ಮದುವೆಯಾಗಿ ಮಗು ಇದ್ದರೂ ಮತ್ತೆ ಶಾಲೆಗೆ ಹೋಗುತ್ತಾರಂತೆ ಮಗಧೀರ ನಟಿ: ಮಿನಿ ಸ್ಕರ್ಟ್‌ನಲ್ಲಿ ಕಾಜಲ್ ಕಂಡು ಫ್ಯಾನ್ಸ್‌ ಅಚ್ಚರಿ!

Published : Dec 28, 2023, 04:00 AM IST

'ಕಾಜಲ್ ಅಗರ್ವಾಲ್'. ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟಿಯರಲ್ಲೋರ್ವರು. ಸುಮಾರು ಎರಡು ದಶಕದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2004ರ ಹಿಂದಿ ಸಿನಿಮಾ 'ಕ್ಯೂ ಹೊ ಗಯಾ ನಾ' ಸಿನಿಮಾದ ಚಿಕ್ಕ ಪಾತ್ರವೊಂದರ ಮೂಲಕ ವೃತ್ತಿ ಜೀವನ ಆರಂಭಿಸಿದರು. 

PREV
17
ಮದುವೆಯಾಗಿ ಮಗು ಇದ್ದರೂ ಮತ್ತೆ ಶಾಲೆಗೆ ಹೋಗುತ್ತಾರಂತೆ ಮಗಧೀರ ನಟಿ: ಮಿನಿ ಸ್ಕರ್ಟ್‌ನಲ್ಲಿ ಕಾಜಲ್ ಕಂಡು ಫ್ಯಾನ್ಸ್‌ ಅಚ್ಚರಿ!

ಬಾಯ್ ಫ್ರೆಂಡ್ ಗೌತಮ್ ಕಿಚ್ಲು ಅವರನ್ನು ಪ್ರೀತಿಸಿ ಮದುವೆಯಾದ ಕಾಜಲ್ ಮದುವೆಯ ನಂತರ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಹೊಸದಾಗಿ ಮದುವೆಯಾಗಿ ಪತಿಯೊಂದಿಗೆ ಪ್ರಣಯ ಪ್ರವಾಸಕ್ಕೆಂದು ವಿದೇಶಕ್ಕೆ ತೆರಳಿದ್ದ ಈ ನಟಿ ಒಂದು ವರ್ಷದೊಳಗೆ ಮಗುವಿಗೆ ಜನ್ಮ ನೀಡಿದ್ದಾರೆ.

27

ಕಾಜಲ್ ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಪ್ಡೇಟ್ ಶೇರ್ ಮಾಡುತ್ತಾರೆ. ನಟಿ ತನ್ನ ಮಗನೊಂದಿಗೆ ಮೋಜು ಮಾಡುತ್ತಾರೆ. ಈ ಕ್ರಮದಲ್ಲಿ ನಟಿ ಶೇರ್ ಮಾಡಿರುವ ಹೊಸ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.

37

ಕಾಜಲ್ ಅಗರ್ವಾಲ್ ಇದೀಗ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮಿನಿ ಸ್ಕರ್ಟ್‌ನಲ್ಲಿ ಗ್ಲಾಮರಸ್ ಟ್ರೀಟ್‌ನೊಂದಿಗೆ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಕಾಜಲ್ ಅಗರ್ವಾಲ್ ಅವರ ಹೊಸ ಫೋಟೋಶೂಟ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಿದೆ.

47

ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಕಾಜಲ್‌, ಇದೀಗ ಮಿನಿ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ಜೊತೆಗೆ ಮರಳಿ ಶಾಲೆಗೆ ಎಂಬ ಕ್ಯಾಪ್ಶನ್‌ ನೀಡಿದ್ದಾರೆ. ನಟಿಯ ಹೊಸ ಫೋಟೋಗಳಿಗೆ ನೆಟ್ಟಿಗರು ಸಖತ್ ಫಿದಾ ಆಗಿದ್ದಾರೆ.

57

2007ರಲ್ಲಿ ಲಕ್ಷ್ಮೀ ಕಲ್ಯಾಣಂ ಮೂಲಕ ಕಾಜಲ್‌ ಅಗರ್‌ವಾಲ್‌ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. 2009ರಲ್ಲಿ ಬಂದ ಮಗಧೀರ ನಟಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಡಾರ್ಲಿಂಗ್​​, ಬೃಂದಾವನಂ, ಮಿಸ್ಟರ್ ಪರ್ಫೆಕ್ಟ್, ಸಿಂಗಮ್​ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 

67

ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಸ್ಟಾರ್ ನಟರೊಂದಿಗೆ ಕಾಜಲ್‌ ಅಗರ್‌ವಾಲ್‌ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಸೌಂದರ್ಯದಿಂದಲೂ ಸದ್ದು ಮಾಡುವ ಚೆಲುವೆ ಈಕೆ. ಮದುವೆ, ಮಗು ಎಂದು ಕೆಲ ಕಾಲ ಸಿನಿಮಾದಿಂದ ದೂರ ಉಳಿದಿದ್ದರು. 

77

ಇತ್ತೀಚೆಗೆ ನಂದಮೂರಿ ಬಾಲಕೃಷ್ಣ ಅವರ 'ಭಗವಂತ್ ಕೇಸರಿ' ಚಿತ್ರದ ಮೂಲಕ ಸೆಕೆಂಡ್​ ಇನ್ನಿಂಗ್ಸ್ ಆರಂಭಿಸಿದ್ದಾರೆ. ನಟಿ ಕೈಯಲ್ಲೀಗ ನಾಲ್ಕೈದು ಸಿನಿಮಾಗಳಿವೆ. ಕಮಲ್ ಹಾಸನ್​ ಮುಖ್ಯಭೂಮಿಕೆಯ ಇಂಡಿಯನ್​ 2 ನಟಿಯ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories