ಡಾಲಿ ಧನಂಜಯ್‌ 'ಉತ್ತರಕಾಂಡ' ಚಿತ್ರಕ್ಕೆ ರಮ್ಯಾ ನಾಯಕಿ: ಸರಳವಾಗಿ ನೆರವೇರಿದ ಮುಹೂರ್ತ

Published : Nov 06, 2022, 07:51 PM IST

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಧನಂಜಯ್​ ಅಭಿನಯದ ‘ಉತ್ತರಕಾಂಡ’ ಚಿತ್ರದಲ್ಲಿ ಡಾಲಿ​ಗೆ ನಾಯಕಿಯಾಗಿ ಮೋಹಕ ತಾರೆ ರಮ್ಯಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಕೆಲವು ದಿನಗಳಿಂದ ಓಡಾಡುತ್ತಿತ್ತು. ಅದೀಗ ನಿಜವಾಗಿದೆ. 

PREV
15
ಡಾಲಿ ಧನಂಜಯ್‌ 'ಉತ್ತರಕಾಂಡ' ಚಿತ್ರಕ್ಕೆ ರಮ್ಯಾ ನಾಯಕಿ: ಸರಳವಾಗಿ ನೆರವೇರಿದ ಮುಹೂರ್ತ

ಹೌದು! ಈ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ರಮ್ಯಾ ಸ್ಯಾಂಡಲ್‌ವುಡ್‌ಗೆ ಮತ್ತೆ ರೀ ಎಂಟ್ರಿ ಕೊಡುತ್ತಿದ್ದಾರೆ. ‘ಉತ್ತರಕಾಂಡ’ ಚಿತ್ರದ ಮುಹೂರ್ತ ಭಾನುವಾರ ಮಧ್ಯಾಹ್ನ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. 

25

ಈ ಸಂದರ್ಭದಲ್ಲಿ ರಮ್ಯಾ ಕೂಡಾ ಹಾಜರಿದ್ದರು. ಈ ಮೂಲಕ ಕಮರ್ಷಿಯಲ್ ಚಿತ್ರದಲ್ಲಿ ನಟಿಸುತ್ತಿರುವುದು ನಿಜ ಎಂದು ಸ್ಪಷ್ಟಪಡಿಸಿದರು.  ಪ್ರಮುಖವಾಗಿ, ಇದಕ್ಕೂ ಮೊದಲು ರಮ್ಯಾ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂಬ ರಾಜ್​ ಬಿ. ಶೆಟ್ಟಿ ಆಕ್ಷನ್ ಕಟ್‌ ಹೇಳುತ್ತಿರುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. 

35

ಆದರೆ, ಹೊಸಬರ ಚಿತ್ರಗಳನ್ನು ನಿರ್ಮಿಸುವುದಕ್ಕೆ ಹುಟ್ಟುಹಾಕಿರುವ ಸಂಸ್ಥೆಯಾದ್ದರಿಂದ, ಆ ಚಿತ್ರದಲ್ಲಿ ಹೊಸಬರು ಇರುತ್ತಾರೆ. ತಾನು ಇನ್ನೊಂದು ಚಿತ್ರದ ಮೂಲಕ ಬರುವುದಾಗಿ ಅವರು ಹೇಳಿಕೊಂಡಿದ್ದರು. ಹಾಗಿದ್ದರೆ, ರಮ್ಯಾ ಯಾವ ಚಿತ್ರದ ಮೂಲಕ ರೀ-ಎಂಟ್ರಿ ಕೊಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. 

45

ಅದಕ್ಕೆ ಸರಿಯಾಗಿ, ‘ಉತ್ತರಕಾಂಡ’ ಚಿತ್ರದಲ್ಲಿ ರಮ್ಯಾ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿದ್ದು, ಅದೀಗ ನಿಜವಾಗಿದೆ.  ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ‘ಉತ್ತರಕಾಂಡ’ ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯಡಿ ಕಾರ್ತಿಕ್ ಗೌಡ ಮತ್ತು ಯೋಗಿ.ಜಿ.ರಾಜ್ ಜತೆಯಾಗಿ ನಿರ್ಮಿಸುತ್ತಿದ್ದಾರೆ. 

55

ಇನ್ನು, ರೋಹಿತ್​ ಪದಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಧನಂಜಯ್​ ಮತ್ತು ರೋಹಿತ್​ ಕಾಂಬಿನೇಷನ್​ನ ಎರಡನೆಯ ಚಿತ್ರವಾಗಿದ್ದು, ಇದಕ್ಕೂ ಮೊದಲು ಇಬ್ಬರೂ ‘ರತ್ನನ್​ ಪ್ರಪಂಚ’ ಸಿನಿಮಾದಲ್ಲಿ ಮಿಂಚಿದ್ದರು.

Read more Photos on
click me!

Recommended Stories