ನಟಿ ಮೆಹ್ರೀನ್ ಪಿರ್ಜಾದಾ ಗರಂ ಆಗಿದ್ದಾರೆ. ಬೇರೆ ಯಾವುದೇ ನಟ, ನಿರ್ದೇಶಕರ ವಿರುದ್ಧವಲ್ಲ.ಮಾಧ್ಯಮಗಳ ವಿರುದ್ಧವೇ 27 ವರ್ಷದ ನಟಿ ಕಿಡಿಕಾರಿದ್ದಾರೆ.
ಅದಕ್ಕೆ ಕಾರಣವೂ ಉಂಟು. ತೆಲುಗಿನಲ್ಲಿ ಸಖತ್ ರೆಸ್ಪಾನ್ಸ್ ಪಡೆದ ಫನ್ ಆಂಡ್ ಫ್ರಸ್ಟ್ರೇಷನ್ ಸಿನಿಮಾದ ಮೂಲಕ ಜನಪ್ರಿಯತೆ ಪಡೆದ ನಟಿ ಇತ್ತೀಚೆಗೆ ವೆಬ್ ಸಿರೀಸ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸುಲ್ತಾನ್ ಆಫ್ ಡೆಲ್ಲಿ ವೆಬ್ ಸಿರೀಸ್ ಕಳೆದವಾರ ಅಂದರೆ, ಅಕ್ಟೋಬರ್ 13 ರಂದು ಬಿಡುಗಡೆಯಾಗಿದೆ.
ಡಿಸ್ನಿ ಹಾಟ್‌ಸ್ಟಾರ್ ನಿರ್ಮಾಣದ ಈ ವೆಬ್ ಸಿರೀಸ್‌ಗೆ ಅಷ್ಟೇನೋ ಉತ್ತಮ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿಲ್ಲ. ಆದರೆ, ನಟಿ ಮೆಹ್ರೀನ್ ಪಿರ್ಜಾದಾ ಅವರ ಸೀನ್‌ಅನ್ನು ಮಾತ್ರ ನೆನಪಿಸಿಕೊಂಡಿದ್ದಾರೆ.
ಈ ವೆಬ್‌ಸಿರೀಸ್‌ನ ಒಂದು ದೃಶ್ಯದಲ್ಲಿ ನಟಿ ಮೆಹ್ರೀನ್ ಪಿರ್ಜಾದಾ ಬಹಳ ಮಾದಕವಾಗಿ ಬೆಡ್ ಸೀನ್‌ಗಳಲ್ಲಿ ನಟಿಸಿದ್ದಾರೆ. ಇದನ್ನೇ ಮಾಧ್ಯಮಗಳು ಹೈಲೈಟ್ ಮಾಡಿದ್ದವು.
ಮಾಧ್ಯಮಗಳು ಆ ಸೀನ್‌ಅನ್ನು ಎಷ್ಟರ ಮಟ್ಟಿಗೆ ಹೈಪ್ ಮಾಡಿದ್ದವು ಎಂದರೆ, ನಟಿ ಮೆಹ್ರೀನ್ ಪಿರ್ಜಾದಾ ಹಿಂದಿನ ಯಾವ ಚಿತ್ರದಲ್ಲೂ ಇಷ್ಟು ಬೋಲ್ಡ್ ಆಗಿ ನಟಿಸಿರಲಿಲ್ಲ ಎಂದಿದೆ.
ಇದನ್ನು ಮಾಧ್ಯಮಗಳು ಸೆಕ್ಸ್ ಸೀನ್ ಎಂದು ಹೇಳಿದ್ದೇ ನಟಿ ಮೆಹ್ರೀನ್ ಪಿರ್ಜಾದಾ ಅವರ ಸಿಟ್ಟಿಗೆ ಕಾರಣವಾಗಿದೆ. ಅವರ ಪ್ರಕಾರ ಇದು ಸೆಕ್ಸ್ ಸೀನ್ ಅಲ್ಲವಂತೆ.
