ಪ್ರತಿಷ್ಠಿತ ಸಿನಿಮಾ ಕುಟುಂಬದಿಂದ ಬಂದ ವ್ಯಕ್ತಿಯಾಗಿದ್ದಲ್ಲಿ ಅಲ್ಲಿ ಸಾಧಕ-ಬಾಧಕಗಳಿವೆ. ಸಾಧಕಗಳೇನೆಂದರೆ, ಸಿನಿಮಾ ರಂಗದಲ್ಲಿ ಅವರಿಗೆ ಎಂದಿಗೂ ಅವಕಾಶಗಳು ಕಡಿಮೆ ಆಗೋದಿಲ್ಲ. ಬಾಧಕ ಏನೆಂದರೆ, ಅವರ ವಿಚಾರ ಹೆಜ್ಜೆ ಹೆಜ್ಜೆಗೂ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ.
215
ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ ಕೂಡ ಇದರಿಂದ ಭಿನ್ನವೇನಲ್ಲ. ಡಿವೋರ್ಸ್‌ನ ಸಾಧಕ-ಬಾಧಕಗಳು ಈಗಾಗಲೇ ಅವರ ಅರಿವಿಗೆ ಬಂದಿವೆ.
315
ಅರೇಂಜ್ಡ್ ಲವ್ ಮ್ಯಾರೇಜ್ ಆಗಿದ್ದ ನಿಹಾರಿಕಾ ಕೊನಿಡೇಲಾ ಅವರದ್ದು ಡೆಸ್ಟಿನೇಷನ್ ವೆಡ್ಡಿಂಗ್. ಬಹುಕಾಲದ ಗೆಳೆಯ ಚೈತನ್ಯ ಜೋನಲಗಡ್ಡನನ್ನು ಇವರು ವಿವಾಹವಾಗಿದ್ದರು.
415
ರಾಜಸ್ಥಾನದ ಉದಯಪುರದಲ್ಲಿ 2020ರ ಡಿಸೆಂಬರ್‌ನಲ್ಲಿ ನಡೆದಿದ್ದ ವಿವಾಹಕ್ಕೆ ಮೆಗಾಸ್ಟಾರ್ ಕುಟುಂಬದ ತಾರೆಯರೊಂದಿಗೆ ವಿವಿಧ ರಂಗದ ಗಣ್ಯರು ಉಪಸ್ಥಿತರಿದ್ದರು.
515
Niharika Konidela
ಆದರೆ, ನಿಹಾರಿಕಾ ಕೊನಿಡೆಲಾ ಮದುವೆ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ ಒಂದೇ ವರ್ಷಕ್ಕೆ ಗಂಡನಿಂದ ಬೇರೆಯಾಗಿರುವ ಸುದ್ದಿ ಬಂದಿತ್ತು.
615
Niharika Konidela
ಈಗ ಚೈತ್ಯನ್ಯಗೆ ವಿಚ್ಛೇದನ ನೀಡಿ ಏಳು ತಿಂಗಳಾಗಿದೆ. ಇದರ ನಡುವೆ ಅವರು 2ನೇ ಮದುವೆಯಾಗಬಹುದು ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು.
715
2ನೇ ಮದುವೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ನಿಹಾರಿಕಾ ಮಾತ್ರ ತಾನು 2ನೇ ಮದುವೆಗೆ ಸಿದ್ಧ ಎಂದಿದ್ದಾರೆ. ಅದಕ್ಕೂ ಮುನ್ನ ಮತ್ತೊಂದು ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
815
ಇತ್ತೀಚೆಗೆ ಸಿನಿಮಾವೊಂದರ ಪ್ರಚಾರದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ಹಂತದಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅವರು ನೀಡಿದ ಉತ್ತರ ವೈರಲ್ ಆಗಿದೆ.
915
ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ವೈಯಕ್ತಿಕ ಜೀವನದ ಬಗ್ಗೆಯೂ ಅವರು ಮಾತನಾಡಿದ್ದರು. ನಿಮ್ಮನ್ನು ಮತ್ತೆ ಮದುಮಗಳಾಗಿ ನೋಡಬಹುದೇ ಎಂದು ಪ್ರಶ್ನೆ ಕೇಳಲಾಗಿತ್ತು.
1015
ಅದಕ್ಕೆ ಉತ್ತರ ನೀಡುತ್ತಾ, ಹೌದು ನನಗೆ ಡಿವೋರ್ಸ್ ಆಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನನಗೆ ಮಗು ಬೇಕು ಅಂತಾ ತುಂಬಾ ಅನಿಸುತ್ತಿದೆ ಎಂದು ಹೇಳಿದ್ದಾರೆ.
1115
ಈ ಜೀವನದಲ್ಲಿ ಮದುಎ ಆಗಿರಲಿ, ಮಕ್ಕಳನ್ನು ಹೊಂದುವುದಾಗಿರಲಿ ಏನು ಬೇಕಾದರೂ ಆಗಬಹುದು.ನನಗೆ ಪ್ರೀತಿಯ ಬಗ್ಗೆ ಯಾವುದೇ ನೆಗೆಟಿವ್ ಅಂಶಗಳಿಲ್ಲ ಎಂದಿದ್ದಾರೆ.
1215
ನಾನು ಖಂಡಿತವಾಗಿಯೂ ಮಕ್ಕಳನ್ನು ಹೊಂದಲು ಬಯಸುತ್ತೇನೆ, ಹಾಗಾಗಿ ನಾನು ಮದುವೆಯಾಗಬೇಕು. ಆದರೆ, ಮಗು ಮಾಡಿಕೊಳ್ಳುವುದಕ್ಕಾಗಿಯೇ ಮದುವೆಯಾಗಲು ಬಯಸೋದಿಲ್ಲ ಎಂದಿದ್ದಾರೆ.
1315
Niharika Konidela
ಚೈತನ್ಯ ಜೊತೆಗಿನ ತನ್ನ ವಿಫಲ ದಾಂಪತ್ಯದ ಬಗ್ಗೆ ಮತ್ತಷ್ಟು ಮಾತನಾಡಿದ ಅವರು, “ನನ್ನ ಮದುವೆ ಏಕೆ ಉಳಿಯಲಿಲ್ಲ ಅನ್ನೋದಕ್ಕೆ ಎಲ್ಲರೂ ಒಂದು ಕಾರಣವನ್ನು ನೀಡುವಂತೆ ಕೇಳುತ್ತಾರೆ. ಆದರೆ, ಅದಕ್ಕೆ ಒಂದೇ ಕಾರಣ ಅಂತಾ ಇರೋದಿಲ್ಲ ಎಂದಿದ್ದಾರೆ.
1415
ಈ ವೇಳೆ ನಿಹಾರಿಕಾ ಅವರಿಗೆ ನೀವು ಲವ್ ಮ್ಯಾರೇಜ್ ಆಗಲು ಬಯಸುತ್ತೀರಾ? ಅಥವಾ ಅರೇಂಜ್ಡ್ ಮ್ಯಾರೇಜ್ ಆಗಲು ಬಯಸುತ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು.
1515
ಇದಕ್ಕೆ ಉತ್ತರಿಸಿದ ಆಕೆ "ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ನನ್ನ ಗಮನವೆಲ್ಲ ಈಗ ನನ್ನ ಕೆಲಸದ ಮೇಲಿದೆ. ಆದರೆ ನಾನು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಅನ್ನು ವಿರೋಧಿಸುವುದಿಲ್ಲ ಎಂದಿದ್ದಾರೆ.