ಸಾವು ಅನ್ನೋದು ಎಲ್ಲರಿಗೂ ಬರುತ್ತದೆ, ನನ್ನ ಅಂತ್ಯಕ್ರಿಯೆಗೆ ದುಡ್ಡಿಟ್ಟು ಹೋಗ್ತೀನಿ; ನಟಿ ಲಕ್ಷ್ಮಿ ಪುತ್ರಿ ಹೇಳಿಕೆ ವೈರಲ್

First Published Mar 15, 2024, 3:46 PM IST

ಸ್ಟಾರ್ ನಟಿಯ ಮಗಳು ಎಂದು ಹೋರುವ ಪಟ್ಟ ದೊಡ್ಡದ್ದು. ಅದನ್ನು ಪಕ್ಕಕ್ಕೆ ಇಟ್ಟು ಬದುಕಿ ತೋರಿಸುತ್ತೀನಿ ಅನ್ನೋದು ಐಶ್ವರ್ಯ ಚಾಲೆಂಜ್. ಜನರು ಟೀಕೆಗೆ ಉತ್ತರ ಕೊಟ್ಟ ನಟಿ...

ಕನ್ನಡ ಚಿತ್ರರಂಗ ಹಿರಿಯ ನಟಿ ಲಕ್ಷ್ಮಿ ಅವರ ಮುದ್ದಿನ ಮಗಳು ಐಶ್ವರ್ಯ ಭಾಸ್ಕರನ್ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟಿ ಮಗಳ ಅನ್ನೋ ಪಟ್ಟವನ್ನು ದೂರ ಇಟ್ಟು ಹೇಗೆ ಜೀವನ ಮಾಡುತ್ತಿದ್ದಾರೆ ಗೊತ್ತಾ? ಟೀಕೆಗಳಿಗೆ ಉತ್ತರ ಇಲ್ಲಿದೆ...

ನನಗೆ ಸಾಮರ್ಥ್ಯ ಏನಿದೆ ಅದರ ಮೇಲೆ ಕೆಲಸ ಮಾಡಬಹುದು ಕೆಪ್ಯಾಸಿಟಿ ಇಲ್ಲದ ವಿಚಾರಗಳ ಮೇಲೆ ಕೆಲಸ ಮಾಡಲು ಆಗುವುದಿಲ್ಲ. ನಾನು ಬಾಲ್ಯದಿಂದಲೂ ಅವರ ಮಗಳು ಇವರ ಮಗಳು ಎಂದು ಬೆಳೆದಿಲ್ಲ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು. 

ತುಂಬಾ ಅಸಯ್ಯ ಅನಿಸುವ ವಿಚಾರ ಏನೆಂದರೆ ತಾಯಿ ಸಹಾಯ ಪಡೆಯಬಾರದು, ದೊಡ್ಡ ಮನೆ ದೊಡ್ಡ ನಟಿ ಅವರನ್ನು ನೋಡಿ ಕಲಿಯಬೇಕು.ಅವರ ಮನೆಯಲ್ಲಿ ಕುಳಿತುಕೊಂಡು ಅವರ ಪ್ರಾಣ ತೆಗೆಯಬಾರದು. 

ಮಕ್ಕಳಿಗೆ ಅರ್ಥವಾಗುವುದಿಲ್ಲ ನೀನು ಸ್ಟಾರ್ ನಟಿಯ ಮಗಳು, ನಿನ್ನ ಬಳಿ ಇಷ್ಟಿದೆ ಅಷ್ಟಿದೆ ಎಂದು. ನಮ್ಮ ಕೆಲಸ ನಾವು ಮಾಡಬೇಕು ತಾಯಿ ಅವರು ಲೆಜೆಂಡ್ ಅವರು ರಿಯಲ್ ಸ್ಟಾರ್. ನಾನು ಲೆಜೆಂಡ್ ಅಲ್ಲ ಯಾವ ಸ್ಟಾರ್‌ ಅಲ್ಲ.