ನನ್ನ ಅಭಿಮಾನಿಗಳು ಈ ವೆಬ್ ಸಿರೀಸ್ ನೋಡಿ ಇಷ್ಟಪಟ್ಟಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಕೆಲವೊಮ್ಮೆ ನಮ್ಮ ಸ್ಕ್ರಿಪ್ಟ್‌ಗಳು ನಮ್ಮ ಇಷ್ಟಕ್ಕೆ ವಿರುದ್ಧವಾದ ಕೆಲವೊಂದು ಸೀನ್‌ಗಳಲ್ಲಿ ನಟಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ ಎಂದು ಮೆಹ್ರೀನ್ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ನಟನೆಯನ್ನು ಕಲೆ ಮತ್ತು ಅದೇ ಸಮಯದಲ್ಲಿ ಕೆಲಸ ಎಂದು ಪರಿಗಣಿಸುವ ವೃತ್ತಿಪರ ನಟಿಯಾಗಿ ನಾನು ಕೆಲವು ದೃಶ್ಯಗಳನ್ನು ಮಾಡಲೇಬೇಕಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ಸುಲ್ತಾನ್ ಆಫ್ ಡೆಲ್ಲಿ ವೆಬ್ ಸಿರೀಸ್‌ನಲ್ಲಿಯೂ ಅಂಥ ಒಂದು ದೃಶ್ಯದಲ್ಲಿ ನಟಿಸಿದ್ದೇನೆ. ಇದು ಅತ್ಯಂತ ಕ್ರೂರವಾದ ವೈವಾಹಿಕ ಅತ್ಯಾಚಾರದ ಬಗ್ಗೆ ತಿಳಿಸುವ ದೃಶ್ಯವಾಗಿತ್ತು ಎಂದು ಅವರು ಬರೆದಿದ್ದಾರೆ.
ವೈವಾಹಿಕ ಅತ್ಯಾಚಾರದಂಥ ಗಂಭೀರ ವಿಚಾರವನ್ನು ಮಾಧ್ಯಮಗಳಲ್ಲಿ ಅನೇಕರು ಒಂದು ಸೆಕ್ಸ್ ಸೀನ್ ಎನ್ನುವಂತೆ ವಿವರಿಸಿರುವುದು ನನಗೆ ಬಹಳ ನೋವು ತಂದಿದೆ ಎಂದು ಅವರು ಬರೆದಿದ್ದಾರೆ.
ಪ್ರಪಂಚದಾದ್ಯಂತ ಅನೇಕ ಮಹಿಳೆಯರು ಪ್ರಸ್ತುತ ವ್ಯವಹರಿಸುತ್ತಿರುವ ಗಂಭೀರವಾದ ಸಮಸ್ಯೆಯನ್ನು ಇದು ಸಣ್ಣದು ಎನಿಸುವಂತೆ ತೋರಿಸಲಾಗಿದೆ. ಕೆಲವು ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳು ಈ ದೃಶ್ಯವನ್ನು ಆರಿಸಿಕೊಂಡಿರುವುದು ನನಗೆ ಬೇಸರ ಉಂಟು ಮಾಡಿದೆ ಎಂದಿದ್ದಾರೆ.
ಈ ಜನರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಯಾವೊಬ್ಬ ಸಹೋದರಿಯರು, ಹೆಣ್ಣುಮಕ್ಕಳು ಕೂಡ ತಮ್ಮ ಜೀವನದಲ್ಲಿ ಇಂಥ ಆಘಾತವನ್ನು ಎಂದಿಗೂ ಅನುಭವಿಸಬಾರದು.ಏಕೆಂದರೆ ಅಂತಹ ಕ್ರೌರ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಚಿಂತನೆಯೇ ಅಸಹ್ಯವಾಗಿದೆ ಎಂದಿದ್ದಾರೆ.
ಮೆಹ್ರೀನ್ ತನ್ನ ಸುದೀರ್ಘ ಟಿಪ್ಪಣಿಯಲ್ಲಿ, ದೆಹಲಿಯ ಸುಲ್ತಾನ್ ತಂಡವು 'ಅತ್ಯಂತ ಕಷ್ಟಕರವಾದ' ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಅವರು ಯಾವುದೇ ಹಂತದಲ್ಲಿ ಅತ್ಯಂತ ವೃತ್ತಿಪರವಾಗಿ ತೊಡಗಿಕೊಂಡರು ಎಂದು ಹೇಳಿದ್ದಾರೆ.