ಭಾರತದ ಖ್ಯಾತ ಗಾಯಕಿ ಪಲಾಕ್ ಮುಚ್ಚಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಅದ್ದೂರಿ ಮದುವೆ ಸಮಾರಂಭದಲ್ಲಿ ಪಲಾಕ್ ಮುಚ್ಚಲ್ ಹಸಿರು ಬಣ್ಣ ಲೆಹಂಗಾದಲ್ಲಿ ಕಂಗೊಳಿಸಿದ್ದಾರೆ.
ಭಾರತದ ಖ್ಯಾತ ಗಾಯಕಿ ಪಲಾಕ್ ಮುಚ್ಚಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಅದ್ದೂರಿ ಮದುವೆ ಸಮಾರಂಭದಲ್ಲಿ ಪಲಾಕ್ ಮುಚ್ಚಲ್ ಹಸಿರು ಬಣ್ಣ ಲೆಹಂಗಾದಲ್ಲಿ ಕಂಗೊಳಿಸಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರ ಪ್ರಾರಂಭವಾಗಿದ್ದು ಮೆಹಂದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ.
28
ಅಂದಹಾಗೆ ಖ್ಯಾತ ಗಾಯಕಿ ಖ್ಯಾತ ಸಂಗೀತ ನಿರ್ದೇಶಕ ಮಿಥುನ್ ಜೊತೆ ಹಸೆಮಣೆ ಏರುತ್ತಿದ್ದಾರೆ. ಈಗಾಗಲೇ ಹಳದಿ ಮತ್ತು ಮೆಹಂದಿ ಶಾಸ್ತ್ರ ನೆರವೇರಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
38
ಮೆಹಂದಿ ಶಾಸ್ತ್ರದಲ್ಲಿ ಪಲಾಕ್ ಮುಚ್ಚಲ್ ಹಸಿರು ಬಣ್ಣದ ಲೆಹಂಗಾದಲ್ಲಿ ಸುಂದರವಾಗಿ ಕಂಗೊಳಿಸುತ್ತಿದ್ದರು. ಸಂಭ್ರಮದಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಎಲ್ಲರ ಜೊತೆಯೂ ಗಾಯಕಿ ನಗುತ್ತಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
48
ಅಂದಹಾಗೆ ಕಳೆದ ಎರಡು ದಿನಗಳಿಂದ ಶಾಸ್ತ್ರಗಳು ನಡೆಯುತ್ತಿವೆ. ನಾಳೆ (ನವೆಂಬರ್ 6) ಭಾನುವಾರ ಮುಂಬೈನಲ್ಲಿ ನಡೆಯುವ ಅದ್ದೂರಿ ಮದುವೆಯಲ್ಲಿ ಮಿಥುನ್ ಮತ್ತು ಪಲಾಕ್ ಮುಚ್ಚಲ್ ಪತಿ-ಪತ್ನಿಯರಾಗಲಿದ್ದಾರೆ.
58
ಅಂದಹಾಗೆ ಪಲಾಕ್ ಮತ್ತು ಮಿಥುನ್ ಅವರು ಬರೋಬ್ಬರಿ 9 ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. 9 ವರ್ಷಗಳ ಬಳಿಕ ಇಬ್ಬರೂ ಹಸಮಣೆ ಏರುತ್ತಿದ್ದಾರೆ. ರಾಜಸ್ಥಾನಿ ಸಂಪ್ರದಾಯಂತೆ ಇಬ್ಬರೂ ಮದುವೆಯಾಗುತ್ತಿದ್ದಾರೆ.
68
ಪಲಾಕ್ ಮದುವೆ ಸಂಭ್ರಮದಲ್ಲಿ ಖ್ಯಾತ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಕೂಡ ಭಾಗಿಯಾಗಿದ್ದರು. ಪಲಾಕ್ ಜೊತೆ ಫೋಟೋಗೆ ಪೋಸ್ ನೀಡಿರುವ ಸ್ಮೃತಿ ಫೋಟೋ ವೈರಲ್ ಆಗಿದೆ.
78
ಮುಂಬೈ ಮೂಲದ ಗಾಯಕಿ ಪಲಾಕ್ ಮುಚ್ಚಲ್ ಅನೇಕ ಸುಪ್ರಸಿದ್ಧ ಗೀತೆಗಳಿದೆ ಧ್ವನಿಯಾಗಿದ್ದಾರೆ. ಹಿಂದಿಯಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ತಮಿಳು, ತೆಲುಗು ಹಾಗೂ ಕನ್ನಡದಲ್ಲೂ ಸಾಕಷ್ಟು ಗೀತೆಗೆ ಧ್ವನಿಯಾಗಿದ್ದಾರೆ.
88
ಕನ್ನಡದಲ್ಲೂ ಪಲಾಕ್ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅಧ್ಯಕ್ಷ, ಲವ್ ಯು ಆಲಿಯಾ, ಡಿಕೆ, ಅಯೋಗ್ಯ, ಪ್ರೇಮ ಬರಹ, 99 ಸೇರಿದಂತೆ ಅನೇಕ ಗೀತೆಗಳನ್ನು ಹಾಡಿದ್ದಾರೆ. ಅಯೋಗ್ಯ ಸಿನಿಮಾದ ಏನಮ್ಮಿ ಏನಮ್ಮಿ....ಹಾಗೂ ಪ್ರೇಮಾ ಬರಹ...ಹಾಡು ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.