ನನ್ನ ಜೀವನ ಪೂರ್ತಿ ಕೆಲಸ ಮಾಡುವೆ ತಂದೆ ತಾಯಿ ಗಂಡ ಮಕ್ಕಳು ಯಾರ ಮೇಲೂ ಡಿಪೆಂಡ್ ಆಗುವುದಿಲ್ಲ. ನಾನು ಸತ್ತ ಮೇಲೆ ನನ್ನ ಅಂತ್ಯಕ್ರಿಯೆಗೆ ಹಣ ಮುಂದಿಟ್ಟು ಹೋಗುತ್ತೀನಿ.

ಒಂದು ವಿಚಾರವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು, ಸ್ಟಾರ್ ನಟ-ನಟಿಯರ ಮಕ್ಕಳು, ರಾಜಕಾರಣಿಗಳ ಮಕ್ಕಳು ಯಾರೇ ಆಗಿದ್ದರು ಸಾವು ಅನ್ನೋದು ಎಲ್ಲರಿಗೂ ಬರುತ್ತದೆ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು.

ನಾವು 100 ವರ್ಷ ಇರುವುದಿಲ್ಲ ಭೂಮಿಯಲ್ಲಿ ಅಂದಮೇಲೆ ಜನರ ಮಾತುಗಳ ಮೇಲೆ ಗಮನ ಕೊಡುವುದು ಸ್ಟುಪಿಡ್ ಕೆಲಸ. ಆಗಲೇ ನನ್ನ ಜೀವನದ 50 ವರ್ಷ ಕಳೆದಿರುವೆ ಇನ್ನು ಎಷ್ಟು ವರ್ಷ ಉಳಿದಿದೆ ನನ್ನ ಗಮನ ನನ್ನ ಕೆಲಸ ಮತ್ತು ಭೂಮಿ ತಾಯಿ ಮೇಲೆ ಇರುತ್ತದೆ' ಎಂದು ಐಶ್ವರ್ಯ ಹೇಳಿದ್ದಾರೆ.

ನನಗೆ ಗೊತ್ತಿರುವುದು ನಾನು ಮಾಡುತ್ತಿರುವೆ. ಕೆಲಸ ಮಾಡುವುದರಿಂದ ನನ್ನ ಸಾಕು ಪ್ರಾಣಿಗಳು ಮತ್ತು ನನ್ನನ್ನು ನೋಡಿಕೊಳ್ಳಲು ಸಹಾಯವಾಗುತ್ತದೆ. 18 ವರ್ಷದವರೆಗೂ ನಾನು ನನ್ನ ತಾಯಿ ಜವಾಬ್ದಾರಿ, ಒಳ್ಳೆ ವಿದ್ಯಾಭ್ಯಾಸ ಕೊಟ್ಟಿದ್ದಾರೆ ಅಂದ್ಮೇಲೆ ಮುಚ್ಕೊಂಡು ನಾವು ನಮ್ಮ ಕೆಲಸ ಮಾಡಬೇಕು. 

ದೊಡ್ಡವರಾದ ಮೇಲೆ ಮಕ್ಕಳು ತಂದೆ ತಾಯಿ ಬಳಿ ಸಹಾಯ ಪಡೆಯುವುದು ಹಣ ಕೇಳುವುದು ತುಂಬಾನೇ ತಪ್ಪು. ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳಬೇಕು ಆದರೆ ಕಲವರು ಇದ್ದಾರೆ ಏನೂ ಕೆಲಸ ಮಾಡುವುದಿಲ್ಲ ಫ್ಯಾಮಿಲಿಗೆ ಭಾರವಾಗಿರುತ್ತಾರೆ ಅವರನ್ನು ನೋಡಿದ್ದೆ ನಿಜ ಕೋಪ ಬರುತ್ತದೆ' ಎಂದು ಹೇಳಿದ್ದಾರೆ.  

click me!