ್ವಕಪ್ ನಂತರ, ಹಾಟ್‌ಸ್ಟಾರ್ ಚಂದಾದಾರರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ.
ಈ ಒಪ್ಪಂದದ ನಂತರ, ಜಿಯೋ ಸಿನಿಮಾ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಲೀನಗೊಳ್ಳುತ್ತವೆ. ಇದರರ್ಥ ಎರಡೂ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಒಂದೇ ಅಪ್ಲಿಕೇಶನ್‌ನಲ್ಲಿ ದೊರಕುತ್ತದೆ.
ಈಗಾಗಲೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸಬ್‌ಸ್ಕ್ರೈಬರ್, ಗ್ರಾಹಕರು ಜಿಯೋ ಸಿನಿಮಾಗೆ ಬದಲಾಗುತ್ತಾರೆ. ಜಿಯೋ ಸಿನಿಮಾ ಮೂಲಕ ಹೊಸ ಚಂದಾದಾರಿಕೆ ಯೋಜನೆಗಳನ್ನು ಪಡೆದುಕೊಳ್ಳಬಹುದು.
ಜಿಯೋ ಸಿನಿಮಾದಲ್ಲಿ ಹಾಟ್‌ಸ್ಟಾರ್ ವಿಲೀನವು ಜಿಯೋ ಎಂಟರ್‌ಟೈನ್‌ಮೆಂಟ್, ಸೋನಿ, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನೊಂದಿಗೆ ಸ್ಪರ್ಧೆಯನ್ನು ತೀವ್ರಗೊಳಿಸುತ್ತದೆ.
ಇದು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ಗೆ ಹೆಚ್ಚುತ್ತಿರುವ ಒತ್ತಡವನ್ನು ಸೂಚಿಸುತ್ತದೆ, ಏಕೆಂದರೆ ಜಿಯೋ ಸಿನಿಮಾ ಕೈಗೆಟುಕುವ ಯೋಜನೆಗಳನ್ನು ಪ್ರಸ್ತುತಪಡಿಸಬಹುದು.
ಹೆಚ್ಚುವರಿಯಾಗಿ, ಟೆಲಿಕಾಂ ಮತ್ತು OTT ಬಳಕೆದಾರರನ್ನು ಗುರಿಯಾಗಿಸಿಕೊಂಡು ಜಿಯೋ ರೀಚಾರ್ಜ್‌ನೊಂದಿಗೆ ದುಬಾರಿಯಲ್ಲದ ಆಡ್-ಆನ್ ಯೋಜನೆಗಳನ್ನು ಜಿಯೋ ಪರಿಚಯಿಸಬಹುದು. ಹೀಗಾಗಿ 2024 ಮುಕೇಶ್ ಅಂಬಾನಿ ಪಾಲಿಗೆ ಭರ್ಜರಿ ಬಿಸಿನೆಸ್ ಇಯರ್ ಆಗಿರೋದಂತೂ ಖಂಡಿತ..